ಮಾರುಕಟ್ಟೆ ರೌಂಡಪ್: ಜಾಗತಿಕ ಮಿಶ್ರ ಸೂಚನೆಗಳ ನಡುವೆ ಅಲ್ಪ ಏರಿಕೆಯಾದ ಸೆನ್ಸೆಕ್ಸ್ - Market news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9165106-thumbnail-3x2-nifty.jpg)
ಮುಂಬೈ: ಈಕ್ವಿಟಿ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ, ಜಾಗತಿಕ ಮಾರುಕಟ್ಟೆಗಳ ಮಿಶ್ರ ಸೂಚನೆಗಳ ನಡುವೆ ಮಂಗಳವಾರ ಅಲ್ಪ ಏರಿಕೆ ದಾಖಲಿಸಿವೆ. ಸತತ ಒಂಬತ್ತನೇ ವಹಿವಾಟಿನಲ್ಲಿಯೂ ಏರಿತ ಕಂಡ ಬಿಎಸ್‌ಇ ಸೆನ್ಸೆಕ್ಸ್ 31.71 ಅಂಕ ಅಥವಾ ಶೇ 0.08ರಷ್ಟು ಹೆಚ್ಚಳವಾಗಿ 40,625.51ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 3.55 ಅಂಕ ಅಥವಾ ಶೇ 0.03ರಷ್ಟು ಏರಿಕೆ ಕಂಡು 11,934.50 ಅಂಕಗಳ ಮಟ್ಟಕ್ಕೆ ತಲುಪಿದೆ.