thumbnail

By

Published : Oct 19, 2020, 12:01 AM IST

Updated : Oct 19, 2020, 7:18 AM IST

ETV Bharat / Videos

ಬಿಜೆಪಿ ಮಹಿಳಾ ಅಭ್ಯರ್ಥಿಗೆ 'ಐಟಂ' ಎಂದು ಕರೆದು ವಿವಾದ ಸೃಷ್ಟಿಸಿದ ಮಧ್ಯಪ್ರದೇಶ ಮಾಜಿ ಸಿಎಂ

ಗ್ವಾಲಿಯರ್​/ಮಧ್ಯಪ್ರದೇಶ:ಮಧ್ಯಪ್ರದೇಶದ ಮಹಿಳಾ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರನ್ನು 'ಐಟಂ'ಎಂದು ಕರೆಯುವ ಮೂಲ ಮಧ್ಯಪ್ರದೇಶ ಮಾಜಿ ಸಿಎಂ ಕಮಲಾನಾಥ್​ ವಿವಾದ ಮೈ ಮೇಲೆಳೆದುಕೊಂಡಿದ್ದಾರೆ. ಮಧ್ಯಪ್ರದೇಶ ಬೈ ಎಲೆಕ್ಷನ್​ ಹಿನ್ನೆಲೆ ಗ್ವಾಲಿಯರ್​ನಲ್ಲಿ ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದ ವೇಳೆ ಕಮಲ್​ನಾಥ್ ಈ ರೀತಿಯ ಹೇಳಿಕೆ ನೀಡಿದ್ದು, ತೀವ್ರ ವಿವಾದ ಸೃಷ್ಟಿಸಿದೆ. ನಮ್ಮ ಅಭ್ಯರ್ಥಿ ಸುರೇಶ್​ ರಾಜೇ ಸರಳ ವ್ಯಕ್ತಿ, ಆಕೆಯ ತರ ಅಲ್ಲ, ಅವಳ ಹೆಸರೇನು ಎಂದು ಮರೆತವರಂತೆ ಕೇಳಿದ್ದಾರೆ. ಈ ವೇಳೆ ಕಾರ್ಯಕರ್ತರು ಇಮಾರ್ತಿ ದೇವಿ ಎಂದು ಕೂಗಿದಾಗ, ನೀವು ನನ್ನನ್ನು ಮೊದಲೇ ಸಮಾಧಾನಗೊಳಿಸಬೇಕಿತ್ತು ‘ಯೇ ಕ್ಯಾ ಐಟಂ ಹೇ’ ಎಂದು ವ್ಯಂಗ್ಯವಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ನಟನೆಯಲ್ಲಿ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್​ ಅವರು ಸಲ್ಮಾನ್​ ಖಾನ್​ ಮತ್ತು ಶಾರೂಖ್​ನನ್ನು ಮೀರಿಸ್ತಾರೆ ಅಂತ ವ್ಯಂಗ್ಯವಾಡಿದ್ದಾರೆ.
Last Updated : Oct 19, 2020, 7:18 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.