ಮಾರುಕಟ್ಟೆ ರೌಂಡಪ್: 129 ಅಂಕ ಕುಸಿದ ಸೆನ್ಸೆಕ್ಸ್... ರಿಲಯನ್ಸ್ ಷೇರು ಮೌಲ್ಯ ಶೇ 2ರಷ್ಟು ಇಳಿಕೆ! - ಇಂಧನ ಬೆಲೆ
🎬 Watch Now: Feature Video
ಜಾಗತಿಕ ನಕಾರಾತ್ಮ ಮಾರುಕಟ್ಟೆ ನಡೆ ಅನುಸರಿಸಿದ ದೇಶಿ ಈಕ್ವಿಟಿ ಪೇಟೆ ವಾರಾಂತ್ಯದ ವಹಿವಾಟಿನಂದು ಇಳಿಕೆಯೊಂದಿಗೆ ಕೊನೆಗೊಳಿಸಿತು. ಹೆವಿವೇಯ್ಟ್ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್ಡಿಎಫ್ಸಿ ಷೇರುಗಳು ಲಾಭದ ಬಳಿಕದ ಮಾರಾಟದ ಒತ್ತಡಕ್ಕೆ ಒಳಗಾದವು. ತತ್ಪರಿಣಾಮ ಮುಂಬೈ ಸೆನ್ಸೆಕ್ಸ್ 129.18 ಅಂಕ ಇಳಿಕೆಯಾಗಿ 37,606.89 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 28.70 ಅಂಕ ಕುಸಿದು 11,073.45 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.