ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮಕ್ಕಳ ರಕ್ಷಣೆ - ವಿಡಿಯೋ - ಹಿಮಾಚಲ ಪ್ರದೇಶ
🎬 Watch Now: Feature Video

ಚಂಬಾ (ಹಿಮಾಚಲ ಪ್ರದೇಶ): ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಮಕ್ಕಳನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭಟ್ಟಿಯಾತ್ ಪ್ರದೇಶದಲ್ಲಿ ನಡೆದಿದೆ. ಹೊಬಾರ್ಡಿ ಖಾದ್ ಜಲಪಾತವನ್ನು ದಾಟಲು ಮಕ್ಕಳು ಯತ್ನಿಸುತ್ತಿದ್ದ ವೇಳೆ ಬಿದ್ದು, ಪ್ರವಾಹದಲ್ಲಿ ಸಿಲುಕಿದ್ದಾರೆ. ಮಕ್ಕಳು ಚೀರಾಡುವ ದನಿ ಕೇಳಿಸಿಕೊಂಡ ಜನರು ಸ್ಥಳಕ್ಕೆ ದೌಡಾಯಿಸಿ ಅವರನ್ನು ರಕ್ಷಿಸಿದ್ದಾರೆ.