ಮಾರುಕಟ್ಟೆ ರೌಂಡಪ್ : 99 ಅಂಕ ಜಿಗಿದ ಸೆನ್ಸೆಕ್ಸ್.. ಡೀಸೆಲ್ ಬೆಲೆ ಮತ್ತೆ ಏರಿಕೆ - ಬಿಎಸ್ಇ
🎬 Watch Now: Feature Video
ಮುಂಬೈ: ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಸೂಚನೆಗಳ ಮಧ್ಯೆಯೂ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಂದು 99 ಅಂಕ ಏರಿಕೆ ಕಂಡಿದೆ. ದಿನದ ಪೇಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅತ್ಯಧಿಕ ಲಾಭ ಗಳಿಸಿದೆ. ಆದರೆ, ಎನ್‌ಎಸ್‌ಇ ನಿಫ್ಟಿ 34.65 ಅಂಕ ಏರಿಕೆ ಕಂಡು 10,802.70 ಅಂಕ ತಲುಪಿದೆ. ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 81.05 ರೂ.ಗಳಾಗಿದೆ. ಹಿಂದಿನ ದಿನ 80.94 ರೂಪಾಯಿನಷ್ಟಿತ್ತು. ಪೆಟ್ರೋಲ್ ಬೆಲೆಯು ಯಥಾವತ್ತಾಗಿ 80.43 ರೂಪಾಯಿನಷ್ಟಾಗಿದೆ.