ಬೆಂಗಳೂರು: ಕನ್ನಡ ಭಾಷಾ ವಿದ್ವಾಂಸ ಹಾಗೂ ವಿಮರ್ಶಕ ಕೆ.ವಿ.ನಾರಾಯಣ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ 'ನುಡಿಗಳ ಅಳಿವು-ಬೇರೆ ದಿಕ್ಕಿನ ನೋಟ' ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಮಾರ್ಚ್ 8ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕನ್ನಡದ ಕೆ.ವಿ.ನಾರಾಯಣ ಸೇರಿದಂತೆ 21 ಭಾಷೆಗಳ ಲೇಖಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
#साहित्यअकादेमी पुरस्कार 2024, कन्नड़ भाषा में के. वी. नारायण की 'नुडिगाला अलिवु' (आलोचना) को चयनित।@rashtrapatibhvn @PMOIndia @gssjodhpur @Rao_InderjitS @MinOfCultureGoI @secycultureGOI @ksraosahitya @PIB_India @PIBCulture @MIB_India #SahityaAkademiAward #Award #NewDelhi pic.twitter.com/ra5KZT4NbQ
— Sahitya Akademi (@sahityaakademi) December 18, 2024
ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ, ಡಾ.ಹಳೆಮನಿ ರಾಜಶೇಖರ್ ಮತ್ತು ಡಾ.ಸರಜೂ ಕಾಟ್ಕರ್ ಇದ್ದರು.
'ಸಾಹಿತ್ಯ ತತ್ವ: ಬೇಂದ್ರೆ ದೃಷ್ಟಿ', 'ಧ್ವನ್ಯಾಲೋಕ: ಒಂದು ಅಧ್ಯಯನ', 'ಕನ್ನಡ ಜಗತ್ತು: ಅರ್ಧ ಶತಮಾನ', 'ಭಾಷೆಯ ಸುತ್ತಮುತ್ತ' ಮತ್ತು 'ನಮ್ಮೊಡನೆ ನಮ್ಮ ನುಡಿ' ಹೀಗೆ 22ಕ್ಕೂ ಹೆಚ್ಚು ಕೃತಿಗಳನ್ನು ಕೆ.ವಿ.ನಾರಾಯಣ ರಚಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಬಳಿಕ ಮತ್ತೆ ಮಂಗಳೂರಿನಲ್ಲಿ ಆರಂಭವಾಗಲಿದೆ ಕರಾವಳಿ ಉತ್ಸವ - KARAVALI UTSAV 2024