ETV Bharat / entertainment

ಸಲ್ಮಾನ್​ ಖಾನ್​​ ತ್ರಿಬಲ್​ ರೋಲ್​: ನಟನ ಕೋಪಕ್ಕೆ ಕಾರಣವೇನು? ನೋಡಿ ಬಿಗ್​ ಬಾಸ್ ಹಿಂದಿ 18​ ಪ್ರೋಮೋ - Bigg Boss Hindi 18 Promo - BIGG BOSS HINDI 18 PROMO

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 18ರ ಪ್ರೋಮೋ ಅನಾವರಣಗೊಂಡಿದೆ.

Salman Khan
ಸಲ್ಮಾನ್​ ಖಾನ್​​ (IANS)
author img

By ETV Bharat Karnataka Team

Published : Oct 5, 2024, 7:30 PM IST

ಬಿಗ್​ ಬಾಸ್​, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಭಾರತದ ಬಹುಭಾಷೆಗಳಲ್ಲಿ ಈ ಕಿರುತೆರೆ ಕಾರ್ಯಕ್ರಮ ಮೂಡಿಬರುತ್ತಿದೆ. ಕಾರ್ಯಕ್ರಮ ನಡೆಸಿಕೊಡುವವರೆಲ್ಲರೂ ಅತ್ಯಂತ ಜನಪ್ರಿಯರು ಅನ್ನೋದೇ ವಿಶೇಷ. ಈಗಾಗಲೇ ಕನ್ನಡದ ಬಿಗ್​ ಬಾಸ್​ ಶುಭಾರಂಭ ಮಾಡಿದ್ದು, ಇಂದು ವಾರಾಂತ್ಯದ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಮತ್ತೊಂದೆಡೆ ಹಿಂದಿ ಬಿಗ್​ ಬಾಸ್​ ಆರಂಭಕ್ಕೆ ದಿನಗಣನೆ ಶುರುವಾಗಿದೆ.

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಿಗ್ ಬಾಸ್ 18ರ ನಿರೂಪಕನಾಗಿ ಮರಳಿದ್ದಾರೆ. ಕಾರ್ಯಕ್ರಮದ ಪ್ರೀಮಿಯರ್​ಗೂ ಮುನ್ನ ಕಲರ್ಸ್ ಟಿವಿ ಇಂಟ್ರೆಸ್ಟಿಂಗ್​​ ಪ್ರೋಮೋವನ್ನು ಅನಾವರಣಗೊಳಿಸಿದೆ. ವಿಡಿಯೋದಲ್ಲಿ ಸಲ್ಮಾನ್ ಖಾನ್ ಅವರ ಪಾಸ್ಟ್ ಆ್ಯಂಡ್​ ಫ್ಯೂಚರ್​ ಲುಕ್​ ಕಂಡುಬಂದಿದೆ. ಜೊತೆಗೆ, ಸಲ್ಮಾನ್ ಖಾನ್ ಬಹಳ ಸಿಟ್ಟಿಗೆದ್ದಂತೆ ತೋರಿದೆ.

ಪ್ರೋಮೋದಲ್ಲಿ, ಸಲ್ಲು ಎರಡು ಸ್ಕ್ರೀನ್‌ಗಳೆದುರು ನಿಂತಿದ್ದಾರೆ. ಒಂದು ಪರದೆಯಲ್ಲಿ ಅವರ ಕಿರಿಯ ಮತ್ತು ಇನ್ನೊಂದು ಪರದೆಯಲ್ಲಿ ಅವರ ಭವಿಷ್ಯದ ನೋಟವನ್ನು ಕಾಣಬಹುದಾಗಿದೆ. ಕಂಪ್ಯೂಟರ್​ ಟೆಕ್ನಾಲಜಿಯಿಂದ ಇದನ್ನು ಮಾಡಲಾಗಿದೆ. ಇವೆರಡಲ್ಲದೇ ನಟ ಸ್ವತಃ ಅದೇ ಜಾಗದಲ್ಲಿ ನಿಂತು, ವರ್ತಮಾನದ ನೋಟವನ್ನು ಒದಗಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​​ ಅನ್ನೇ ಕೆಣಕಿದ ಲಾಯರ್​ ಜಗದೀಶ್​! ಅಂತು ಇಂತೂ ಆಯ್ತು ಸುದೀಪ್​ ಎಂಟ್ರಿ - Sudeep class to Lawyer Jagdish

ಹೌದು, ಸಲ್ಮಾನ್‌ ಅವರ ಕಿರಿಯ ಮತ್ತು ಹಿರಿಯ ನೋಟದ ವರ್ಷನ್​ಗಳು ಎಐ ರಚಿತವಾಗಿವೆ. ಮೊದಲ ಪರದೆಯಲ್ಲಿ ಅವರ ಕಿರಿಯ ಆವೃತ್ತಿಯನ್ನು ತೋರಿಸಲಾಗುತ್ತದೆ. ಮಾತುಕತೆಯಲ್ಲಿ ಸಲ್ಮಾನ್​ ಕೋಪಗೊಂಡಂತೆ ತೋರಿದೆ.

ಇದನ್ನೂ ಓದಿ: ಲಾಯರ್​ ಜಗದೀಶ್​​​ಗೆ ಕಾದಿದೆಯಾ ಕಿಚ್ಚನ ಕ್ಲಾಸ್​? ಸುದೀಪ್​ ಪಂಚಾಯ್ತಿಯಲ್ಲಿ ಯಾವ ವಿಷಯ ಚರ್ಚೆಯಾಗಬೇಕು? - Bigg Boss Kannada first elimination

ಬಾಸ್ 18ರ ಗ್ರ್ಯಾಂಡ್ ಪ್ರೀಮಿಯರ್ ಅನ್ನು ನಾಳೆ ರಾತ್ರಿ 9 ಗಂಟೆಗೆ ಕಲರ್ಸ್ ಮತ್ತು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ. ಇಂದು ಅನಾವರಣಗೊಂಡಿರುವ ವಿಡಿಯೋ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಉತ್ಸುಕರಾದ ಅಭಿಮಾನಿಗಳು ಕಾಮೆಂಟ್​ ಸೆಕ್ಷನ್​ನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.