ಗಡಿಯಿಂದ ಚೀನಾ ಪಡೆ ಹಿಂದೆ ಸರಿಯುತ್ತಿದೆ: ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ - ಪಾಂಗೊಂಗ್ ಸರೋವರ ತೀರದಿಂದ ಚೀನಾ ಪಡೆ ಹಿಂದಕ್ಕೆ ಸರಿಯುತ್ತಿದೆ
🎬 Watch Now: Feature Video

ನವದೆಹಲಿ: ಇಂದು ಬೆಳಗ್ಗೆ ನಡೆದ ರಾಜ್ಯಸಭಾ ಕಲಾಪದಲ್ಲಿ ಪ್ಯಾಂಗಾಂಗ್ ಸರೋವರ ತೀರದಿಂದ ಚೀನಾ ಪಡೆ ಹಿಂದಕ್ಕೆ ಸರಿಯುತ್ತಿದೆ ಎಂದಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದೀಗ ಲೋಕಸಭೆಯಲ್ಲಿ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಚೀನಾದೊಂದಿಗಿನ ನಿರಂತರ ಮಾತುಕತೆಗಳಿಂದಾಗಿ ಹಂತ ಹಂತವಾಗಿ ಗಡಿ ಪ್ರದೇಶಗಳಲ್ಲಿ ಚೀನಾ ತನ್ನ ಸೈನಿಕರನ್ನು ನಿಯೋಜಿಸುವುದನ್ನು ನಿಲ್ಲಿಸಲಿದೆ ಎಂದು ಸಚಿವರು ಹೇಳಿದ್ದಾರೆ.