ರಸ್ತೆಬದಿ ನಡೆದುಕೊಂಡು ಹೋಗ್ತಿದ್ದ ಬಿಜೆಪಿ ಮುಖಂಡನಿಗೆ ಗುಂಡಿಕ್ಕಿ ಕೊಲೆ: ವಿಡಿಯೋ - ಬಿಜೆಪಿ ಮುಖಂಡ
🎬 Watch Now: Feature Video
ದನ್ಬಾದ್(ಜಾರ್ಖಂಡ್): ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಬಿಜೆಪಿ ಮುಖಂಡನಿಗೆ ಬೈಕ್‌ನಲ್ಲಿ ಆತನ ಹಿಂಭಾಗದಿಂದ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದಿದ್ದಾರೆ. ಜಾರ್ಖಂಡ್ನ ದನ್ಬಾದ್ನಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಮುಖಂಡ ಸತೀಶ್ ಸಿಂಹ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.