ಲೋಕಸಭೆಯಲ್ಲಿ ಮೇಲಿಂದ ಮೇಲೆ ತಮಿಳುನಾಡು ಪ್ರಸ್ತಾಪ.. 'ನಾನು ತಮಿಳಿಗ' ಎಂದ ರಾಹುಲ್ ಗಾಂಧಿ!
🎬 Watch Now: Feature Video
ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ತಮ್ಮ ಭಾಷಣದ ಉದ್ದಕ್ಕೂ ಅನೇಕ ಸಲ ತಮಿಳುನಾಡಿನ ಪ್ರಸ್ತಾಪ ಮಾಡಿದರು. ಹೊರಬರುತ್ತಿದ್ದಂತೆ ಪತ್ರಕರ್ತರು ಪ್ರಶ್ನೆ ಕೇಳಿದ್ದು, ಮೈ ತಮಿಳು ಹೂಂ ನಾ(Main Tamil hoon na) ನಾನು ತಮಿಳಿಗ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ಭಾಷಣದ ವೇಳೆ ಉತ್ತರ ಪ್ರದೇಶದ ಬಗ್ಗೆ ಉಲ್ಲೇಖ ಮಾಡಿರುವ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆ ರಾಹುಲ್ ತರಾತುರಿಯಲ್ಲಿ ತೆರಳಿದ್ದಾರೆ.