ಗೂಳಿ ದಾಳಿ: ಹರಿಯಾಣದಲ್ಲಿ ವೃದ್ಧೆ ಸಾವು - ಹರಿಯಾಣ ವಿಡಿಯೋ ವೈರಲ್
🎬 Watch Now: Feature Video

ಫರೀದಾಬಾದ್, ಹರಿಯಾಣ: ಬೀದಿ ಗೂಳಿಯೊಂದು ಸುಮಾರು 80 ವರ್ಷದ ವೃದ್ಧೆಯನ್ನು ಕೊಂದಿರುವ ಘಟನೆ ಹರಿಯಾಣದ ಫರೀದಾಬಾದ್ನ ಖೇರಿ ಗ್ರಾಮದಲ್ಲಿ ನಡೆದಿದೆ. ಗೂಳಿ ದಾಳಿ ನಡೆಸಿರುವ ವಿಡಿಯೋ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಲಿನಿಂದ ಗೂಳಿಯನ್ನು ಓಡಿಸಲು ಯತ್ನಿಸಿದ ವೃದ್ಧೆಯ ಮೇಲೆ ಗೂಳಿ ದಾಳಿ ನಡೆಸಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ.