ಬೇಡಿಕೊಂಡ್ರೂ ಬಿಡದ ಸರ್ಪ... ತಾಯಿ ಶ್ವಾನದ ಎದುರೇ ಮರಿಗಳನ್ನು ಕಚ್ಚಿ-ಕಚ್ಚಿ ಕೊಂದ ನಾಗ! ವಿಡಿಯೋ... - ಹೈದರಾಬಾದ್ ಸುದ್ದಿ
🎬 Watch Now: Feature Video
ತೆಲಂಗಾಣದ ಹೈದರಾಬಾದ್ ನಾಗೋಲ್ನ ಆರ್ಟಿಎ ಕಾರ್ಯಾಲಯ ಬಳಿ ಮನಕಲಕುವಂತ ಘಟನೆಯೊಂದು ನಡೆದಿದೆ. ಕಾರ್ಯಾಲಯದ ಸಮೀಪದ ಕಾರ್ ಶೆಡ್ನಲ್ಲಿ ಶ್ವಾನವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದ್ರೆ ಆ ತಾಯಿ ಶ್ವಾನದ ಸಂತೋಷವನ್ನು ನಾಗರಹಾವು ಕಸಿದುಕೊಂಡಿದೆ. ಶೆಡ್ ಬಳಿ ಬಂದ ನಾಗರಹಾವು ಶ್ವಾನದ ಎರಡು ಮರಿಗಳ ಮೇಲೆ ದಾಳಿ ಮಾಡಿದೆ. ನಾಗರಹಾವಿನಿಂದ ಶ್ವಾನ ತನ್ನ ಮರಿಗಳನ್ನು ಕಾಪಾಡಲು ಯತ್ನಿಸಿದ್ರೂ ಪ್ರಯೋಜನವಾಗಿಲ್ಲ. ತಾಯಿ ಶ್ವಾನದ ಎದುರೇ ಹಾವು ಎರಡು ಮರಿಗಳನ್ನು ಕಚ್ಚಿ ಸಾಯಿಸಿತು. ಬಳಿಕ ಹಾವು ಅಲ್ಲಿಂದ ಕಾಲ್ಕಿತ್ತಿದೆ. ಮರಿಗಳನ್ನು ಕಳೆದುಕೊಂಡ ಆ ಶ್ವಾನದ ಆಕ್ರಂದನ ನೆರೆದಿದ್ದವರನ್ನು ಮರುಗುವಂತೆ ಮಾಡಿತು.