WATCH - ರಾಯಚೂರು: ಗುರ್ಜಾಪುರ ಬ್ರಿಡ್ಜ್ ಮೇಲೆ ಓಡಾಡಿದ ಮೊಸಳೆ! - CROCODILE WALK ON BRIDGE
🎬 Watch Now: Feature Video
Published : Dec 2, 2024, 10:39 AM IST
ರಾಯಚೂರು: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆಯೇ ಮೊಸಳೆ ಓಡಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಗೆ ಆತಂಕವನ್ನು ಹುಟ್ಟಿಸಿದೆ.
ತಾಲೂಕಿನ ಕಾಡ್ಲೂರು ಗ್ರಾಮದ ಗುರ್ಜಾಪುರ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಕೃಷ್ಣಾ ನದಿಯಲ್ಲಿ ಮೊಸಳೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಆಗಾಗ ನದಿ ತೀರದ ಗ್ರಾಮಗಳಿಗೆ ಆಹಾರ ಅರಸಿ ಬರುತ್ತವೆ. ಬ್ಯಾರೇಜ್ಗೆ ಅಳವಡಿಸಿರುವ ಗೇಟ್ಗಳು ಎಲ್ಲಾ ಮುಚ್ಚುವ ಮೂಲಕ ಬಂದ್ ಮಾಡಲಾಗಿದೆ. ಇದರಿಂದಾಗಿ ಮೊಸಳೆಗಳಿಗೆ ನದಿಯಲ್ಲಿ ಮುಂದೆ ತೆರಳಲು ಸಾಧ್ಯವಾಗುವುದಿಲ್ಲ. ಇದರಿಂದ ಬ್ರಿಡ್ಜ್ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ಸಂಬಂಧಿಸಿದ ಇಲಾಖೆ ಈ ಬಗ್ಗೆ ಗಮನ ಹರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಪೊಲೀಸರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಗುರ್ಜಾಪುರ ಬ್ರಿಡ್ಜ್ ಆಗಿದೆ. ಸಾಮಾನ್ಯವಾಗಿ ಅಲ್ಲಿಯ ಮೊಸಳೆಗಳು ನದಿಯಲ್ಲಿ ಕಂಡು ಬರುತ್ತವೆ. ಇದೀಗ ಬ್ರಿಡ್ಜ್ ಮೇಲೆ ಕಂಡು ಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಮೀಪ ಕಾಣಿಸಿಕೊಂಡ ಕಾಡಾನೆ