ರೊಮೇನಿಯಾದಿಂದ ತೇಲಿ ಬಂತು ದೇವಾಲಯ.. ಆಂಧ್ರದ ಚೀರಲ ತೀರದಲ್ಲಿ ಪರಮಾಶ್ಚರ್ಯ! - Prakasam district cheerala
🎬 Watch Now: Feature Video
ಆಂಧ್ರಪ್ರದೇಶ: ಪ್ರಕಾಶಂ ಜಿಲ್ಲೆಯ ಚಿರಾಲಮಂಡಲ ವಿಜಯಲಕ್ಷ್ಮಿಪುರಂ ತೀರದಲ್ಲಿ ಮರದಿಂದ ಮಾಡಿದ ದೊಡ್ಡ ದೇವಾಲಯವೊಂದು ಹಾಯಿ ದೋಣಿಯ ಮೂಲಕ ತೀರಕ್ಕೆ ಸಾಗಿ ಬಂದಿದೆ. 10 ಅಡಿ ಎತ್ತರದ ಈ ತೇಲುವ ದೇವಾಲಯದಲ್ಲಿ 12 ಕೆಜಿ ತಾಮ್ರದ ಬುದ್ಧನ ಪ್ರತಿಮೆ ಕೂಡ ಇದೆ. ಅಲ್ಲದೇ ಇದರಲ್ಲಿನ ಮ್ಯಾಚ್ಬಾಕ್ಸ್ನಲ್ಲಿ ರೊಮೇನಿಯಾ ಹೆಸರಿದೆ. ಈ ಅಚ್ಚರಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ವೀಕ್ಷಿಸಲು ಆಗಮಿಸುತ್ತಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.