ETV Bharat / technology

ಕೃತಕ ಸೂರ್ಯಗ್ರಹಣ ಸೃಷ್ಟಿಸುತ್ತದೆ ಪ್ರೊಬಾ -3 ಮಿಷನ್, ಇದರ ಕಾರ್ಯ ಹೇಗಿದೆ ಗೊತ್ತಾ? - ARTIFICIAL SOLAR ECLIPSE

Artificial Solar Eclipse: ನಾಳೆ ಮಹತ್ವದ ಸಾಧನೆ ಮಾಡಲು ಇಸ್ರೋ ಸಜ್ಜಾಗಿದೆ. ಪ್ರೊಬಾ-3 ಮಿಷನ್​ ಉಡಾವಣೆಗೆ ಕ್ಷಣಗಣಗೆ ಆರಂಭಗೊಂಡಿದ್ದು, ಈ ಮಿಷನ್​ನ ಮುಖ್ಯ ಕಾರ್ಯವೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

PROBA 3 MISSION  ISRO TO LAUNCH PSLV ROCKET  PSLV C59 PROBA 3 MISSION SATELLITES  INDIAN SPACE RESEARCH ORGANISATION
ಕೃತಕ ಸೂರ್ಯಗ್ರಹಣ ಸೃಷ್ಟಿಸುತ್ತದೆ ಪ್ರೊಬಾ-3 ಮಿಷನ್ (ISRO)
author img

By ETV Bharat Tech Team

Published : Dec 3, 2024, 8:09 AM IST

Artificial Solar Eclipse: ಮುಂದಿನ ಸೂರ್ಯಗ್ರಹಣಕ್ಕೆ ಇನ್ನೂ ಕೆಲ ತಿಂಗಳುಗಳು ಬಾಕಿ ಇವೆ. ಆದರೆ, ವಿಜ್ಞಾನಿಗಳು ಶೀಘ್ರದಲ್ಲೇ ಕೃತಕ ಸೂರ್ಯಗ್ರಹಣವನ್ನು ಸೃಷ್ಟಿಸುವ ಮೂಲಕ ಇತಿಹಾಸ ಬರೆಯಲು ಸಿದ್ಧರಾಗಿದ್ದಾರೆ. ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ರಾಕೆಟ್​ ಉಡಾವಣೆ ಕಾರ್ಯಾಚರಣೆಗೆ ಅಂತಿಮ ಸಿದ್ಧತೆಗಳು ಪ್ರಾರಂಭವಾಗಿವೆ. ಇದರಲ್ಲಿ ಉಪಗ್ರಹವನ್ನು ಕಳುಹಿಸುವ ಮೂಲಕ ಕೃತಕ ಸೂರ್ಯಗ್ರಹಣ ರಚಿಸಲು ಬಳಸಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಗಮನಾರ್ಹ.

ಇಸ್ರೋದ ಪಿಎಸ್‌ಎಲ್‌ವಿಯಿಂದ ಉಡಾವಣೆ: ಪ್ರೊಬಾ-3 ಮಿಷನ್ ಕಕ್ಷೆಯಲ್ಲಿ ನಿಖರವಾಗಿ ಹಾರಲು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮೊದಲ ಪ್ರಯತ್ನವಾಗಿದೆ. ಇದರಲ್ಲಿ ಎರಡು ಬಾಹ್ಯಾಕಾಶ ನೌಕೆಗಳು ಗ್ರಹದ ಸುತ್ತ ಸುತ್ತುತ್ತವೆ. ಅದು ಮಿಲಿಮೀಟರ್‌ಗಿಂತ ಹೆಚ್ಚು ಚಲಿಸುವುದಿಲ್ಲ. ಎಲ್ಲವೂ ಸರಿಯಾಗಿ ನಡೆದರೆ ಬಾಹ್ಯಾಕಾಶ ನೌಕೆಯು ಭಾರತದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಡಿಸೆಂಬರ್ 4, ಬುಧವಾರ ಸಂಜೆ 4.06ಕ್ಕೆ ಟೇಕಾಫ್ ಆಗಲಿದೆ. ಇದನ್ನು ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ)ಯಿಂದ ಉಡಾವಣೆ ಮಾಡಲಾಗುವುದು.

ಎರಡು ಉಪಗ್ರಹಗಳ ಜೋಡಿ ಬಳಸಿಕೊಂಡು ಸೂರ್ಯನ ಕರೋನವನ್ನು ಅಧ್ಯಯನ ಮಾಡುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಕೃತಕ ಸೂರ್ಯಗ್ರಹಣ ಸಂಭವಿಸಿದಾಗ ವಿಜ್ಞಾನಿಗಳಿಗೆ ಉಪಗ್ರಹದ ಸಹಾಯದಿಂದ ಸೂರ್ಯನ ಕರೋನಾ ಅಧ್ಯಯನ ಮಾಡಲು ಇದು ಉತ್ತಮ ಅವಕಾಶವಾಗಿದೆ. ಪ್ರೋಬಾ-3 ಮಿಷನ್ ಕರೋನಾಗ್ರಾಫ್ ಬಾಹ್ಯಾಕಾಶ ನೌಕೆ (ಸಿಎಸ್‌ಸಿ) ಮತ್ತು ಆಕಲ್ಟರ್ ಸ್ಪೇಸ್‌ಕ್ರಾಫ್ಟ್ (ಒಎಸ್‌ಸಿ) ಎಂಬ ಎರಡು ಉಪಗ್ರಹಗಳನ್ನು ಒಳಗೊಂಡಿರುವುದು ಗಮನಾರ್ಹ.

ಇದು ಕೆಲಸ ಮಾಡುವುದು ಹೇಗೆ?: ಒಎಸ್​ಸಿ 150 ಮೀಟರ್ ದೂರದಲ್ಲಿ ಸರಿಸುಮಾರು 8 ಸೆಂಟಿಮೀಟರ್ ಅಗಲದ ನೆರಳು ಸೃಷ್ಟಿಸುತ್ತದೆ. ಇದನ್ನು ಸೂರ್ಯನ ಬೆಳಕು ನಿರ್ಬಂಧಿಸುವಂತೆ ವಿನ್ಯಾಸಗೊಳಿಸಲಾದ 1.4 ಮೀಟರ್ ಅಸ್ಪಷ್ಟ ಡಿಸ್ಕ್ ಹೊಂದಿದೆ. ಈ ನೆರಳಿನೊಳಗೆ ಸಿಎಸ್​ಸಿ ಕಾರ್ಯಾಚರಣೆ ಮುಂದುವರಿಸುತ್ತಿದೆ. ಇದು 5 ಸೆಂ.ಮೀ. ಅಪರ್ಚರ್​ನೊಳಗೆ ಟೆಲಿಸ್ಕೋಪ್​ ಹೊಂದಿದೆ. ಈ ಉಪಗ್ರಹಗಳು ಫಾರ್ಮೆಶನ್​ ಫ್ಲೈಯಿಂಗ್​ ಟೆಕ್ನಿಕ್​ ಬಳಸಿಕೊಂಡು ಮಿಲಿಮೀಟರ್ ನಿಖರತೆಯೊಂದಿಗೆ ನಿಖರವಾದ ರಚನೆ ನಿರ್ವಹಿಸುತ್ತವೆ.

60 ಸಾವಿರ ಕಿ.ಮೀ ದೂರದಲ್ಲಿ ನಡೆಯುತ್ತದೆ ಸೂರ್ಯಗ್ರಹಣ: ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ಈ ಸ್ಥಾನವು ಭೂಮಿಯಿಂದ ಸುಮಾರು 60 ಸಾವಿರ ಕಿಲೋಮೀಟರ್ ದೂರದಲ್ಲಿರುವ ದೀರ್ಘವೃತ್ತದ ಕಕ್ಷೆಯ ಹೊರ ಭಾಗದಲ್ಲಿರುತ್ತದೆ. ಇಲ್ಲಿ ಗುರುತ್ವಾಕರ್ಷಣೆಯು ಕನಿಷ್ಠವಾಗಿರುತ್ತದೆ. ಇದು ಸ್ಟೇಷನ್​ ಕೀಪಿಂಗ್‌ಗೆ ಅಗತ್ಯವಿರುವ ಪ್ರೊಪೆಲ್ಲಂಟ್ ಕಡಿಮೆ ಮಾಡುತ್ತದೆ. ಕರೋನಾವನ್ನು ವೀಕ್ಷಿಸಲು ಅತ್ಯಂತ ಕಷ್ಟಕರವಾಗಿದೆ. ಏಕೆಂದರೆ ಸೂರ್ಯನ ಪ್ರಕಾಶಮಾನವು ಕರೋನದ ಪ್ರಕಾಶಮಾನವಾದ ಬಿಂದುಕ್ಕಿಂತ ಮಿಲಿಯನ್ ಪಟ್ಟು ಹೆಚ್ಚಾಗಿದೆ. ಟೆಲಿಸ್ಕೋಪ್​ ಅನ್ನು ಕುರುಡಾಗಿಸುತ್ತದೆ. ಹೀಗಾಗಿ ವಿಜ್ಞಾನಿಗಳು ಕೃತಕ ಸೂರ್ಯಗ್ರಹಣಕ್ಕೆ ಪರಿಸ್ಥಿತಿಗಳನ್ನು ಸಿದ್ಧಪಡಿಸಿದ್ದಾರೆ.

ಓದಿ: 11 ತಿಂಗಳ ಬಳಿಕ ಮತ್ತೆ ಉಡ್ಡಯನಕ್ಕೆ ಸಜ್ಜಾಗಿದೆ ಇಸ್ರೋ: ಪಿಎಸ್​ಎಲ್​ವಿ ಮೂಲಕ ಏಕಕಾಲಕ್ಕೆ ಎರಡು ಸ್ಯಾಟ್​ಲೈಟ್​ಗಳ ಉಡಾವಣೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.