ಗಣೇಶ ತರುತ್ತಿದ್ದ ವೇಳೆ ಎದುರಾದ ವಿಘ್ನ... ಇಬ್ಬರು ಸಾವು, ಐವರಿಗೆ ಗಾಯ!

🎬 Watch Now: Feature Video

thumbnail

By

Published : Aug 28, 2019, 2:28 PM IST

ಗಣೇಶ ಹಬ್ಬ ಸಮೀಪಿಸುತ್ತಿದೆ. ಯುವಕರು ಸಂಭ್ರಮದಿಂದಲೇ ವಿನಾಯಕನನ್ನ ಬರಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಗುಜರಾತ್​ನ ಬರೂಚ್​​​​ ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ಬೃಹದಾಕಾರದ ಗಣಪತಿ ತರುತ್ತಿದ್ದ ವೇಳೆ ವಿದ್ಯುತ್​ ತಂತಿಗಳು ಅಡ್ಡವಾಗಿವೆ. ಅದನ್ನು ತಪ್ಪಿಸಲೆಂದು ಯುವಕರು ಪ್ರಯತ್ನಿಸಿದ್ದಾರೆ. ಈ ವೇಳೆ ಕರೆಂಟ್​ ಶಾಕ್​ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಐವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮಟ್ಟಿತ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.