ಸಿದ್ದರಾಮಯ್ಯ ಜತೆ ಸೆಲ್ಫಿ ತೆಗೆಸಿಕೊಳ್ಳಲು ಅವಕಾಶ ಸಿಗದಿದ್ದಕ್ಕೆ ಪೊಲೀಸರ ವಿರುದ್ಧ ಗರಂ ಆದ ಯುವತಿ! - ಚಿಕ್ಕಮಗಳೂರು ಯುವತಿಯ ಸೆಲ್ಫಿ ಕಿರಿಕ್
🎬 Watch Now: Feature Video
ಚಿಕ್ಕಮಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಸೆಲ್ಫಿಗೆ ಕಾದು ಕುಳಿತಿದ್ದ ಯುವತಿಗೆ ಪೊಲೀಸರು ಅಡ್ಡಿ ಪಡಿಸಿದ ಹಿನ್ನೆಲೆ ಯುವತಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಬಳಿ ನಡೆದಿದೆ. ಬಿಜೆಪಿ ವಿರುದ್ಧದ ಪ್ರತಿಭಟನೆಗಾಗಿ ಸಿದ್ದರಾಮಯ್ಯ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಅವರ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಯುವತಿ ಕಾದು ಕುಳಿತಿದ್ದು, ಕಾರ್ಯಕ್ರಮದ ನಂತರ ಭೇಟಿ ಮಾಡಿಸುವುದಾಗಿ ಪೊಲೀಸರು ಯುವತಿಗೆ ಆಶ್ವಾಸನೆ ನೀಡಿದ್ದರು. ಆದರೆ, ಕೊನೆಗೂ ಸಿದ್ದರಾಮಯ್ಯರಿಗೆ ಯುವತಿಯನ್ನು ಭೇಟಿ ಮಾಡಿಸಲಿಲ್ಲ. ಸಿದ್ದರಾಮಯ್ಯ ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದಂತೆ ಪೊಲೀಸರ ಮೇಲೆ ಯುವತಿ ಗರಂ ಆಗಿದ್ದು, ಪೊಲೀಸರಿಗೆ ಮನಸೋ ಇಚ್ಛೆ ಬೈದು ತನ್ನ ಆಕ್ರೋಶವನ್ನು ಹೊರ ಹಾಕಿದ್ದಾಳೆ.
Last Updated : Feb 3, 2023, 8:22 PM IST