ETV Bharat / entertainment

'ಬಿಗ್​ ಬಾಸ್​ ಹೆಸರು ಹಾಳ್​ ಮಾಡೋಕೆ ನಿಮ್ಮ ಅಪ್ಪನಾಣೆ ಸಾಧ್ಯವಿಲ್ಲ': ಲಾಯರ್​ ಜಗದೀಶ್​ ಮಾತಿಗೆ ನಯವಾಗೇ ಟಾಂಗ್​ ಕೊಟ್ಟ ಸುದೀಪ್​ - Sudeep On Lawyer Jagdish - SUDEEP ON LAWYER JAGDISH

''ಜಗದೀಶ್​ ಕಿರಿಕ್​ಗೆ ಕಿಚ್ಚನ ಖಡಕ್ ಸಂದೇಶ'' ಶೀರ್ಷಿಕೆಯಡಿ ಬಿಗ್​​ ಬಾಸ್​​ನ ಹೊಸ ಪ್ರೋಮೋ ಅನಾವರಣಗೊಂಡಿದೆ.

Sudeep
ಕಿಚ್ಚ ಸುದೀಪ್​ (ANI)
author img

By ETV Bharat Karnataka Team

Published : Oct 5, 2024, 7:50 PM IST

ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್​​ ಬಾಸ್​​ನ ಮೊದಲ ವಾರಾಂತ್ಯದ ಎಪಿಸೋಡ್​ ಪ್ರಸಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದ್ದು, ಹೊಸ ಪ್ರೋಮೋ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

''ಜಗದೀಶ್​ ಕಿರಿಕ್​ಗೆ ಕಿಚ್ಚನ ಖಡಕ್ ಸಂದೇಶ! ವಾರದ ಕತೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ'' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದೆ.

ಜಗದೀಶ್​, ನೀವ್​ ಹೇಳಿ ನಮ್ಗೆ ಶೋ ಹೇಗೆ ನಡೆಸಿಕೊಡಬೇಕು ಅಂತಾ? ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಲಾಯರ್​, ನಿಮ್ಮದು ಕರೆಕ್ಟ್​ ಇದೆ, ನಿಮ್ದೇನು ತಪ್ಪಿಲ್ಲಾ ಅಂತಾ ಉತ್ತರಿಸಿದ್ದಾರೆ. ಅದಕ್ಕೆ ನಗುತ್ತಲೇ ಹೆಮ್ಮೆಯಿಂದ ಪ್ರತಿಕ್ರಿಯಿಸಿದ ನಟ ಖಡಾಖಂಡಿತವಾಗಿಯೂ ಸರಿ ಇದೆ. ಇಲ್ಲಾ ಅಂದಿದ್ರೆ ನನ್ ಮಗಂದ್​ ಹನ್ನೊಂದನೇ ಸೀಸನ್​ವರೆಗೆ ಬರೋಕ್ಕೆ ಆಗ್ತಿರಲಿಲ್ಲ ಅಂತಾ ಹೇಳ್ತಿದ್ದಂತೆ ಮನೆ ಮಂದಿ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಕ್ಯಾಮರಾ ಮುಂದೆ ಬಿಗ್​ ಬಾಸ್​ಗೆ ಚಾಲೆಂಜ್​ ಮಾಡಿದ್ರಲ್ವಾ?, ಅದು ತಪ್ಪೇ ಅಲ್ಲಾ ಸರ್. ದಟ್ ವಾಸ್ ಅ ಜೋಕ್ ಎಂದು ತಿಳಿಸಿದ್ದಾರೆ. ಜಗದೀಶ್​ ದನಿಯಿಂದ ಕಿರಿಕಿರಿ ಅನುಭವಿಸಿದ್ದ ಮನೆಮಂದಿ ಕಿಚ್ಚನ ಮಾತಿನಿಂದ ಬಹಳ ಸಂತಸಗೊಂಡರು. ಖುಷಿ ಮುಗಿಲು ಮುಟ್ಟಿತ್ತು. ಬಿಗ್​ ಬಾಸ್​ ಅದ್ಭುತವಾದಂತಹ ಒಂದು ಶೋ. ಇಂಪ್ರೂ ಮಾಡುವಂತಹ ಸಾಧ್ಯತೆ ನಿಮ್ಮ ಕೈಯಲ್ಲಿದೆ. ಹಾಳ್​ ಮಾಡೋಕೆ ನಿಮ್ಮ ಅಪ್ಪನಾಣೆ ಸಾಧ್ಯವಿಲ್ಲ.

ಇದನ್ನೂ ಓದಿ: ಸಲ್ಮಾನ್​ ಖಾನ್​​ ತ್ರಿಬಲ್​ ರೋಲ್​: ನಟನ ಕೋಪಕ್ಕೆ ಕಾರಣವೇನು? ನೋಡಿ ಬಿಗ್​ ಬಾಸ್ ಹಿಂದಿ 18​ ಪ್ರೋಮೋ - Bigg Boss Hindi 18 Promo

ಕಾರ್ಯಕ್ರಮ ಶುರುವಾದಾಗಿನಿಂದ ಲಾಯರ್​ ಜಗದೀಶ್​ ಅವರ ದನಿ ಬಹಳ ಜೋರಾಗೇ ಇತ್ತು. ಮನೆಯಲ್ಲಿ ಕಿರಿಕ್​ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ನಾನೇ ಬಿಗ್​ ಬಾಸ್​ ಅಂತಾ ಹೇಳಿಕೊಂಡಿದ್ದು ಮಾತ್ರವಲ್ಲದೇ, ಬಿಗ್​ ಬಾಸ್​ ಅನ್ನೇ ಎಕ್ಸ್ ಪೋಸ್ ಮಾಡುತ್ತೇನೆಂದು ಕ್ಯಾಮರಾದೆದುರು ಗುಡುಗಿದ್ದರು. ಮನೆಮಂದಿ ಬಳಿ ತೀವ್ರ ವಾಗ್ವಾದಕ್ಕಿಳಿದಿದ್ದರು. ಲಾಯರ್​ ಹೇಳಿಕೆಗಳು ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿ, ಇಂದು ಅವರಿಗೆ ಕಿಚ್ಚನ ಕ್ಲಾಸ್​ ಸಿಗೋದು ಪಕ್ಕಾ ಅಂತಾ ಬಹುತೇಕರು ಅಂದಾಜಿಸಿದ್ದರು.

ಇದನ್ನೂ ಓದಿ: ಬಿಗ್​ ಬಾಸ್​​ ಅನ್ನೇ ಕೆಣಕಿದ ಲಾಯರ್​ ಜಗದೀಶ್​! ಅಂತು ಇಂತೂ ಆಯ್ತು ಸುದೀಪ್​ ಎಂಟ್ರಿ - Sudeep class to Lawyer Jagdish

ಅದರಂತೆ ಇದೀಗ ಅನಾವರಣಗೊಂಡಿರುವ ಪ್ರೋಮೋ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರೋಮೋಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, ''ಇದು…ಇದು… ಇದು ಬೇಕಾಗಿರೋದು, ಈ ಎಪಿಸೋಡ್​​ಗಾಗಿ ಕಾತುರದಿಂದ ಕಾಯುತ್ತಿದ್ದೇವೆ'' ಎಂದು ತಿಳಿಸಿದ್ದಾರೆ. 'ಇದು ಕಿಚ್ಚ ಪವರ್' ಅಂತಾ ಓರ್ವರು ಕಾಮೆಂಟ್​ ಮಾಡಿದ್ರೆ, ಅದಕ್ಕೆ ಮತ್ತೋರ್ವರು 'ನಮ್ಮ ಬಾಸ್ ಅಂದ್ರೆ ಹಾಗೇನೇ ಗುರು' ಎಂದು ಪ್ರತಿಕ್ರಿಯಿಸಿದ್ದಾರೆ. 'ಏನ್ ಗುರು ಸುದೀಪ್ ಅಣ್ಣನ ಮಾತುಗಳು' ಎಂದು ನೆಟ್ಟಿಗರೊರ್ವರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಸುದೀಪ್​ ಮಾತುಗಳಿಗೆ ಮೆಚ್ಚುಗೆ ಮಾತುಗಳು ಸಿಕ್ಕಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.