ಮೈಸೂರು: ಬೈಕ್ಗೆ ಹಿಂಬದಿಯಿಂದ ಕಾರು ಡಿಕ್ಕಿ, ಮಗು ಸ್ಥಳದಲ್ಲೇ ಸಾವು - Mysuru bike and car accident - MYSURU BIKE AND CAR ACCIDENT
🎬 Watch Now: Feature Video
Published : Sep 23, 2024, 6:04 PM IST
ಮೈಸೂರು: ವೇಗವಾಗಿ ಬರುತ್ತಿದ್ದ ಕಾರು ಮುಂದೆ ಇದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ 1 ವರ್ಷ 2 ತಿಂಗಳ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ದಂಪತಿಗಳು ಗಾಯಗೊಂಡಿರುವ ಘಟನೆ ಇಲವಾಲದ ಬಳಿ ನಡೆದಿದೆ. ಅಪಘಾತದ ದೃಶ್ಯ ಸಮೀಪದ ಪೆಟ್ರೋಲ್ ಬಂಕ್ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ಬಾಲಕನನ್ನು ಲಿಖಿತ್ ಎಂದು ಗುರುತಿಸಲಾಗಿದೆ.
ಭಾನುವಾರ ಮಧ್ಯಾಹ್ನ 2:56ರ ಹೊತ್ತಿಗೆ ಇಲವಾಲ ಮುಖ್ಯ ರಸ್ತೆಯಲ್ಲಿ ದಂಪತಿ ತಮ್ಮ ಮಗುವಿನೊಂದಿಗೆ ಬೈಕ್ನಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ನಲ್ಲಿದ್ದ ತಾಯಿ, ಮಗು ಹಾರಿ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಸ್ಥಿತಿ ಗಂಭೀರವಾಗಿದೆ. ಮಗುವಿನ ತಂದೆ ಮತ್ತೊಂದು ಕಡೆ ಬಿದ್ದಿದ್ದು ಅವರಿಗೂ ಸಹ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಇಲವಾಲ ಪೊಲೀಸರು ಆಗಮಿಸಿ ಗಾಯಾಳು ಪೋಷಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅಪಘಾತಕ್ಕೀಡಾದವರ ಆಪತ್ಬಾಂಧವ 'ಆಪತ್ಕಾಲಯಾನ ಸೇವೆ': ನೂತನ ಅಂಬ್ಯುಲೆನ್ಸ್ಗಳ ಸೇವೆ ಹೇಗಿರಲಿದೆ? - Apatkalayana Ambulance