ಚಿಕ್ಕಮಗಳೂರು ಹಬ್ಬ: 777 ಚಾರ್ಲಿ ಜೊತೆ ಹೆಜ್ಜೆ ಹಾಕಿದ ಶಾಸಕ ಸಿ ಟಿ ರವಿ - etv bharat karanataka
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17546546-thumbnail-3x2-ck.jpg)
ಚಿಕ್ಕಮಗಳೂರು :ಚಿಕ್ಕಮಗಳೂರು ಹಬ್ಬದ ಅಂಗವಾಗಿ ಜಿಲ್ಲಾಡಳಿತದಿಂದ ನಗರದಲ್ಲಿ ಶ್ವಾನ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು. ಈ ಶ್ವಾನ ಸ್ಪರ್ಧೆಯಲ್ಲಿ 28ಕ್ಕೂ ಹೆಚ್ಚು ತಳಿಯ ಶ್ವಾನಗಳು ಭಾಗವಹಿಸಿದ್ದವು. ವಿಷೇಶವಾಗಿ ಚಾರ್ಲಿ 777 ಸಿನಿಮಾದ ಖ್ಯಾತಿಯ ಶ್ವಾನ ಕೂಡ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು. ಮಾಲೀಕರ ಮಾತಿಗೆ ಹೆಜ್ಜೆ ಹಾಕುತ್ತಿರುವ ಶ್ವಾನ, ಇನ್ನೊಂದೆಡೆ ಸಿಂಹದ ರೀತಿಯಲ್ಲೇ ಕಾಣಿಸಿಕೊಳ್ಳುವ ಚೌ ಚೌ ಶ್ವಾನ, ಇಂತಹ ಅಪರೂಪದ ತಳಿಗಳ ಪ್ರದರ್ಶನ ಸ್ಪರ್ಧೆ ಕಾಫಿನಾಡು ಚಿಕ್ಕಮಗಳೂರು ನಗರದ ಬಿ.ಇಡಿ ಕ್ರೀಡಾಂಗಣದಲ್ಲಿ ನಡೆಯಿತು. ಈ ವೇಳೆ ಶಾಸಕ ಸಿ ಟಿ ರವಿ 777 ಚಾರ್ಲಿ ಖ್ಯಾತಿ ಪಡೆದಿರುವ ಶ್ವಾನದೊಂದಿಗೆ ಹೆಜ್ಜೆ ಹಾಕಿ ಸಂತಸಪಟ್ಟರು.
Last Updated : Feb 3, 2023, 8:39 PM IST