ETV Bharat / international

ಗಮನ ಸೆಳೆಯುತ್ತಿರುವ ಬೀಳುವ ಮನೆ: ಒಬ್ಬನೇ 20 ವರ್ಷಗಳಿಂದ ಕೈಯಿಂದಲೇ ನಿರ್ಮಿಸಿದ ಕಟ್ಟಡವಿದು! - ARIMASTON BUILDING JAPAN

ಅಯ್ಯೋ ಯಾವಾಗ ಬೀಳುತ್ತದೆಯೋ ಎಂಬ ಈ ಮನೆ ಕನಿಷ್ಠ ಅಂದರೂ 200 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ ಇದರ ನಿರ್ಮಾಣ ಕರ್ತ 59 ವರ್ಷದ ಕೀಸುಕೆ ಓಕಾ.

arimaston-building-japanese-architect-spends-20-years-building-ramshackle-tower-by-hand
ಅರಿಮಾಸ್ಟನ್​ ಕಟ್ಟಡ (eಎಫ್​ಪಿ)
author img

By ETV Bharat Karnataka Team

Published : Nov 27, 2024, 4:20 PM IST

ಟೋಕಿಯೋ, ಜಪಾನ್: ಮನೆ ಎಂಬುದು ಕೇವಲ ಕಟ್ಟಡವಲ್ಲ. ಅದೊಂದು ಭಾವನೆಗಳ ಸೌಧ. ಅದೇ ಕಲ್ಪನೆಯಲ್ಲಿ ಜಪಾನಿನ ವ್ಯಕ್ತಿಯೊಬ್ಬರು ಕೈಯಿಂದ ಮನೆ ನಿರ್ಮಾಣ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ.

ರಸ್ತೆಯ ಬದಿಯಲ್ಲಿ ನಿರ್ಮಾಣವಾಗಿರುವ ಈ ಮನೆ ಕಂಡಾಕ್ಷಣ ಅನಿಮೇಷನ್​ನಂತೆ ಕಾಣುತ್ತದೆ. ಅಯ್ಯೋ ಯಾವಾಗ ಬೀಳುತ್ತದೆಯೋ ಎಂಬ ಈ ಮನೆ ಕನಿಷ್ಠ ಅಂದರೂ 200 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ ಇದರ ನಿರ್ಮಾಣ ಕರ್ತ 59 ವರ್ಷದ ಕೀಸುಕೆ ಓಕಾ.

ಗಮನ ಸೆಳೆಯುತ್ತಿರುವ ಬೀಳುವ ಮನೆ (AFP)

20 ವರ್ಷದಿಂದ ನಿರ್ಮಾಣ ಆಗುತ್ತಲೇ ಇದೆ ಈ ಮನೆ: ಅರಿಮಾಸ್ಟನ್​ ಕಟ್ಟಡ ಎಂಬ ಈ ನಾಲ್ಕು ಅಂತಸ್ಥಿನ ಮನೆಯನ್ನು ಕಳೆದ 20 ವರ್ಷದಿಂದ ನಿರ್ಮಾಣ ಮಾಡುತ್ತಿದ್ದಾರೆ ಓಕಾ. ಇಂದಿನ ಕಾಲದಲ್ಲಿ ಅತ್ಯುತ್ತಮ ವಿನ್ಯಾಸ ಮನೆಯನ್ನು ಕ್ಷಣಮಾತ್ರದಲ್ಲಿ ನಿರ್ಮಾಣ ಮಾಡುವಾಗ ಕೈಯಿಂದ ಕಾಂಕ್ರಿಟ್​ ಮನೆ ಕಟ್ಟುತ್ತಿರುವ ಕುರಿತು ಮಾತನಾಡಿರುವ ಓಕಾ, ಜಗತ್ತಿನಲ್ಲಿ ಸಾಕಷ್ಟು ವಸ್ತುಗಳನ್ನು ಉತ್ಪಾದಿಸಲಾಗುತ್ತಿದೆ. ಅದನ್ನು ನಾವು ತಪ್ಪಿಸಬೇಕಿದ್ದು, ಮತ್ತೊಂದು ಮಾರ್ಗವಿದ್ದು, ಇಲ್ಲದೇ ಹೋದಲ್ಲಿ ನಾವು ತೊಂದರೆಗೆ ಸಿಲುಕಿಕೊಳ್ಳುತ್ತೇವೆ ಎಂದಿದ್ದಾರೆ.

ನೋಡಿದ ತಕ್ಷಣ ಎಲ್ಲರ ಗಮನ ಸೆಳೆಯುವ, ವಿಚಿತ್ರ ಮತ್ತು ಅದ್ಬುತವಾಗಿ ನಿರ್ಮಾಣವಾಗಿರುವ ನಾಲ್ಕು ಅಂತಸ್ತಿನ ಈ ಮನೆಯನ್ನು ಇದೀಗ ಜನರು ಗಿಬ್ಲಿ ಸಿನಿಮಾದ ಹೌಲ್ಸ್​ ಮೂವಿಂಗ್​ ಕ್ಯಾಸಲ್​ (ಗೂಬೆಯ ಚಲಿಸುವ ಅರಮನೆ)ಗೆ ಹೋಲಿಕೆ ಮಾಡುತ್ತಿದ್ದಾರೆ. ಅರಿಮಾಸ್ಟನ್​ ಕಟ್ಟಡವೂ ಸ್ಪನೀಶ್​​ ವಿನ್ಯಾಸವನ್ನು ಹೊಂದಿದ್ದು, ಟೋಕಿಯಾ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.

ಸ್ವತಃ ವಿನ್ಯಾಸ ಮಾಡಿದ ಓಕಾ: ಓಕಾ ಅವರು ಈ ಮನೆ ವಿನ್ಯಾಸವನ್ನು ಸ್ವತಃ ಮಾಡಿದ್ದಾರೆ. ಅಲ್ಲದೇ ಸ್ವತಃ ನಿರ್ಮಿಸಿದ್ದಾರೆ. ಸದ್ಯ ವೇಗವಾಗಿ ಬೆಳೆಯುತ್ತಿರುವ ಜಪಾನ್​ ಕಟ್ಟಡ ಮತ್ತು ನಗರವನ್ನು ನೋಡಿದಾಗ ಓಕಾಗೆ ಬೇಜಾರಾಗುತ್ತದೆ, ಕಾರಣ ಎಲ್ಲಾ ವಿನ್ಯಾಸಗಳ ಕಂಪ್ಯೂಟರೀಕರಣಗೊಂಡಿದೆ. ಮನೆ ನಿರ್ಮಾಣ ಮಾಡುವ ವ್ಯಕ್ತಿ ಮತ್ತು ಅದನ್ನು ವಿನ್ಯಾಸ ಮಾಡುವ ವ್ಯಕ್ತಿಗಳಿಗೆ ಸಂಬಂಧವೇ ಇರುವುದಿಲ್ಲ. ಮನೆಗೆ ಜೀವಂತಿಕೆ ನೀಡುವ ಉದ್ದೇಶದಿಂದಾಗಿ ನಾನು ಈ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ ಅಂತಾರೆ ಅವರು.

20 ವರ್ಷದಿಂದ ನಿರ್ಮಾಣ: ಓಕಾ 2005ರಲ್ಲಿ ಈ ಮನೆ ನಿರ್ಮಾಣಕ್ಕೆ ಮುಂದಾದರೂ. ಆರಂಭದಲ್ಲಿ ಕೆಲವು ಸ್ನೇಹಿತರು ಸಹಾಯ ಮಾಡಿದರೂ ಬಳಿಕ ಸಂಪೂರ್ಣ ಕಟ್ಟಡವನ್ನು ಕೈಯಿಂದ ಅವರೇ ನಿರ್ಮಾಣ ಮಾಡಿದ್ದರು. ಮನೆಗೆ ಕಾಂಕ್ರೀಟ್​​ ಅನ್ನು ಕೂಡ ತಾವೇ ಸ್ವತಃ ಕಲಿಸಿದ್ದಾಗಿ ಹೇಳಿದ ಅವರು, 200 ವರ್ಷಗಳ ಕಾಲ ಈ ಮನೆ ಇರಲಿದೆ ಎಂಬ ಮಾತು ಆಡುತ್ತಾರೆ.

ಸದ್ಯ ಮನೆಯ ಮೂಲಭೂತ ವಿನ್ಯಾಸಗಳು ಮುಗಿದಿದೆ. ನಾಲ್ಕು ಅಂತಸ್ಥಿನ ಕಟ್ಟಡದಲ್ಲಿ ಕಳೆಗಿನ ಬೇಸ್​​ಮೆಂಟ್​ ಅನ್ನು ಸ್ಟುಡಿಯೋ ಮತ್ತು ಪ್ರದರ್ಶನದ ಜಾಗವಾಗಿ ನಿರ್ಮಾಣ ಮಾಡಲಾಗುವುದು. ಉಳಿದ ಮೂರು ಅಂತಸ್ಥಿನಲ್ಲಿ ತಾವಿರುವುದಾಗಿ ಹೇಳಿದ್ದಾರೆ.

ಮನೆ ನಿರ್ಮಾಣ ಮಾಡುವಾಗ ಈ ಯೋಜನೆ 20 ವರ್ಷ ಸಮಯ ತೆಗೆದುಕೊಳ್ಳುತ್ತದೆ ಎಂದು ಯೋಚಿಸಿರಲಿಲ್ಲ. ಆರಂಭದಲ್ಲಿ ನನ್ನ ಸಾಮಾರ್ಥ್ಯದ ಮೇಲೆ ಮೂರು ವರ್ಷದಲ್ಲಿ ಮನೆ ನಿರ್ಮಾಣ ಮಾಡುವ ಗುರಿ ಹೊಂದಿದೆ. ಬಳಿಕ ಅದರ ವಿನ್ಯಾಸವನ್ನು ಸುಧಾರಣೆ ಮಾಡುವುದೇ ದೊಡ್ಡ ಸವಾಲಾಗಿದ್ದು, ಇದರಿಂದ ಸಮಯ ಹಿಡಿಯಿತು.

ಜಪಾನ್​ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಓಕಾಮ ವಾಸ್ತುಶಿಲ್ಪದ ವಿದ್ಯಾರ್ಥಿ. 30ನೇ ವರ್ಷದಲ್ಲಿ ಎದುರಾದ ದೈಹಿಕ ಸಮಸ್ಯೆಯಂದ ಈ ಕ್ಷೇತ್ರವನ್ನು ತೊರೆದರು. ಈತನ ಹೆಂಡತಿಗೆ ಸಣ್ಣ ಜಾಗ ಕೊಂಡು ಮನೆ ನಿರ್ಮಾಣ ಮಾಡುವ ಕನಸಿತ್ತು. ಈ ಅರಿಮಾಸ್ಟನ್​ ಕಟ್ಟಡ ನಿರ್ಮಾಣದಿಂದ ನನ್ನ ಆತ್ಮವಿಶ್ವಾಸ ಹೆಚ್ಚಿತು. ಜನರು ಓಡಾಡುವಾಗ ಮನೆ ನೋಡಿ ತೋರುವ ಪ್ರತಿಕ್ರಿಯೆಯನ್ನು ಸಂಭ್ರಮಿಸುತ್ತೇನೆ ಎಂದಿದ್ದಾರೆ.

ಸಮಾಜದಿಂದ ದೂರ: ಅರಿಮಾಸ್ಟರ್​ ಕಟ್ಟಡವೂ ಬೀದಿಯಲ್ಲಿ ಒಂಟಿಯಾಗಿ ಎದ್ದು ನಿಂತ ಕಟ್ಟಡವಾಗಿದೆ. ಕಾರಣ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವ ಪುನರಾಭಿವೃದ್ಧಿ. ಬದಲಾವಣೆ ಭಾಗವಾಗಿ ಮನೆಯನ್ನು ರಸ್ತೆಯಿಂದ 10 ಮೀಟರ್​ ದೂರದಲ್ಲಿ ನಿರ್ಮಿಸಿದ್ದಾರೆ. ಈ ಮನೆ ಒಮ್ಮೆ ಸಂಪೂರ್ಣಗೊಂಡಾಗ ಇಲ್ಲಿಯೇ ವಾಸ್ತವ್ಯ ಹೂಡುತ್ತೇನೆ. ಇದೀಗ ಅಂತಿಮ ಸ್ಪರ್ಶದ ಕಾರ್ಯ ನಡೆಯುತ್ತಿದೆ ಎನ್ನುವ ಓಕಾ ಯುನಿವರ್ಸಿಟಿಯಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೈಯಿಂದ ನಿರ್ಮಾಣವಾದ ಯಾವುದೇ ವಸ್ತುಗಳನ್ನು ಜನರು ಮೆಚ್ಚುತ್ತಾರೆ ಎಂಬ ಭರವಸೆ ಇದೆ. ನನ್ನ ತಾಯಿ ಕೂಡ ಕೈಯಿಂದ ಬಟ್ಟೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಾರಣ ಇದರ ವೆಚ್ಚ ಕಡಿಮೆ ಎಂಬುದಾಗಿ. ಅದೇ ತತ್ವವನ್ನು ಇದೀಗ ನಾನು ಅನುಸರಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕೊನೆಗೂ ಇಸ್ರೇಲ್, ಹಿಜ್ಬುಲ್ಲಾ ಮಧ್ಯೆ 60 ದಿನಗಳ ಕದನ ವಿರಾಮ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.