ಎವರೆಸ್ಟ್ ಶಿಖರ ಏರುವುದು ನನ್ನ ಕನಸು: ಪರ್ವತಾರೋಹಿ ಮನೀಶ್ ಮನದಾಳ - ಕಣ್ಣೂರಿನ ಪರ್ವತಾರೋಹಣ ಪ್ರೇಮಿ
🎬 Watch Now: Feature Video
ಕಣ್ಣೂರಿನ ಚೆರುಕುನ್ನಿಲ್ ಮನೀಶ್, 40 ವರ್ಷದ ಇತಿಹಾಸ ಪದವೀಧರ. ಇವರಿಗೆ ಪರ್ವತಾರೋಹಣ ಎಂದರೆ ಎಲ್ಲಿಲ್ಲದ ಪ್ರೀತಿ. ಕಳೆದ 16 ವರ್ಷಗಳಲ್ಲಿ ಅವರು ಭಾರತದ 14 ಪರ್ವತಗಳ ಎತ್ತರವನ್ನು ಅಳೆದಿದ್ದಾರೆ. ಕೋವಿಡ್ ಸಾಂಕ್ರಾಮಿಕವು ಎವರೆಸ್ಟ್ ಪರ್ವತವನ್ನು ಅಳೆಯುವ ಈತನ ಕನಸಿಗೆ ಅಡ್ಡಿಯಾಗಿದೆ. ವಾಲಪ್ಪಿಲ್ ಗೋವಿಂದನ್ ಮತ್ತು ಮೀನಾಕ್ಷಿ ಅವರ ಹಿರಿಯ ಮಗ ಮನೀಶ್‌ಗೆ, ಪರ್ವತಾರೋಹಣವು ಅವರ ಬಾಲ್ಯದ ಕನಸಾಗಿತ್ತು. ಅವರು ಸಂಗ್ರಹಿಸಿದ ಹಣದಿಂದ, ಮನೀಶ್ 2004 ಮನಾಲಿಯಲ್ಲಿರುವ ಅಟಲ್ ಬಿಹಾರಿ ಪರ್ವತಾರೋಹಣ ಸಂಸ್ಥೆಯಲ್ಲಿ ಪರ್ವತಾರೋಹಣದಲ್ಲಿ ಮೂಲಭೂತ ಕೋರ್ಸ್‌ಗೆ ಸೇರಿ ತರಬೇತಿ ಪಡೆದಿದ್ದಾರೆ.