ರಾಜಸ್ಥಾನ್ ತಲುಪಿ ಕೇಂದ್ರದ ವಿರುದ್ಧ ಗುಡುಗಿದ ರಾಕೇಶ್ ಟಿಕಾಯತ್ - ದೌಸಾ ಜಿಲ್ಲೆಯಲ್ಲಿ ಮುಂದಿನ ರೈತ ಪಂಚಾಯತ್
🎬 Watch Now: Feature Video
ರಾಜಸ್ಥಾನ : ಇಲ್ಲಿನ ದೌಸಾ ಜಿಲ್ಲೆಯಲ್ಲಿ ಮುಂದಿನ ರೈತ ಪಂಚಾಯತ್ ನಡೆಯಲಿದೆ. ಈ ಹಿನ್ನೆಲೆ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ರಾಜಸ್ಥಾನ ತಲುಪಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಾಜಸ್ಥಾನ ಹೋರಾಟದ ನೆಲವಾಗಿದೆ. ಈ ಕಾಯ್ದೆಗಳು ರೈತರು ಹಾಗೂ ಗ್ರಾಹಕರಿಗೆ ಸಮಾನ ಸಮಸ್ಯೆ ತಂದೊಡ್ಡಲಿವೆ. ನಾನು ಸರ್ಕಾರದ ವಿರುದ್ಧದ ಬೇಡಿಕೆಗಳ ಈಡೇರಿಕೆಗಾಗಿ ರೈತರನ್ನು ಒಟ್ಟುಗೂಡಿಸುತ್ತಿದ್ದೇನೆ. ಈ ಸರ್ಕಾರ ಸಾರ್ವಜನಿಕ ರಂಗದ ದೊಡ್ಡ ಸಂಸ್ಥೆಗಳನ್ನು ಮಾರಾಟ ಮಾಡಿದೆ. ಈಗ ಜೈಲುಗಳನ್ನೂ ಮಾರಾಟ ಮಾಡಲು ಮುಂದಾಗಿದೆ ಎಂದಿದ್ದಾರೆ.