ಸಹೋದರನ ಬಿಡಿಸಲು ಬಂದ ಯುವಕನ ಮೇಲೆ ಪೊಲೀಸ್ ದರ್ಪ: ವಿಡಿಯೋ ವೈರಲ್ - ಪೊಲೀಸರಿಂದ ಯುವಕನ ಮೇಲೆ ಹಲ್ಲೆ
🎬 Watch Now: Feature Video

ಸಹೋದರನನ್ನು ಪೊಲೀಸ್ ಕಸ್ಟಡಿಯಿಂದ ಬಿಡಿಸಿಕೊಂಡು ಹೋಗಲು ಬಂದಿದ್ದ ಯುವಕನೊಬ್ಬನಿಗೆ ಪೊಲೀಸರು ಠಾಣೆಯಲ್ಲಿ ಮನಬಂದಂತೆ ಥಳಿಸಿದ ಘಟನೆ ಮಧ್ಯಪ್ರದೇಶದ ಸಾಗರದ ಗುನಾದಲ್ಲಿ ನಡೆದಿದೆ. ಪೊಲೀಸರು ಯುವಕನನ್ನು ಮಾತ್ರವಲ್ಲದೆ ಆತನ ಸಹೋದರಿ ಮತ್ತು ಅತ್ತಿಗೆಯನ್ನೂ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಮಾನವ ಹಕ್ಕುಗಳ ಆಯೋಗವು ಪೊಲೀಸ್ ವರಿಷ್ಠಾಧಿಕಾರಿಗಳಿಂದ ಘಟನೆ ಕುರಿತ ವರದಿ ಕೋರಿದೆ.