thumbnail

By

Published : Apr 21, 2019, 12:16 AM IST

ETV Bharat / Videos

ಸೋಹನಾ ವೆಡ್ಸ್​ ವಿನಯ್​.... ರಾಮೋಜಿ ಮೊಮ್ಮಗಳ ಅದ್ಧೂರಿ ವಿವಾಹ ಮಹೋತ್ಸವ

ರಾಮೋಜಿ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ರಾಮೋಜಿ ರಾವ್​ ಅವರ ಮೊಮ್ಮಗಳ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ ನಡೆಯಿತು. ರಾಮೋಜಿ ಅವರ ಪುತ್ರ ಸುಮನ್​ ಹಾಗೂ ವಿಜಯೇಶ್ವರಿ ದಂಪತಿಯ ಪುತ್ರಿ ಕೀರ್ತಿ ಸೋಹನಾ, ವಿನಯ್​ ಅವರನ್ನು ಬಾಳಸಂಗಾತಿಯಾಗಿ ವರಿಸಿದರು.  ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದ ಮಂಟಪದಲ್ಲಿ  ಸ್ವತಃ ರಾಮೋಜಿರಾವ್​ ಹಾಗೂ ರಮಾದೇವಿ ದಂಪತಿ ತೆಲುಗು ಸಂಪ್ರದಾಯದಂತೆ ಸಾವಿರಾರು ಗಣ್ಯರ ಮುಂದೆ ಕನ್ಯಾದಾನ ನೆರವೇರಿಸಿದರು. ಅತ್ಯಂತ ವೈಭವೋಪೇತವಾಗಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಚಿತ್ರರಂಗ, ರಾಜಕೀಯ  ಕ್ಷೇತ್ರ ಹಾಗೂ ಉದ್ಯಮ ಜಗತ್ತಿನ ಗಣ್ಯಾತಿಗಣ್ಯರು, ಚಿತ್ರ ತಾರೆಯರು ಭಾಗವಹಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.