ಏನಾಗಿದೆ ಅಂತಾ ನೋಡಲು ನಿಂತಿದ್ದವರ ಮೇಲೆ ಹರಿದ ಕಾರು... ಕ್ಷಣಾರ್ಧದಲ್ಲಿ ನಡೀತು ಭೀಕರ ದುರಂತ - ಡ್ರೈವರ್ ವೇಗವರ್ಧಕ ಬಟನ್
🎬 Watch Now: Feature Video
ಕಾರು ನೋಡಲು ನಿಂತಿದ್ದವರ ಮೇಲೆ ಅದು ಹರಿದ ಕಾರಣ ಅನೇಕರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಕಿಶನ್ಘರ್ನಲ್ಲಿ ನಡೆದಿದೆ. ಟೋಲ್ ಪ್ಲಾಜಾ ಪಕ್ಕದಲ್ಲಿ ಕಾರೊಂದು ಕೆಟ್ಟು ನಿಂತಿತ್ತು. ಈ ವೇಳೆ ಏನಾಗಿದೆ ಎಂದು ನೋಡುವ ಕುತೂಹಲದಿಂದ ಎಲ್ಲರೂ ಅಲ್ಲಿಗೆ ತೆರಳಿದ್ದಾರೆ. ತಕ್ಷಣವೇ ಡ್ರೈವರ್ ಸ್ಟಾರ್ಟ್ ಬಟನ್ ಒತ್ತಿದ್ದರಿಂದ ಕಾರು ರಭಸದಲ್ಲಿ ಹಿಂದೆ ಹೋಗಿ ಮುಂದೆ ಬಂದಿದೆ. ಈ ವೇಳೆ ಅದರ ಸುತ್ತಮುತ್ತ ನಿಂತಿದ್ದವರ ಮೇಲೆ ಹರಿದಿದ್ದು, ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲವಾದರೂ ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ.