ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿದ ಪೊಲೀಸ್ರು... ಬೈಕ್ ಎತ್ತಿ ಎಸೆದು ಸವಾರನ ರಂಪಾಟ! - ಟ್ರಾಫಿಕ್ ಪೊಲೀಸರು ಬೈಕ್ ಸವಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5229849-thumbnail-3x2-wdfdfdf.jpg)
ಮೀರತ್: ಹೆಲ್ಮೆಟ್ ಹಾಕಿಲ್ಲ ಎಂದು ಟ್ರಾಫಿಕ್ ಪೊಲೀಸರು ಬೈಕ್ ಸವಾರನಿಗೆ ದಂಡ ಹಾಕಿದ್ದು, ಇದರಿಂದ ಆಕ್ರೋಶಗೊಂಡು ತನ್ನ ಬೈಕ್ಅನ್ನು ರಸ್ತೆ ಮೇಲೆ ಎರಡು ಸಲ ಎತ್ತಿ ಎಸೆದಿದ್ದಾನೆ. ಉತ್ತರಪ್ರದೇಶದ ಮೀರತ್ನಲ್ಲಿ ಈ ಘಟನೆ ನಡೆದಿದ್ದು, ತದನಂತರ ತನ್ನ ಬೈಕ್ ಮೇಲೆ ಕುಳಿತು ಕಣ್ಣೀರು ಹಾಕಿದ್ದಾನೆ. ಈ ಘಟನೆಯ ಸಂಪೂರ್ಣ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತದನಂತರ ಟ್ರಾಫಿಕ್ ಪೊಲೀಸರು ಬೈಕ್ ಸವಾರನನ್ನ ಸಮಾಧಾನ ಮಾಡಿದ್ದಾರೆ.