'ರಾಷ್ಟ್ರೀಯ ಅರಿಶಿಣ ಮಂಡಳಿ' ರಚನೆಗೆ ಲೋಕಸಭೆಯಲ್ಲಿ ಬಚ್ಚೇಗೌಡ ಆಗ್ರಹ - Chikkaballapur MP B N bache gowda
🎬 Watch Now: Feature Video
ನವದೆಹಲಿ : ಭಾರತದಲ್ಲೇ ತೆಲಂಗಾಣದಲ್ಲಿ ಮಾತ್ರ ಅರಿಶಿಣ ಬೆಳೆ ಮಂಡಳಿಯಿದೆ. ಕರ್ನಾಟಕದಲ್ಲೂ ಅರಿಶಿಣ ಬೆಳಗಾರರಿದ್ದಾರೆ. ಚಾಮರಾಜನಗರ ಸೇರಿ ಕರ್ನಾಟಕದ ಹಲವೆಡೆ ವ್ಯಾಪಕವಾಗಿ ಅರಿಶಿಣ ಬೆಳೆಯಲಾಗುತ್ತದೆ. ಹೀಗಾಗಿ 'ರಾಷ್ಟ್ರೀಯ ಅರಿಶಿಣ ಮಂಡಳಿ'ಯನ್ನು ರಚಿಸಬೇಕು ಎಂದು ಇಂದಿನ ಲೋಕಸಭಾ ಕಲಾಪದಲ್ಲಿ ಚಿಕ್ಕಬಳ್ಳಾಪುರ ಸಂಸದ ಬಿ ಎನ್ ಬಚ್ಚೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.