ಅಪಘಾತಕ್ಕೀಡಾದ ಕಾರಿನಲ್ಲಿದ್ದವರಿಗೆ ಉಪಚರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ - etv bharat kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17391690-thumbnail-3x2-news.jpg)
ಶಿವಮೊಗ್ಗ: ಅಪಘಾತವಾಗಿದ್ದ ಕಾರಿನಲ್ಲಿದ್ದವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೆರವಾಗಿದ್ದಾರೆ. ಬುಧವಾರ ಗೃಹ ಸಚಿವರು ಶಿವಮೊಗ್ಗಕ್ಕೆ ಬರುತ್ತಿದ್ದಾಗ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದ ಬಳಿ ಶಿವಮೊಗ್ಗದಿಂದ ಕಾರ್ಕಳಕ್ಕೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಇಳಿದಿತ್ತು. ಇದನ್ನು ಕಂಡ ತಕ್ಷಣ ಸಚಿವರು ತಮ್ಮ ಕಾರನ್ನು ನಿಲ್ಲಿಸಿ, ತಗ್ಗಿಗಿಳಿದ ಕಾರನ್ನು ಮೇಲಕ್ಕೆತ್ತುವಲ್ಲಿ ನೆರವಾದರು. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿರಲಿಲ್ಲ. ಶಿವಮೊಗ್ಗದ ವಿದ್ಯಾರ್ಥಿ ಪರೀಕ್ಷೆ ಬರೆಯಲು ಕಾರ್ಕಳಕ್ಕೆ ಹೊರಟಿದ್ದರು. ಗೃಹ ಸಚಿವರು ವಿದ್ಯಾರ್ಥಿಗೆ ಶುಭ ಕೋರಿದರು.
Last Updated : Feb 3, 2023, 8:38 PM IST