ETV Bharat / sukhibhava

ಸ್ಟೀಮ್ ತೆಗೆದುಕೊಳ್ಳುವುದರಿಂದ ಕೊರೊನಾ ದೂರವಾಗುವುದೇ?

ಒಬ್ಬ ವ್ಯಕ್ತಿಯು ಸ್ಟೀಮ್ ತೆಗೆದುಕೊಂಡ ಪಾತ್ರೆಯನ್ನೇ ಕುಟುಂಬದ ಎಲ್ಲಾ ಸದಸ್ಯರು ಬಳಸುತ್ತಾರೆ. ಕುಟುಂಬದ ಒಬ್ಬ ಸದಸ್ಯೆ ತಿಳಿದೋ, ತಿಳಿಯದೆಯೋ ಸೋಂಕಿಗೆ ಒಳಗಾಗಿದ್ದರೆ ಈ ರೀತಿ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ.

author img

By

Published : May 24, 2021, 6:34 PM IST

Will steam inhalation ward off corona?
Will steam inhalation ward off corona?

ಚೆನ್ನೈ (ತಮಿಳುನಾಡು): ಕೇವಲ ಸ್ಟೀಮ್ ತೆಗೆದುಕೊಳ್ಳುವುದರಿಂದ ಕೊರೊನಾ ಸೋಂಕು ಗುಣವಾಗುತ್ತದೆ ಮತ್ತು ಈ ತಂತ್ರವನ್ನು ಅಳವಡಿಸಿಕೊಂಡು ಚೀನಾದ ವುಹಾನ್‌ನಲ್ಲಿರುವ ಜನರು ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಸಾಧ್ಯವಾಯಿತು ಎಂಬ ಊಹಾಪೋಹಗಳೊಂದಿಗೆ ಸಾಮಾಜಿಕ ಮಾಧ್ಯಮವು ಜನರನ್ನು ಗೊಂದಲಕ್ಕೊಳಪಡಿಸಿದೆ. ಈ ವಿಚಾರವಾಗಿ ವಾಸ್ತವತೆಯನ್ನು ವಿಶ್ಲೇಷಿಸುವುದು ಅತ್ಯಗತ್ಯ.

ಆರೋಗ್ಯ ಇಲಾಖೆ ಏನು ಹೇಳುತ್ತದೆ?

ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದ ಮಾರ್ಗಸೂಚಿಗಳ ಆಧಾರದ ಮೇಲೆ ಕೊರೊನಾ ಸೋಂಕಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರತಿಪಾದಿಸಿದ ತಮಿಳುನಾಡು ಆರೋಗ್ಯ ಇಲಾಖೆ ಜನರಿಗೆ ಮನೆಯಲ್ಲಿ ಸ್ವ-ಚಿಕಿತ್ಸೆ ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ, ಗಿಡಮೂಲಿಕೆಗಳ ಸ್ಟೀಮ್ ತೆಗೆದುಕೊಳ್ಳುವುದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ಒಬ್ಬ ವ್ಯಕ್ತಿಯು ಸ್ಟೀಮ್ ತೆಗೆದುಕೊಂಡ ಪಾತ್ರೆಯನ್ನೇ ಕುಟುಂಬದ ಎಲ್ಲಾ ಸದಸ್ಯರು ಬಳಸುತ್ತಾರೆ. ಕುಟುಂಬದ ಒಬ್ಬ ಸದಸ್ಯೆ ತಿಳಿದೋ, ತಿಳೀಯದೆಯೋ ಸೋಂಕಿಗೆ ಒಳಗಾಗಿದ್ದರೆ ಈ ರೀತಿ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಬಾಯಿಯನ್ನು ಅಗಲವಾಗಿ ತೆರೆದು ಪಾತ್ರೆಯಿಂದ ಸ್ಟೀಮ್ ತೆಗೆದುಕೊಂಡು ಉಸಿರಾಡುವುದು ಸೋಂಕನ್ನು ತೀವ್ರಗೊಳಿಸಲು ಒಂದು ಅಂಶವಾಗಬಹುದು.

ಸ್ವಯಂ ಚಿಕಿತ್ಸೆ ಹಾಗೂ ಯೂಟ್ಯೂಬ್ ಚಾನೆಲ್‌ಗಳಲ್ಲಿ ಹೇಳುವ ಚಿಕಿತ್ಸೆಯನ್ನು ಆಶ್ರಯಿಸುವುದನ್ನು ತಪ್ಪಿಸುವಂತೆಯೂ ರಾಜ್ಯ ಸಿದ್ಧ ವೈದ್ಯಕೀಯ ಸಮಿತಿ ಜನರಿಗೆ ಸಲಹೆ ನೀಡಿದೆ.

ಸ್ಟೀಮ್ ತೆಗೆದುಕೊಳ್ಳುವುದು (ಉಗಿ ಉಸಿರಾಡುವುದು) ಎಂದರೇನು?

ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ, ಮುಖ ಹಾಗೂ ಪಾತ್ರೆಗೆ ಬಟ್ಟೆ ಹೊದಿಸಿ, ಬಿಸಿ ನೀರಿನಿಂದ ಬರುವ ಉಗಿಯನ್ನು ಉಸಿರಾಡುವುದನ್ನೇ ಸ್ಟೀಮ್ ಇನ್ಹೇಲಿಂಗ್ ಎನ್ನುತ್ತಾರೆ. ಕೆಲವೊಮ್ಮೆ ಈ ಬಿಸಿ ನೀರಿಗೆ ನೀಲಗಿರಿ ಎಣ್ಣೆ ಅಥವಾ ಔಷಧೀಯ ಎಲೆಗಳು ಅಥವಾ ಮಸಾಲೆಯುಕ್ತ ಪದಾರ್ಥಗಳನ್ನು ಕೂಡಾ ಬೆರೆಸಲಾಗುತ್ತದೆ.

ವಾಸ್ತವವಾಗಿ ಈ ರೀತಿ ಮಾಡುವುದು ತಪ್ಪು. ಏಕೆಂದರೆ 80-90 ಡಿಗ್ರಿ ತಾಪಮಾನದಲ್ಲಿ ಮಾತ್ರ ವೈರಸ್ ಅನ್ನು ಕೊಲ್ಲಬಹುದು. ಆದರೆ ಉಗಿ ಉಸಿರಾಡುವಾಗ 40-45 ಡಿಗ್ರಿ ಸೆಲ್ಸಿಯಸ್ ಪಡೆಯಲಾಗುತ್ತದೆ ಮತ್ತು ಇದರಿಂದ ವೈರಸ್‌ಗಳನ್ನು ನಾಶಮಾಡುವುದು ಕಷ್ಟ. ಜೊತೆಗೆ ಇದು ಗಂಟಲು ಹಾಗೂ ಪ್ಯಾರಾನಾಸಲ್ ಸೈನಸ್‌ಗಳಿಗೆ ಹಾನಿಯುಂಟುಮಾಡುವ ಸಾಧ್ಯತೆಯಿದೆ ಎಂದು ವೈದ್ಯರು ಸ್ಪಷ್ಟವಾಗಿ ಹೇಳುತ್ತಾರೆ.

ಕೊರೊನಾ ವೈರಸ್ ಹೇಗೆ ನಾಶವಾಗುತ್ತದೆ?

ಕೊರೊನಾ ವೈರಸ್ ಮಾನವ ದೇಹಕ್ಕೆ ಪ್ರವೇಶಿಸಿ ಶ್ವಾಸಕೋಶದ ಗಾಳಿಯನ್ನು ಕಸಿದುಕೊಂಡು ಕ್ರಮೇಣ ಹಾನಿಗೊಳಿಸುತ್ತದೆ. ತದನಂತರ ರಕ್ತದ ಆಮ್ಲಜನಕೀಕರಣವನ್ನು ತಡೆಯುತ್ತದೆ. ಕೊರೊನಾ ವೈರಸ್‌ನಿಂದಾಗಿ ಶ್ವಾಸಕೋಶವು ಈಗಾಗಲೇ ಹಾನಿಗೊಳಗಾಗಿದ್ದರೆ, ಉಸಿರಾಡುವ ಬಿಸಿ ಗಾಳಿಯು ಗಾಯಗಳನ್ನು ಉಲ್ಬಣಗೊಳಿಸುತ್ತದೆ ಮತ್ತು ಸೌಮ್ಯವಾದ ಸೋಂಕನ್ನು ಸಹ ಗಂಭೀರವಾಗಿಸುತ್ತದೆ. ಆದ್ದರಿಂದ, ಉಗಿ ಗಾಳಿಯನ್ನು ಉಸಿರಾಡುವ ಅಭ್ಯಾಸವು ಅಡ್ಡಪರಿಣಾಮಗಳಿಗೆ ನಾಂದಿ ಹಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಆದ್ದರಿಂದ, ಆರೋಗ್ಯ ತಜ್ಞರು ಮತ್ತು ವೈದ್ಯರು ಮನೆಯಲ್ಲಿ ಉಗಿ ಗಾಳಿಯನ್ನು ಉಸಿರಾಡಿ ಸಮಯ ವ್ಯರ್ಥ ಮಾಡಿ, ಅಂತಿಮವಾಗಿ ಸೋಂಕಿನ ಮುಂದುವರಿದ ಹಂತದಲ್ಲಿ ಆಸ್ಪತ್ರೆಗಳಲ್ಲಿ ಇಳಿಯದಂತೆ ತಿಳಿಸಿದ್ದಾರೆ. ಈ ಅವೈಜ್ಞಾನಿಕ ಅಭ್ಯಾಸವು ಕೆಮ್ಮು ಮತ್ತು ಸೀನುವಿಕೆಯನ್ನು ಪ್ರಚೀದಿಸುತ್ತದೆ ಮತ್ತು ಈ ಮೂಲಕ ಸೋಂಕುಗಳನ್ನು ಹರಡುವ ಸಾಧ್ಯತೆಯೂ ಇರುತ್ತದೆ.

ಶ್ವಾಸಕೋಶಶಾಸ್ತ್ರಜ್ಞ ಪ್ರಚನ್ನ ಥಾಮಸ್ ಹೇಳುವ ಪ್ರಕಾರ, "ಜನರು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸುವ ಅವೈಜ್ಞಾನಿಕ ವಿಧಾನಗಳನ್ನು ಅಭ್ಯಾಸ ಮಾಡುವುದನ್ನು ತಪ್ಪಿಸಬೇಕು. ಮನೆಯಲ್ಲಿ ಒಬ್ಬ ವ್ಯಕ್ತಿಯು ಉಗಿ ಗಾಳಿಯನ್ನು ಉಸಿರಾಡಿದರೆ, ಯಾವುದೇ ಸಮಸ್ಯೆ ಇಲ್ಲ. ಆದರೆ ಅದೇ ಪಾತ್ರೆಯಿಂದ ಕುಟುಂಬ ಸದಸ್ಯರು ಉಗಿ ತೆಗೆದುಕೊಂಡರೆ, ಯಾರಲ್ಲಾದರೂ ಸೋಂಕು ಇದ್ದರೆ ಅದು ಹರಡುವ ಸಾಧ್ಯತೆಯಿದೆ." ಎನ್ನುತ್ತಾರೆ.

ಮತ್ತೋರ್ವ ವೈದ್ಯ ಅರವಿಂದ್ ರಾಜ್ ಹೇಳುವ ಪ್ರಕಾರ, "ಸೈನುಟಿಸ್ ರೋಗಿಯು ಮೂಗಿನ ಅಡಚಣೆಯಿಂದ ಮುಕ್ತನಾಗುವುದಕ್ಕೆ ಮತ್ತು ತಾಜಾತನವನ್ನು ಅನುಭವಿಸುವುದಕ್ಕೆ ಉಗಿ ಉಸಿರಾಡುವಿಕೆಯು ಉತ್ತಮವಾಗಿರುತ್ತದೆ. ಆದರೆ ವೈರಸ್ ನಿರ್ಮೂಲನೆಗೆ ಅದು ಶಕ್ತಿಯನ್ನು ಹೊಂದಿಲ್ಲ. ಅದರ ಬದಲು ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಉತ್ತಮ."

ಆದ್ದರಿಂದ ವೈದ್ಯರು ಮತ್ತು ತಜ್ಞರು ಹೇಳುವ ಪ್ರಕಾರ, ಕೊರೊನಾ ಸೋಂಕಿನಿಂದ ಬಳಲುತ್ತಿರುವವರು ಸರಿಯಾದ ವೈದ್ಯಕೀಯ ಮಾರ್ಗದರ್ಶನ ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಉತ್ತಮ ಎಂಬುದು ಸ್ಪಷ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.