ಬೆಳಗಾವಿಯಲ್ಲಿ ಮುಂದಿನ 5 ವರ್ಷಗಳಲ್ಲಿ 1,500 ಇಂಜಿನಿಯರ್‌ಗಳ ನೇಮಕ: ಶ್ರೀಕಾಂತ್! - kaist global campany
🎬 Watch Now: Feature Video

ಬೆಳಗಾವಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 1,500 ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಬೆಳಗಾವಿಯಲ್ಲಿ ಕ್ವೆಸ್ಟ್ ಗ್ಲೋಬಲ್ ಕಂಪನಿ ತನ್ನ ಅಸ್ತಿತ್ವವನ್ನು ಬಲವರ್ಧನೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕ್ವೆಸ್ಟ್ ಗೋಬಲ್ ಮುಖ್ಯಸ್ಥ ಶ್ರೀಕಾಂತ ನಾಯ್ಕ್ ತಿಳಿಸಿದರು. ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂಪನಿಯು ಪ್ರಸ್ತುತ ಬೆಳಗಾವಿಯಲ್ಲಿರುವ ತನ್ನ ಏರೋಪ್ಲೇಟ್ ಮತ್ತು ಆಯಿಲ್ & ಗಾಸ್ ಡೊಮೇನ್ನ ಡೆಲಿವರಿ ಕೇಂದ್ರದಲ್ಲಿ ಸುಮಾರು 300 ಇಂಜಿನಿಯರ್‌ಗಳನ್ನು ಹೊಂದಿದ್ದು, ಇದೀಗ ಮತ್ತೆ ಮೆಕ್ಯಾನಿಕಲ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಡಿಜಿಟಲ್ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದು ಎಂದರು.