ಗನ್​ ಜೊತೆ ಆಟವಾಡುತ್ತಾ ಅವಘಡ: ಗುಂಡು ತಗುಲಿ 11 ವರ್ಷದ ಬಾಲಕ ಸಾವು - ಗನ್​ ಜೊತೆ ಆಟವಾಡುತ್ತಾ ಗುಂಡು ತಗುಲಿ 11 ವರ್ಷದ ಬಾಲಕ ಸಾವು

🎬 Watch Now: Feature Video

thumbnail

By

Published : Jan 12, 2020, 11:56 PM IST

ರಾಜಸ್ಥಾನ: ಬುಲೆಟ್​ ತುಂಬಿದ್ದ ಗನ್​​ನಲ್ಲಿ ಆಟವಾಡಲು ಹೋಗಿ ಗುಂಡು ತಗುಲಿ 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ರಾಜಸ್ಥಾನದ ಸಿಕಾರ್​ ಜಿಲ್ಲೆಯ ಸಿಹೋಟ್​ ಗ್ರಾಮದಲ್ಲಿ ನಡೆದಿದೆ. ಶುಭಂ ಮೃತ ಬಾಲಕ. ಗ್ರಾಮದ ಜಮೀನೊಂದರಲ್ಲಿ ಜಮೀನು ಕಾಯುವ ವ್ಯಕ್ತಿಯು ಬಂದೂಕನ್ನು ಇಟ್ಟು ಹೋಗಿದ್ದಾನೆ. ಈ ವೇಳೆ ಆಟವಾಡುತ್ತಾ ಬಂದ ಬಾಲಕ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಾ ಆಕಸ್ಮಿಕವಾಗಿ ಶೂಟ್​ ಮಾಡಿಕೊಂಡಿದ್ದಾನೆ. ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವ ಸಿಹೋಟ್ ಗ್ರಾಮದ ರಾಧೇಶ್ಯಾಮ್ ಎಂಬವರ ಏಕೈಕ ಪುತ್ರ ಶುಭಂ ಆಗಿದ್ದು, ಜಮೀನು ಕಾವಲುಗಾರನ ವಿರುದ್ಧ ಮೃತ ಬಾಲಕನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.