ಮದುವೆ ಮಂಟಪಕ್ಕೆ ಟ್ರ್ಯಾಕ್ಟರ್ ಏರಿ ಬಂದಳು... ರೈತರ ಹೋರಾಟಕ್ಕೆ ತನ್ನ ಬೆಂಬಲ ಎಂದ ವಧು! - ಟ್ರ್ಯಾಕ್ಟರ್ ಏರಿ ಬಂದ ಮಹಿಳೆ
🎬 Watch Now: Feature Video
ಯವತ್ಮಾಲ್(ಮಹಾರಾಷ್ಟ್ರ): ಕೃಷಿ ಕಾಯ್ದೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟ ಮುಂದುವರೆದಿದ್ದು, ಇದೀಗ ಮದುಮಗಳೊಬ್ಬಳು ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾಳೆ. ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಟ್ರ್ಯಾಕ್ಟರ್ ಡ್ರೈವ್ ಮಾಡಿಕೊಂಡು ಬಂದಿದ್ದಾಳೆ. ಈ ವೇಳೆ ಮಾತನಾಡಿರುವ ವಧು, ರೈತರ ಹೋರಾಟಕ್ಕೆ ತಾನು ಬೆಂಬಲ ಸೂಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾಳೆ.