ಪಾಕ್ ಅಣುಬಾಂಬ್ ದಾಳಿ ಮಾಡುತ್ತೆ ಎಂದು 'ಕೈ' ಭಯಪಡ್ತಿತ್ತು, ಇದೀಗ ಭಾರತದ ಸರ್ಜಿಕಲ್ ದಾಳಿಗೆ ಪಾಕ್ ಹೆದರುತ್ತಿದೆ: ಯೋಗಿ - ಉತ್ತರ ಪ್ರದೇಶದ ಬಿಹಾರದಲ್ಲಿ ಯೋಗಿ ಆದಿತ್ಯನಾಥ್
🎬 Watch Now: Feature Video
ಪಾಟ್ನಾ: ಬಿಹಾರ ಚುನಾವಣೆ ಕಾರಣ ಸರಣಿ ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡ್ತಿದ್ದು, ಇಂದು ಕೂಡ ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಅಭ್ಯರ್ಥಗಳ ಪರ ಪ್ರಚಾರದಲ್ಲಿ ಭಾಗಿಯಾದರು. ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್, ಈ ಹಿಂದೆ ಭಾರತದ ಮೇಲೆ ಪಾಕ್ ಅಣುಬಾಂಬ್ ದಾಳಿ ಮಾಡುತ್ತದೆ ಎಂದು ಭಯಪಡುತ್ತಿತ್ತು. ಆದರೆ ಇದೀಗ ಭಾರತ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಬಹುದು ಎಂಬ ಭಯದಲ್ಲಿ ಅಲ್ಲಿನ ಪ್ರಧಾನಿ ವಿಶ್ವದಾದ್ಯಂತ ಓಡಾಡುತ್ತಿದ್ದಾರೆ. ಇದು ಪ್ರಧಾನಿ ಮೋದಿಯವರ ತಾಕತ್ತು ಎಂದರು.