ಸಹೋದರರನ್ನು ನುಂಗಿದ ಕೆರೆ: ಆಟವಾಡಲು ತೆರಳಿದ್ದ ಮೂವರು ಮಕ್ಕಳು ನೀರುಪಾಲು! - Three Children found dead in lake,
🎬 Watch Now: Feature Video
ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನಿನ್ನೆ ಮಧ್ಯಾಹ್ನ ಆಟವಾಡಲು ತೆರಳಿದ್ದ ಮಕ್ಕಳು ನೀರುಪಾಲಾಗಿರುವ ಘಟನೆ ರೆಂಜಲ್ ತಾಲೂಕಿನ ಪೇಪರ್ ಮಿಲ್ ಬಳಿ ನಡೆದಿದೆ. ಮಕ್ಕಳು ಆಟವಾಡಲು ತೆರಳಿದ್ದು, ಸಂಜೆಯಾದ್ರೂ ಮನೆಗೆ ಬಾರದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದ್ರೆ ಇಂದು ಬೆಳಗ್ಗೆ ಪೇಪರ್ ಮಿಲ್ ಬಳಿ ಇರುವ ಕೆರೆಯಲ್ಲಿ ಮೂವರು ಮಕ್ಕಳ ಶವ ತೇಲುತ್ತಿರುವುದು ಕಂಡುಬಂದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮಕ್ಕಳ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಮೃತ ಮಕ್ಕಳನ್ನು ಸಿದ್ದಾರ್ಥ್ (8), ದೀಪಕ್ (7) ಮತ್ತು ಹುಜುರ್ (6) ಎಂದು ಗುರುತಿಸಲಾಗಿದೆ. ಸಿದ್ದಾರ್ಥ್ ಮತ್ತು ದೀಪಕ್ ಇಬ್ಬರು ಸಹೋದರರಾಗಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬದವ ಆಕ್ರಂದನ ಮುಗಿಲು ಮುಟ್ಟಿತ್ತು.