ಬಿಹಾರದಲ್ಲೂ ನಿಲ್ಲದ ವರುಣನ ಅಬ್ಬರ: ಪ್ರವಾಹದ ಅಟ್ಟಹಾಸಕ್ಕೆ ಜನರ ಬದುಕು ಬರ್ಬರ - Heavy rains in Bihar
🎬 Watch Now: Feature Video
ಮೋತಿಹಾರ( ಬಿಹಾರ): ಪೂರ್ವ ಚಂಪಾರಣ ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಜನರು ರಸ್ತೆಗಳಲ್ಲಿ, ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಅನೇಕ ಮನೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಉಳಿದವು ನೀರಿನಲ್ಲಿ ಮುಳುಗಡೆ ಆಗಿವೆ. ಜನರು ಅನ್ನ ನೀರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ಇಲ್ಲಿನ ಸುಗೋಲಿ ತಾಲೂಕಿನ ಸುಕುಲಿ ಪಕಡ್ ಪಂಚಾಯತ್‌ನ ಧುಮಾನಿ ಟೋಲಾ ಬಳಿ ಸಿಕರಹನಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜ್ ಒಡೆದು ಅಪಾರ ಹಾನಿ ಸಂಭವಿಸಿದೆ. ಇದರಿಂದ ಹಾನಿಗೊಳಗಾದ ಜನರು ರಸ್ತೆಯಲ್ಲಿ ಆಶ್ರಯ ಪಡೆದಿದ್ದಾರೆ.