ETV Bharat / technology

OPEN AI ಎಕ್ಸ್​ ಅಕೌಂಟ್​ ಹ್ಯಾಕ್​, ಕ್ರಿಪ್ಟೋ ಕರೆನ್ಸಿ ಜಾಹೀರಾತು ಪ್ರಸಾರ - OPEN AI X Account Hacked

author img

By ETV Bharat Tech Team

Published : 3 hours ago

OPEN AI X Account Hacked: 'ಚಾಟ್ ಜಿಪಿಟಿ'ಯ ಸೃಷ್ಟಿಕರ್ತ ಓಪನ್ ಎಐಗೆ ಸೇರಿದ 'ಎಕ್ಸ್' ಸಾಮಾಜಿಕ ಮಾಧ್ಯಮ ಖಾತೆಯನ್ನು ಇತ್ತೀಚೆಗೆ ಹ್ಯಾಕ್ ಮಾಡಲಾಗಿದೆ. ಸಂಸ್ಥೆಯ ಅಧಿಕೃತ X ಖಾತೆಯ ಮೂಲಕ ಅಪರಿಚಿತರು ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಜಾಹೀರಾತು ಪೋಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಕಂಪನಿ ಸಮಗ್ರ ತನಿಖೆ ನಡೆಸುತ್ತಿದೆ.

OPENAI CRYPTO CURRENCY POST  OPEN AI HACKING  OPENAI TWITTER ACCOUNT HACKED
ಓಪನ್ ಎಐ (Getty Images)

OPEN AI X Account Hacked: 'ಚಾಟ್ ಜಿಪಿಟಿ'ಯ ಸೃಷ್ಟಿಕರ್ತ ಓಪನ್ ಎಐ ಪ್ರಸ್ತುತ ಹ್ಯಾಕರ್‌ಗಳ ದಾಳಿಗೊಳಗಾಗಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ, ಅಪರಿಚಿತ ವ್ಯಕ್ತಿಯೊಬ್ಬರು @OpenAINewsroomನಿಂದ ಕ್ರಿಪ್ಟೋ ಕರೆನ್ಸಿಯ ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ. ಕ್ರಿಪ್ಟೋ ಟೋಕನ್‌ಗಳು ಓಪನ್ ಎಐಗೆ ಸೇರಿವೆ ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ಭಾನುವಾರ ಸಂಜೆ ಸುಮಾರು 7 ಗಂಟೆಗೆ ಈ ಪೋಸ್ಟ್ ಹೊರಬಿದ್ದಿದೆ. ಈ ಘಟನೆ ಕುರಿತು ನಮ್ಮ ಸಂಸ್ಥೆಗೆ ತಿಳಿದುಬಂದ ಕೂಡಲೇ ನಾವು ಎಚ್ಚೆತ್ತುಕೊಂಡಿದ್ದು, ತನಿಖೆ ಕೈಗೊಂಡಿದ್ದೇವೆ ಎಂದು ಓಪನ್ ಎಐ ಸಂಸ್ಥೆ ಹೇಳಿದೆ. ಆದರೆ ಆ ಪೋಸ್ಟ್‌ಗಳು ನ್ಯೂಯಾರ್ಕ್ ಸೇರಿದಂತೆ ಕೆಲವು ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತಿರುವುದು ಗಮನಾರ್ಹ.

ಸೋಮವಾರ ಬೆಳಗ್ಗೆ ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುವುದಕ್ಕಿಂತ ಮೊದಲು ಕಂಪನಿಯ ಭದ್ರತಾ ವಿಭಾಗವು ತನ್ನ ಉದ್ಯೋಗಿಗಳಿಗೆ ಆಂತರಿಕ ಮೆಮೊ ಕಳುಹಿಸಿದೆ. ಅದರಲ್ಲಿ ತಮ್ಮ ಉದ್ಯೋಗಿಗಳ ಖಾತೆ ಹ್ಯಾಕ್ ಆಗಿರುವ ಬಗ್ಗೆ ಪ್ರಸ್ತಾಪಿಸಿದ್ದು, ಎಚ್ಚರದಿಂದ ಇರುವಂತೆ ಸೂಚಿಸಿದೆ.

ಇದೇ ಮೊದಲಲ್ಲ: ಓಪನ್ AI ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸುಳ್ಳು ಕ್ರಿಪ್ಟೋ ಕರೆನ್ಸಿ ಪೋಸ್ಟ್‌ಗಳು ಬರುತ್ತಿರುವುದು ಇದೇ ಮೊದಲಲ್ಲ. ಭಾನುವಾರ ಸಂಸ್ಥೆಯ ಪ್ರಮುಖ ಉದ್ಯೋಗಿ ಜೇಸನ್ ವಿ ಅವರ ಖಾತೆಯಿಂದಲೂ ಇದೇ ರೀತಿಯ ಕ್ರಿಪ್ಟೋ ಪೋಸ್ಟ್‌ಗಳು ಕಾಣಿಸಿಕೊಂಡಿವೆ ಎಂದು ತೋರುತ್ತದೆ. ಇದಲ್ಲದೆ, ಈ ವರ್ಷದ ಜೂನ್‌ನಲ್ಲಿ ಓಪನ್ ಎಐ ಮುಖ್ಯ ವಿಜ್ಞಾನಿ ಜೇಕಬ್ ಪಚೋಕಿ ಅವರ ಖಾತೆಯೂ ಹ್ಯಾಕಿಂಗ್‌ನಿಂದ ಪ್ರಭಾವಿತವಾಗಿತ್ತು. ಅವರ ಜೊತೆಗೆ, ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮರಿಯಾ ಮುರಾಟಿಸ್ ಅವರ ಖಾತೆಯನ್ನು ಸಹ ಅಪರಿಚಿತ ವ್ಯಕ್ತಿಗಳು ಕಳೆದ ವರ್ಷ ಜೂನ್‌ನಲ್ಲಿ ತಾತ್ಕಾಲಿಕವಾಗಿ ಬಳಸಿರುವುದು ಗಮನಾರ್ಹ.

AI ಆಧಾರಿತ ಚಾಟ್‌ಬಾಟ್ ಸೇವೆಗಳನ್ನು ಒದಗಿಸುವ ChatGPT ಯ ಮೂಲ ಕಂಪನಿಯಾದ Open AI ಕೆಲವು ಸಮಯದ ಹಿಂದೆ ಹೊಸ ವಿಭಾಗವನ್ನು ಪ್ರವೇಶಿಸಿದೆ. ಗೂಗಲ್ ತನ್ನ ಏಕಸ್ವಾಮ್ಯವನ್ನು ಪರಿಶೀಲಿಸಲು 'ಸರ್ಚ್ ಜಿಪಿಟಿ' ಹೆಸರಿನ ಹೊಸ ಸರ್ಚ್ ಎಂಜಿನ್ ಅನ್ನು ಘೋಷಿಸುವ ಮೂಲಕ ಸಂಚಲನವನ್ನು ಸೃಷ್ಟಿಸಿದೆ. ಈ AI-ಚಾಲಿತ ಸರ್ಚ್​ ಎಂಜಿನ್ ಇಂಟರ್ನೆಟ್‌ನಲ್ಲಿ ನೈಜ ಸಮಯದ ಡೇಟಾವನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುತ್ತದೆ.

ಇದನ್ನೂ ಓದಿ: ಫುಡ್​ ಆರ್ಡರ್​ ಮಾಡ್ತೀರಾ? ಹುಷಾರ್!​ ಪ್ಯಾಕೇಜಿಂಗ್‌ನಲ್ಲಿದೆ ಸ್ತನ ಕ್ಯಾನ್ಸರ್‌ ಹರಡುವ 200 ರಾಸಾಯನಿಕ ಅಂಶಗಳು- ಸಂಶೋಧನೆ - Breast Cancer In Food Packaging

ETV Bharat Logo

Copyright © 2024 Ushodaya Enterprises Pvt. Ltd., All Rights Reserved.