ಮೇಲಾಧಿಕಾರಿಗಳ ಒತ್ತಡದ ಭೀತಿಯಿಂದ ನಕಲಿ ಕೋವಿಡ್ ಮಾದರಿ ಸಂಗ್ರಹ : ವಿಡಿಯೋ ವೈರಲ್ - ಉತ್ತರ ಪ್ರದೇಶದಲ್ಲಿ ನಕಲಿ ಕೋವಿಡ್ ಮಾದರಿ ಸಂಗ್ರಹ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8867036-thumbnail-3x2-news.jpg)
ಮಥುರಾ: ಜಿಲ್ಲೆಯ ಡೋರಿಲಾಲ್ ಅಗರ್ವಾಲ್ ಆರೋಗ್ಯ ಸಮುದಾಯ ಕೇಂದ್ರದಲ್ಲಿ ನಕಲಿ ಕೊರೊನಾ ಸ್ಯಾಂಪಲ್ ಸಂಗ್ರಹ ದಂಧೆ ನಡೆಯುತ್ತಿದೆ. ಹೆಚ್ಚು ಹೆಚ್ಚು ಜನರ ಸ್ಯಾಂಪಲಿಂಗ್ ಮಾಡಬೇಕು ಇಲ್ಲದಿದ್ದರೆ ಆರೋಗ್ಯಾಧಿಕಾರಿಗಳ ಒತ್ತಡ ಎದುರಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಹೆಚ್ಚು ಹೆಚ್ಚು ಜನರ ಸ್ಯಾಂಪಲ್ ಪಡೆಯುವಂತೆ ವೈದ್ಯರು ಕಾಂಪೌಂಡರ್ಗೆ ಹೇಳುತ್ತಿದ್ದಾರೆ. ಅಧಕಾರಿಗಳ ಭೀತಿಯಿಂದ ಬೇಕಾಬಿಟ್ಟಿ ಸ್ಯಾಂಪಲ್ ಪಡೆದು, ಯಾರದ್ದೋ ಹೆಸರಿನಲ್ಲಿ ಕಳುಹಿಸಿ ಕೊಡುತ್ತಿರುವುದು ಗೊತ್ತಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.