ETV Bharat / bharat

ಹರಿಯಾಣ ವಿಧಾನಸಭೆ ಚುನಾವಣೆ: ಇಂದು ಪ್ರಧಾನಿ ಮೋದಿ ಬೃಹತ್​ ರ್‍ಯಾಲಿ - Haryana Assembly Election

author img

By ETV Bharat Karnataka Team

Published : 2 hours ago

ಹರಿಯಾಣ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸೋನಿಪತ್​​ ಜಿಲ್ಲೆಯ ಗೊಹಾನಾದಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅಂದಾಜು 10 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ.

PM Modi to address rally in Haryanas Gohana today
ಪ್ರಧಾನಿ ನರೇಂದ್ರ ಮೋದಿ (ANI)

ಚಂಡೀಗಢ: ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಮರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹರಿಯಾಣಕ್ಕೆ ಭೇಟಿ ನೀಡಲಿದ್ದು, ಮತಬೇಟೆ ನಡೆಸುವರು.

90 ಕ್ಷೇತ್ರಗಳನ್ನು ಒಳಗೊಂಡಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಅಕ್ಟೋಬರ್​ 5ರಂದು ಮತದಾನ ನಡೆಯಲಿದೆ. ಈಗಾಗಲೇ ಒಮ್ಮೆ ರಾಜ್ಯದಲ್ಲಿ ಮತಪ್ರಚಾರ ನಡೆಸಿರುವ ನರೇಂದ್ರ ಮೋದಿ, ಇದೀಗ ಎರಡನೇ ಬಾರಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಸೋನಿಪತ್​​ ಜಿಲ್ಲೆಯ ಗೊಹಾನಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಭಾಷಣ ಮಾಡಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಂಘಟಕರು, "ಚುನಾವಣಾ ಸಮಾವೇಶಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಅಲ್ಯೂಮಿನಿಯಂ ಪೆಂಡಾಲ್​ ನಿರ್ಮಿಸಲಾಗಿದೆ. ಸಮಾವೇಶ ನಡೆಯುವ ಸ್ಥಳದ ಸಮೀಪದಲ್ಲಿ ಮೂರು ಹೆಲಿಪ್ಯಾಡ್​ ನಿರ್ಮಿಸಲಾಗಿದ್ದು, ಹೆಲಿಕ್ಯಾಪ್ಟರ್​ಗಳು ಟೆಕ್​ಅಫ್​ ಮತ್ತು ಲ್ಯಾಂಡಿಂಗ್​ ಮಾಡುವ ಕುರಿತು ಸೋಮವಾರ ರಿಹರ್ಸಲ್​ ನಡೆಸಲಾಗಿದೆ" ಎಂದು ತಿಳಿಸಿದರು.

ಪ್ರಧಾನಿ ಸಮಾವೇಶದಲ್ಲಿ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಸಿಎಂ ನಯಾಬ್​ ಸಿಂಗ್​ ಸೈನಿ ಭಾಗಿಯಾಗುವರು. ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿ ಮೋದಿ ಅವರ ಈ ರ್‍ಯಾಲಿಯನ್ನು ಯಶಸ್ವಿಯಾಗಿಸುವಂತೆ ಈಗಾಗಲೇ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.

22 ವಿಧಾನಸಭಾ ಕ್ಷೇತ್ರಗಳನ್ನು ಈ ರ್‍ಯಾಲಿ ಒಳಗೊಳ್ಳುವುದರಿಂದ ಇದನ್ನು 'ನಿರ್ಣಾಯಕ' ಎಂದೇ ಪರಿಗಣಿಸಲಾಗಿದೆ. ರ್‍ಯಾಲಿಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಪ್ರಚಾರ ಸಭೆ ನಡೆಯುವ ಸ್ಥಳದ ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಪೊಲೀಸರ ಕಣ್ಗಾವಲಿರಲಿದೆ.

ಸೆಪ್ಟಂಬರ್​ 15ರಂದು ಕುರುಕ್ಷೇತ್ರದಲ್ಲಿ ಪ್ರಧಾನಿ ಮೋದಿ ತಮ್ಮ ಮೊದಲ ರ್‍ಯಾಲಿ ನಡೆಸಿದ್ದರು.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಅಕ್ಟೋಬರ್​ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್​ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಿಲಿದೆ.(ಐಎಎನ್​ಎಸ್​)

ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ: 2ನೇ ಹಂತದ ಮತದಾನ; ಘಟಾನುಘಟಿಗಳಿಗೆ ಅಗ್ನಿಪರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.