ಕೇದಾರನಾಥನ ದರ್ಶನ... ಗುಹೆಯಲ್ಲಿ ಧ್ಯಾನ..ದಟ್ಟ ಮಂಜಿನ ನಡುವೆ ನಮೋ ವಿಹಾರ! - ಪ್ರಧಾನಿ ಮೋದಿ
🎬 Watch Now: Feature Video
ಡೆಹ್ರಾಡೂನ್: ಲೋಕಸಭಾ ಚುನಾವಣೆಯ ಕೊನೆ ಹಂತದ ವೋಟಿಂಗ್ ನಾಳೆ ನಡೆಯಲಿದೆ. ರಾಜಕೀಯ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ಮಧ್ಯೆ ಪ್ರಧಾನಿ ಮೋದಿ ಇವೆಲ್ಲದರಿಂದ ದೂರ ಉಳಿದು ಕೇದಾರನಾಥನ ಸನ್ನಿಧಿಯಲ್ಲಿದ್ದಾರೆ.
ಪ್ರಧಾನಿ ಮೋದಿ ಎರಡು ದಿನಗಳ ಕೇದಾರನಾಥನ ದರ್ಶನಕ್ಕೆ ತೆರಳಿದ್ದು, ಬದ್ರಿನಾಥ್ ಹಾಗೂ ಕೇದಾರನಾಥನ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಇಲ್ಲಿನ ಗುಹೆವೊಂದರಲ್ಲಿ ಮೋದಿ ಧ್ಯಾನ ಸಹ ನಡೆಸಿದ್ದಾರೆ. ಉತ್ತರಖಾಂಡದ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಪ್ರಧಾನಿ ಮೋದಿ ಸುಮಾರು ಒಂದೂವರೆ ಗಂಟೆ ದೇಗುಲದ ಒಳಗೆ ಪ್ರಾರ್ಥಿಸಿದ್ದಾರೆ. ಹಾಗೇ ಪ್ರದಕ್ಷಿಣೆಯನ್ನೂ ಹಾಕಿ ನಮಸ್ಕಾರ ಸಲ್ಲಿಸಿದ್ದಾರೆ.
Last Updated : May 18, 2019, 7:38 PM IST