ETV Bharat / technology

ಈ ಬಾಹ್ಯಾಕಾಶ ಶಿಲೆ ಭೂಮಿಗೆ ಎರಡನೇ ಚಂದ್ರ ಆಗಲಿದೆಯೇ? - Planetary Debris Approaches Earth - PLANETARY DEBRIS APPROACHES EARTH

Planetary Debris Approaches Earth: ಹೊಸದಾಗಿ ಪತ್ತೆಯಾದ ಕ್ಷುದ್ರಗ್ರಹವನ್ನು '2024 PT5' ಎಂದು ಹೆಸರಿಸಲಾಗಿದೆ. ಇದು ತಾತ್ಕಾಲಿಕವಾಗಿ ಭೂಮಿಯ ಗುರುತ್ವಾಕರ್ಷಣೆಯಿಂದ ಸೆರೆಹಿಡಿಯಲ್ಪಡುತ್ತದೆ. ಸೆಪ್ಟಂಬರ್ 29ರಿಂದ ನವೆಂಬರ್ 25ರವರೆಗೆ ಇದು ನಮ್ಮ ಭೂಮಂಡಲವನ್ನು ಸುತ್ತುತ್ತದೆ. ನಂತರ, ಸೂರ್ಯಕೇಂದ್ರೀಯ ಕಕ್ಷೆಗೆ ಮರಳುತ್ತದೆ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಾರೆ.

PLANETARY  SECOND MOON  MINI MOON  NEW ASTEROID
ಭೂಮಿಯ ಎರಡನೇ ಚಂದ್ರ? (IANS)
author img

By ETV Bharat Karnataka Team

Published : Sep 25, 2024, 10:41 AM IST

Planetary Debris Approaches Earth: ಗ್ರಹಗಳ ಅವಶೇಷಗಳು ಭೂಮಿಯನ್ನು ಸಮೀಪಿಸುತ್ತಿದ್ದಂತೆ ಎರಡು ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. 1) ಅವು ಭೂಮಿಯ ವಾತಾವರಣಕ್ಕೆ ಡಿಕ್ಕಿ ಹೊಡೆದು ಸುಟ್ಟುಹೋಗುವುದು ಅಥವಾ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕಿನ ರೇಖೆಯನ್ನು ಸೃಷ್ಟಿಸುವುದು. 2) ನೆಲಕ್ಕೆ ಬಡಿದು ದೊಡ್ಡ ರಂಧ್ರವನ್ನು ರೂಪಿಸುವುದು ಅಥವಾ ಅಪರೂಪವೆಂಬಂತೆ ಭೂಮಿಯ ಗುರುತ್ವಾಕರ್ಷಣೆ ಅವುಗಳನ್ನು ಬಿಡಬಹುದು. ನಂತರ ಅವು ಭೂಮಿಯ ಸುತ್ತ ಚಂದ್ರನಂತೆ ಸುತ್ತುತ್ತವೆ. ಈಗ ಅದೇ ರೀತಿಯ ಘಟನೆಯೊಂದು ಸೃಷ್ಟಿಯಾಗಲಿದೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ನಮ್ಮ ಭೂಮಿಗೆ ಎರಡು ಚಂದ್ರಗಳಿದ್ದರೆ? ಹೌದು, ಇದನ್ನು ಕಲ್ಪಿಸಿಕೊಳ್ಳುವುದೇ ಅದ್ಭುತ. ಇದು ತಾತ್ಕಾಲಿಕವಾಗಿಯಾದರೂ ಶೀಘ್ರದಲ್ಲೇ ನಿಜವಾಗಲಿದೆ. '2024 PT5' ನಮ್ಮ ಭೂಮಿಯ ಗುರುತ್ವಾಕರ್ಷಣೆಗೆ ಒಳಪಟ್ಟಿರುವ ಗ್ರಹಗಳ ತುಣುಕು ಚಂದ್ರವಾಗಿ ಮಾರ್ಪಡುವ ಸಾಧ್ಯತೆ ಹೆಚ್ಚಿದೆ.

ಸೆ.29ರಿಂದ ನವೆಂಬರ್ 25ರವರೆಗೆ ಎರಡನೇ ಚಂದ್ರ ಭೂಮಿಯನ್ನು ಸುತ್ತುತ್ತದೆ. ಅದರ ನಂತರ ಅದು ಭೂಮಿಯ ಗುರುತ್ವಾಕರ್ಷಣೆಯಿಂದ ಬೇರ್ಪಟ್ಟು ಮತ್ತೆ ಬಾಹ್ಯಾಕಾಶಕ್ಕೆ ಹಾರುತ್ತದೆ. ಆದರೆ ತುಂಬಾ ಎತ್ತರದಲ್ಲಿದ್ದು ಚಿಕ್ಕದಾಗಿ ಗೋಚರಿಸುತ್ತದೆ. ನಾವು ಅದನ್ನು ಬರಿಗಣ್ಣುಗಳಿಂದ ಅಥವಾ ಸಣ್ಣ ದೂರದರ್ಶಕದಿಂದ ನೋಡಲು ಸಾಧ್ಯವಿಲ್ಲ. ದೊಡ್ಡ ಅತ್ಯಾಧುನಿಕ ದೂರದರ್ಶಕಗಳಿಂದ ಮಾತ್ರವೇ ನೋಡಬಹುದು. ಖಗೋಳಶಾಸ್ತ್ರಜ್ಞರಿಗೆ ಇದೊಂದು ಅಪರೂಪದ ಅವಕಾಶವೆಂದು ಹೇಳಲಾಗಿದೆ. ಇದು 33 ಅಡಿ ಉದ್ದ ಮತ್ತು 16ರಿಂದ 138 ಅಗಲವಾಗಿದೆ. 2013ರಲ್ಲಿ ರಷ್ಯಾದಲ್ಲಿ ಸ್ಫೋಟಿಸಿದ ಕ್ಷುದ್ರಗ್ರಹಕ್ಕಿಂತ ಸ್ವಲ್ಪ ದೊಡ್ಡದಂತೆ. ಅದೃಷ್ಟವಶಾತ್, ಭೂಮಿಗೆ ಯಾವುದೇ ಅಪಾಯ ಉಂಟುಮಾಡುವುದಿಲ್ಲ. ಭೂಮಿಗೆ ಅಪ್ಪಳಿಸುವ ಸಾಧ್ಯತೆಯೂ ಇಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಗುರುತಿಸುವುದು ಕಷ್ಟ: ಸಾಮಾನ್ಯವಾಗಿ ಭೂಮಿಯ ಗುರುತ್ವಾಕರ್ಷಣೆ ಮತ್ತು ಕಕ್ಷೆಯಿಂದ ಸ್ವಲ್ಪ ಸಮಯದವರೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ಗ್ರಹಗಳ ತುಣುಕುಗಳನ್ನು 'ಮಿನಿ ಮೂನ್ಸ್' ಎಂದು ಕರೆಯುವರು. ಚಿಕ್ಕದಾಗಿರುವುದರಿಂದ ಮತ್ತು ವೇಗವಾಗಿ ಚಲಿಸುವುದರಿಂದ ಅವುಗಳನ್ನು ಕಂಡುಹಿಡಿಯುವುದು ಬಹಳ ಕಷ್ಟ. ಕೆಲವೊಮ್ಮೆ ಕೃತಕ ವಸ್ತುಗಳೂ ಈ ರೀತಿ ಕಾಣಿಸಿತ್ತವೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಸೇರಿದ್ದ ಗಯಾ ಬಾಹ್ಯಾಕಾಶ ನೌಕೆಯು ಒಮ್ಮೆ ಗ್ರಹಗಳ ಅವಶೇಷಗಳಿಂದ ಡಿಕ್ಕಿ ಹೊಡೆದಿತ್ತು. ರಾಕೆಟ್​ಗಳ ಅವಶೇಷಗಳು ಈಗಲೂ ಈ ಘಟನೆಯನ್ನು ನೆನಪಿಸುತ್ತವೆ. ಆದರೆ, '2024 PT5' ಹಾಗಲ್ಲ. ಇದು ಆಕಾಶ ವಸ್ತು ಎಂಬುದರಲ್ಲಿ ಸಂದೇಹವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಟ್ಲಾಸ್ ಸಹಾಯ: '2024 PT5' ಅನ್ನು ಆಗಸ್ಟ್ 7ರಂದು NASA ಧನಸಹಾಯದಿಂದ ನಿರ್ವಹಿಸುತ್ತಿರುವ ಕ್ಷುದ್ರಗ್ರಹ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ಪತ್ತೆ ಹಚ್ಚಿದೆ. ಸುಮಾರು ಎರಡು ತಿಂಗಳ ಕಾಲ ಇದು ಭೂಮಿಯ ಸುತ್ತ ಸುತ್ತುತ್ತದೆ. ಇದರ ಮೂಲ ಅಂತಿಮವಾಗಿ ಚಂದ್ರನನ್ನು ತಲುಪುತ್ತದೆ ಎಂಬುದು ವಿಶೇಷ.

ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಭೂಮಿಯ ಸಮೀಪ ವಸ್ತು ಅಧ್ಯಯನದ ನಿರ್ದೇಶಕ ಪಾಲ್ ಚೋಡಸ್ ಹೇಳುವ ಪ್ರಕಾರ, ಇದು ಬಾಹ್ಯಾಕಾಶ ವಸ್ತುವಿನಿಂದ ಚಂದ್ರನಿಂದ ಬೇರ್ಪಟ್ಟ ಚಂದ್ರನ ತುಣುಕಿನಂತೆ ಕಾಣುತ್ತದೆ. ಅಂದರೆ ಹೊಸ ಮಿನಿ ಚಂದ್ರ. ನಮ್ಮ ಚಂದ್ರನ ಒಂದು ಸಣ್ಣ ಭಾಗ. ತಾಂತ್ರಿಕವಾಗಿ, ಚಂದ್ರನ ಪರಂಪರೆಯನ್ನು ಹೊಂದಿದ್ದರೂ ಸಹ ಮಿನಿ-ಮೂನ್ ಎಂದು ಪರಿಗಣಿಸಲಾಗುವುದಿಲ್ಲ. ಭೂಮಿಯ ಗುರುತ್ವಾಕರ್ಷಣೆಗೆ ಒಳಪಟ್ಟಿರುವ ಗ್ರಹಗಳ ತುಣುಕು ಒಮ್ಮೆಯಾದರೂ ನಮ್ಮ ಗ್ರಹದ ಸುತ್ತ ಸಂಪೂರ್ಣ ಕಕ್ಷೆಯನ್ನು ಸುತ್ತುತ್ತವೆ. ಆದರೆ 2024 PT5 ಅದರ ಕವಚದ ಆಕಾರದ ಕಕ್ಷೆಯೊಂದಿಗೆ ಅದು ಹಾಗೆ ತಿರುಗುತ್ತಿಲ್ಲ. ಹಾಗಾಗಿ ಇದನ್ನು ಮಿನಿ ಮೂನ್ ಎಂದು ಪರಿಗಣಿಸುವ ಸಾಧ್ಯತೆ ಇಲ್ಲ.

ಅಮೂಲ್ಯ ಲೋಹಗಳ ತುಂಡು: ಮಿನಿ ಚಂದ್ರ ಆಗಿರಬಹುದು ಅಥವಾ 2024 PT5 ಭೂಮಿಯನ್ನು ಸುತ್ತುತ್ತಿರುವ ಗ್ರಹಗಳ ಅವಶೇಷವೂ ಆಗಿರಬಹುದು. ಖಗೋಳ ಆಸಕ್ತಿಯ ವಿಷಯಗಳಾಗದ ಇವುಗಳಲ್ಲಿ ಅಮೂಲ್ಯ ಲೋಹಗಳು ಪ್ರಧಾನವಾಗಿವೆ. ಭವಿಷ್ಯದಲ್ಲಿ ಕಂಪನಿಗಳು ಇವುಗಳ ಮೇಲೆ ಶೋಧ ನಡೆಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಇದೇ ರೀತಿಯ ಪ್ರಯತ್ನಗಳನ್ನು ಈಗಾಗಲೇ ಆರಂಭಿಸಲಾಗಿದೆ. ದೂರದ ಗ್ರಹಗಳ ತುಣುಕುಗಳ ಮೇಲೆ ಉತ್ಖನನ ನಡೆಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ.

2024 PT5ನಂತಹ ತುಣುಕುಗಳು ಭೂರಕ್ಷಣೆಯತ್ತ ದೃಷ್ಟಿ ಕೇಂದ್ರೀಕರಿಸಿದ ಸಂಶೋಧಕರಿಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿವೆ. ಪ್ರಾಥಮಿಕವಾಗಿ ಅವರು 460 ಅಡಿಗಳವರೆಗೆ ಭೂಮಿಯ ಸಮೀಪವಿರುವ ವಸ್ತುಗಳನ್ನು ವೀಕ್ಷಿಸುತ್ತಾರೆ. ಅವು ನಗರವನ್ನು ನೆಲಸಮ ಮಾಡಬಹುದು. ಪ್ರಸ್ತುತ, ಅಂತಹ 11,000 ವಸ್ತುಗಳನ್ನು ಗುರುತಿಸಲಾಗಿದೆ. ಆದರೆ ಭೂಮಿಯ ಸಮೀಪವಿರುವ ಶತಕೋಟಿ ಸಣ್ಣ ಗಾತ್ರದ ಬಾಹ್ಯಾಕಾಶ ಶಿಲೆಗಳಿವೆ. ಅವು ಚಿಕ್ಕದಾದರೂ ನಮಗೆ ಅಪಾಯ ಉಂಟು ಮಾಡುತ್ತವೆ. ಜನವಸತಿ ಪ್ರದೇಶಗಳಲ್ಲಿ ಇವು ಬಿದ್ದಲ್ಲಿ ಹೆಚ್ಚು ಹಾನಿ ಉಂಟುಮಾಡುತ್ತವೆ. ಆದರೆ ಅಂತಹ ಸಣ್ಣ ಕಲ್ಲುಗಳು ಎಲ್ಲಿವೆ? ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ.

2024 PT5 ಉಪಸ್ಥಿತಿಯೊಂದಿಗೆ, ಭೂಮಿಯ ಸುತ್ತ ಬಾಹ್ಯಾಕಾಶ ಬಂಡೆಗಳ ಬೃಹತ್ ಜಾಲವೇ ಇದೆ ಎಂದು ತೋರುತ್ತದೆ. ಇವೆಲ್ಲ ಎಲ್ಲಿವೆ? ಹೇಗಿವೆ? ಎಲ್ಲಿ ಹೋಗುತ್ತಿವೆ? ಎಂದು ನಮಗೆ ತಿಳಿದಿದ್ದರೆ, ನಾವು ಭೂಮಿಯನ್ನು ರಕ್ಷಿಸುವ ಮಾರ್ಗಗಳನ್ನು ಕಂಡುಕೊಳ್ಳಬಹುದು. ಈ ನಡುವೆ ಕ್ಷುದ್ರಗ್ರಹ ಡಿಮಾರ್ಫಾಸ್ ಡಾರ್ಟ್ ಬಾಹ್ಯಾಕಾಶ ನೌಕೆಗೆ ಡಿಕ್ಕಿ ಹೊಡೆದು ತನ್ನ ಪಥ ಬದಲಿಸಿದೆ ಎಂದು ತಿಳಿದು ಬಂದಿದೆ. ಭೂಮಿಯೆಡೆಗೆ ಬರುವ ಗ್ರಹಗಳ ಅವಶೇಷಗಳನ್ನು ಪತ್ತೆ ಮಾಡುವುದು ದೊಡ್ಡ ಸವಾಲು. 2024 PT5 ನಂತಹ ಚಿಕ್ಕವುಗಳನ್ನು ಗುರುತಿಸುವುದು ಇನ್ನೂ ಕಷ್ಟವೇ ಎನ್ನುತ್ತಾರೆ ವಿಜ್ಞಾನಿಗಳು.

ಇದನ್ನೂ ಓದಿ: ಅನ್​ಲಿಮಿಟೆಡ್​ ಕರೆ, ಉಚಿತ ಡೇಟಾ, 52 ದಿನ ವ್ಯಾಲಿಡಿಟಿ! BSNL ಸೂಪರ್ ರೀಚಾರ್ಜ್ ಪ್ಲಾನ್ - BSNL Best Recharge Plan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.