ETV Bharat / bharat

ಬೇಟಿ ಬಚಾವೋ ಬೇಟಿ ಪಢಾವೋಗೆ ದಶಕದ ಸಂಭ್ರಮ; ಇದು ಜನಚಾಲಿತ ಉಪಕ್ರಮ ಎಂದ ಪ್ರಧಾನಿ - BETI BACHAO BETI PADHAO

2015ರ ಜನವರಿ 22ರಂದು ಹರಿಯಾಣದ ಪಾಣಿಪತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗೆ ಚಾಲನೆ ನೀಡಿದ್ದರು.

over-past-decade-beti-bachao-beti-padhao-has-become-people-powered-initiative-pm
ಪ್ರಧಾನಿ ನರೇಂದ್ರ ಮೋದಿ (IANS)
author img

By PTI

Published : Jan 22, 2025, 11:38 AM IST

ನವದೆಹಲಿ: ಬೇಟಿ ಬಚಾವೋ ಬೇಟಿ ಪಢಾವೋ (ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ) ಯೋಜನೆಗೆ 10 ವರ್ಷ ತುಂಬಿದ್ದು, ಲಿಂಗ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಅವರ ಕನಸು ಸಾಧಿಸುವ ಅವಕಾಶಗಳನ್ನು ನೀಡುವ ಉತ್ತಮ ವಾತಾವರಣವನ್ನು ನಿರ್ಮಿಸಲಾಗಿದೆ ಎಂದರು.

2015ರ ಜನವರಿ 22ರಂದು ಹರಿಯಾಣದ ಪಾಣಿಪತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗೆ ಚಾಲನೆ ನೀಡಿದ್ದರು. ಹೆಣ್ಣುಮಕ್ಕಳ ಸಂಖ್ಯೆ ಕುಸಿತದ ಜೊತೆಗೆ ಮಹಿಳೆಯರ ಜೀವನ ಚಕ್ರ ನಿರಂತರತೆಯ ಮಹಿಳಾ ಸಬಲೀಕರಣವನ್ನು ಈ ಯೋಜನೆ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶ ಹೊಂದಲಾಗಿತ್ತು.

ಈ ಯೋಜನೆಗೆ ದಶಕದ ಸಂಭ್ರಮ ತುಂಬಿದ ಹಿನ್ನೆಲೆ ಈ ಸಂಬಂಧ ಸಂತಸ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ, ಇಂದು ನಾವು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ 10 ವರ್ಷ ಪೂರೈಸಿದ ಮೈಲಿಗಲ್ಲಿನಲ್ಲಿದ್ದೇವೆ. ಕಳೆದೊಂದು ದಶಕದಿಂದ ಎಲ್ಲಾ ಹಂತದ ಜನರು ಇದರಲ್ಲಿ ಭಾಗಿಯಾಗುವ ಮೂಲಕ ಈ ಯೋಜನೆ ಜನರಿಂದ ಚಾಲಿತ ಉಪಕ್ರಮವಾಗಿ ಪರಿವರ್ತಕವಾಗಿದೆ.

ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯು ಲಿಂಗ ತಾರತಮ್ಯದಿಂದ ಹೊರ ಬರುವ ಒಂದು ಅಸ್ತ್ರದ ಜೊತೆಗೆ ಇದು ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಅವರ ಕನಸು ಸಾಧಿಸುವ ಅವಕಾಶ ಸೃಷ್ಟಿಸುವ ಉತ್ತಮ ಪರಿಸರದ ಖಚಿತತೆಯನ್ನು ನೀಡುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಕಳೆದೊಂದು ದಶಕದಿಂದ ಈ ಯೋಜನೆ ಅದ್ಭುತ ಸಾಧನೆ ತೋರುವಲ್ಲಿ ಭಾಗಿಯಾದ ಅನೇಕ ಸಮುದಾಯಗಳ ಸೇವಾ ಸಂಘಟನೆ ಮತ್ತು ಜನರ ಸಮರ್ಪಣಾ ಪ್ರಯತ್ನಕ್ಕೆ ಧನ್ಯವಾದಗಳು ಎಂದು ಅವರು ಎಕ್ಸ್​ನಲ್ಲಿ ತಿಳಿಸಿದ್ದಾರೆ.

ಈ ಯೋಜನೆಯಿಂದಾಗಿ ಮಕ್ಕಳ ಲಿಂಗ ತಾರತಮ್ಯ ಹೊಂದಿದ್ದ ಜಿಲ್ಲೆಗಳಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ. ಲಿಂಗತಾರತಮ್ಯ ನಿವಾರಣೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನಗಳು ಪ್ರಮುಖ ಪಾತ್ರವಹಿಸಿದೆ.

ಈ ಯಶಸ್ಸಿನಲ್ಲಿ ಭಾಗಿಯಾದ ಎಲ್ಲಾ ತಳಮಟ್ಟದ ಮಧ್ಯಸ್ಥಗಾರರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ನಮ್ಮ ಹೆಣ್ಣು ಮಕ್ಕಳನ್ನು ಹೀಗೆ ರಕ್ಷಿಸೋಣ. ಅವರಿಗೆ ಶಿಕ್ಷಣದ ಭರವಸೆ ಜೊತೆಗೆ ಯಾವುದೇ ತಾರತಮ್ಯ ಇಲ್ಲದ ಸಮಾಜವನ್ನು ಸೃಷ್ಟಿಸಲು ಪ್ರಯತ್ನಿಸೋಣ ಎಂದರು.

ಮುಂಬರುವ ವರ್ಷಗಳನ್ನು ಭಾರತದ ಹೆಣ್ಣುಮಕ್ಕಳಿಗಾಗಿ ಅವಕಾಶ ಮತ್ತು ದೊಡ್ಡ​​ ಪ್ರಗತಿಗಾಗಿ ಜೊತೆಯಾಗುವ ನಾವು ಭರವಸೆಯನ್ನು ನೀಡೋಣ ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಇದನ್ನೂ ಓದಿ: 'ಮೋದಿ ಕಿ ಗ್ಯಾರಂಟಿ': ದೆಹಲಿ ಬಿಜೆಪಿಯಿಂದ ಹೊಸ ಚುನಾವಣಾ ಪೋಸ್ಟರ್ ಬಿಡುಗಡೆ

ಇದನ್ನೂ ಓದಿ: ಚಾಕು ಇರಿತ ಪ್ರಕರಣ; ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ನಟನ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.