ಇಂದು ನಾವು ಜೀವಿಸುತ್ತಿರುವ ಇಪ್ಪತ್ತೊಂದನೇ ಶತಮಾನದ ದಿನಗಳಲ್ಲಿ ಎಲ್ಲವೂ ಸುಲಭ. ಕ್ಷಣ ಮಾತ್ರದಲ್ಲೇ ಏನನ್ನಾದರೂ ಬೆರಳ ತುದಿಯ್ಲಲೇ ತಲುಪಬಹುದು. ಸುಮ್ಮನೆ ಕುಳಿತಿರುವ ನಿಮಗೆ ಮುಂದಿನ ಶೋಗೆ ಸಿನಿಮಾ ನೋಡಬೇಕಾ, ಕ್ಷಣ ಮಾತ್ರದಲ್ಲಿ ಟಿಕೆಟ್ ಬುಕ್ ಮಾಡಬಹುದು. ವಾರಾಂತ್ಯದಲ್ಲೊಂದು ಜಾಗಕ್ಕೆ ವಿಹಾರಕ್ಕೆ ಹೋಗಬೇಕಾದರೂ ಅದನ್ನೂ ಬೆರಳ ಟಚ್ನಿಂದಲೇ ಗಳಿಸುವಂತಹ ತಂತ್ರಜ್ಞಾನಗಳು ನಮ್ಮ ಕೈಯಲ್ಲಿವೆ.
ಎಷ್ಟು ಸುಲಭದಲ್ಲಿ, ಎಷ್ಟು ವೇಗವಾಗಿ ನಾವು ಮಾಹಿತಿಯನ್ನು ಗಳಿಬಹುದೋ ಅಷ್ಟೇ ವೇಗದಲ್ಲಿ ಭಯಾನಕ ವಿಕಿರಣವೂ ನಮ್ಮನ್ನು ಆಕ್ರಮಿಸಿಕೊಂಡಿರುತ್ತವೆ. ನೀಲಿ ಬೆಳಕು ನಮ್ಮ ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಅದರಿಂದ ನಮ್ಮ ರೆಟಿನಾ ದುರ್ಬಲವಾಗುತ್ತದೆ ಎಂಬುದು ನಮಗೆ ಗೊತ್ತಿದೆ. ಹಾಗಾದರೆ, ಒಂದು ಬಾರಿ ಯೋಚಿಸಿ ಆ ವಿಕಿರಣಗಳಿಂದ ನಮ್ಮ ಚರ್ಮಕ್ಕೆ ಎಷ್ಟರ ಮಟ್ಟಿಗೆ ಹಾನಿಯಾಗಬಹುದು. ಯೋಚಿಸಿದರೆ ನಿಜವಾಗಿಯೂ ಭಯಾನಕವಾಗಿದೆ.
ನೀವು ಬಳಸುತ್ತಿರುವ ಮೊಬೈಲ್ ಫೋನ್ ಅಥವಾ ನೀವು ಈ ಲೇಖನವನ್ನು ಓದುತ್ತಿರುವ ಲ್ಯಾಪ್‌ಟಾಪ್, ಎಲ್ಲವೂ ಸಾಮಾನ್ಯವಾಗಿ ಆಂಟೆನಾಗಳನ್ನು ಹೊಂದಿವೆ. ಸಿಗ್ನಲ್ ಟವರ್‌ನೊಂದಿಗೆ ಸಂಪರ್ಕ ಸಾಧಿಸಲು ಈ ಆಂಟೆನಾಗಳನ್ನು ಅಳವಡಿಸಲಾಗುತ್ತದೆ. ಸಾಧನಗಳೊಂದಿಗೆ ಸಂಪರ್ಕ ಸಾಧಿಸುವ ಸಂದರ್ಭ ಈ ಆಂಟೆನಾಗಳು ಹೊರಸೂಸುವಂತಹ ವಿಕಿರಣಗಳು ನಮ್ಮ ಚರ್ಮಕ್ಕೆ ಹಾನಿಕಾರಕ.
ಈ ಡಿಜಿಟಲ್ ಪ್ರಪಂಚ ಎಷ್ಟು ಎಷ್ಟು ಮಾಹಿತಿಯುಕ್ತವಾಗಿದೆಯೋ ಅಷ್ಟೇ ನಮ್ಮನ್ನು ತಪ್ಪು ದಾರಿಗೂ ತಳ್ಳುವ ಸಂದರ್ಭಗಳಿರುತ್ತವೆ. ಪ್ರಮುಖ ಸ್ಕಿನ್ಕೇರ್ ಬ್ರ್ಯಾಂಡ್ನ ಸಹ ಸಂಸ್ಥಾಪಕಿಯಾಗಿರುವ ನಮ್ರತಾ ಬಜಾಜ್ ಅವರು ಈ ವಿಕಿರಣಗಳು ಯಾವ ರೀತಿ ನಮ್ಮ ತ್ವಚೆಗೆ ಮಾರಕ, ಅವುಗಳಿಂದ ಯಾವ ರೀತಿ ನಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಆಳವಾದ ಮಾಹಿತಿಯನ್ನು ನೀಡಿದ್ದಾರೆ.
ವಿಕಿರಣದಿಂದಾಗುವ ಹಾನಿ
ಚರ್ಮದ ಬಣ್ಣ ಮಾಸುವಿಕೆ : ನಾವು ಬಳಸುವಂತಹ ಎಲ್ಲಾ ರೀತಿಯ ಇಲೆಕ್ಟ್ರಾನಿಕ್ ಗಾಜೆಟ್ಗಳು ಹಾನಿಕಾರ ವಿಕಿರಣಗಳನ್ನು ಹೊರಸೂಸುತ್ತವೆ. ಆ ವಿಕಿರಣ ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಿರುವುದು ಸರ್ವೇ ಸಾಮಾನ್ಯವಾಗಿರುವುದನ್ನು ನೀವು ಗಮನಿಸಬಹುದು. ನಮ್ಮ ಚರ್ಮವನ್ನು ವಿಕಿರಣಗಳು ಬೇಧಿಸಿ ಹೋಗುವುದರಿಂದ, ತುರಿಕೆ, ಶುಷ್ಕತೆಯಂತಹ ಸಮಸ್ಯೆ ಕಾಣಿಸಿಕೊಂಡು ಚರ್ಮದ ಬಣ್ಣ ಮಾಸಿ ಕೆಂಪು ಅಥವಾ ಗಾಢ ಬಣ್ಣಕ್ಕೆ ಬದಲಾಗುತ್ತದೆ.
ವಯಸ್ಸಾದಂತೆ ಕಾಣಿಸುವುದು : ನಮ್ಮ ಇಂದಿನ ಜೀವನಶೈಲಿ ನಮ್ಮನ್ನು ಯಾವಾಗಲೂ ಒಂದಲ್ಲಾ ಒಂದು ಇಲಿಕ್ಟ್ರಾನಿಕ್ ಗಾಜೆಟ್ಗಳೊಂದಿಗೆಯೇ ಜೀವನ ನಡೆಸುವಂತೆ ಮಾಡಿ ಬಿಟ್ಟಿದೆ. ಇದರಿಂದಾಗಿ ನಮ್ಮ ಚರ್ಮದ ಆರೊಗ್ಯ ಸರಿಯಾದ ದಿಕ್ಕು ಬಿಟ್ಟು ಇನ್ಯಾವುದೋ ಮನಬಂದ ದಿಕ್ಕಿನಲ್ಲಿ ಹೆಜ್ಜೆ ಹಾಕಲು ಪ್ರಾರಂಭಿಸಿರುತ್ತದೆ. ನಾವು ಬಳಸುವ ಇಲೆಕ್ಟ್ರಾನಿಕ್ ವಸ್ತುಗಳು ಅಥವಾ ಸೂರ್ಯನಿಂದ ಬರುವಂತಹ ವಿಕಿರಣಗಳು ಚರ್ಮ ಸುಕ್ಕುಗಟ್ಟುವಂತೆ ಮಾಡುತ್ತವೆ. UV ಕಿರಣಗಳಿಗೆ ದೇಹ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಅಂಗಾಂಶಗಳ ಒಳ ಪದರವು ಅವುಗಳ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ ವಿಕಿರಣಗಳು ನಮ್ಮ ಚರ್ಮ ವಯಸ್ಸಾದಂತೆ ಕಾಣುವ ಮತ್ತು ಇನ್ನಿತರ ಅಡ್ಡಪರಿಣಾಮಗಳನ್ನು ತಂದೊಡ್ಡುತ್ತವೆ.
ಬ್ರೇಕ್ಔಟ್ಗಳು : ನಮ್ಮ ಚರ್ಮವು ನಮ್ಮ ಸುತ್ತಲಿನ ಪರಿಸರವನ್ನು ಇಷ್ಟಪಡದೇ ಇದ್ದಾಗ, ಅದರ ಪರಿಣಾಮ ತಾನಾಗಿಯೇ ಕಾಣಿಸಿಕೊಳ್ಳುತ್ತದೆ. ವಾತಾವರಣದಿಂದಾಗುವ ಸಾಮಾನ್ಯ ಸಮಸ್ಯೆಗಳಲ್ಲಿ ಬ್ರೇಕ್ಔಟ್ ಕೂಡ ಒಂದು. ಚರ್ಮ ತನ್ನ ರಕ್ಷಾಕವಚಗಳನ್ನು ಕಳೆದುಕೊಂಡು ಹೆಚ್ಚು ಸೂಕ್ಷ್ಮಗೊಳ್ಳುತ್ತದೆ. ಇದರಿಂದಾಗಿ ಚರ್ಮದ ಮೇಲೆ ಬ್ರೇಕ್ಔಟ್ಗಳು ಕಾಣಿಸಲು ಪ್ರಾರಂಭಗೊಳ್ಳುತ್ತವೆ.
ಸ್ಕಿನ್ ಪಿಗ್ಮೆಂಟೇಶನ್ : ವಿಕಿರಣ ಮತ್ತು ನೀಲಿ ದೀಪಗಳಿಂದ ಚರ್ಮದ ಮೇಲೆ ಉಂಟಾಗುವ ಎಲ್ಲಾ ಹಾನಿಯನ್ನು ಪರಿಗಣಿಸಿದರೆ ಸ್ಕಿನ್ ಪಿಗ್ಮೆಂಟೇಶನ್ ಅತ್ಯಂತ ಕೆಟ್ಟ ಮತ್ತು ಬಹುಶಃ ಅತ್ಯಂತ ಕಿರಿಕಿರಿಯುಂಟು ಮಾಡುವ ಸಮಸ್ಯೆ. ಇದರಿಂದ ನಾವು ಪಾರಾಗಲು ಎಷ್ಟೇ ಪ್ರಯತ್ನ ಪಟ್ಟರೂ ಅದು ನಮ್ಮನ್ನು ಬಿಡಲು ಕೇಳುವುದೇ ಇಲ್ಲ. ಬೆನ್ನಿಗಂಟಿದ ಬೇತಾಳನ ಹಾಗೆ ಚರ್ಮಕ್ಕಂಟಿಕೊಂಡೇ ಇರುತ್ತದೆ. ಈ ಚರ್ಮದ ಪಿಗ್ಮೆಂಟೇಶನ್ ಎನ್ನುವುದು ಚರ್ಮದ ಕೆಲ ಪ್ರದೇಶದ ಸುತ್ತ ಕಪ್ಪು ಕಲೆಗಳು ಹುಟ್ಟಿಕೊಳ್ಳುವುದು.
ಚರ್ಮದ ಸೂಕ್ಷ್ಮತೆ : ನಮಗೆ ವಯಸ್ಸಾದಂತೆ ಚರ್ಮ ಇನ್ನಷ್ಟು ಸೂಕ್ಷ್ಮಗೊಂಡು ಚರ್ಮದ ಮೇಲೆ ನೇರ ಪರಿಣಾಮ ಬೀರುವುದು ಮಾತ್ರವಲ್ಲದೆ, ಚರ್ಮಕ್ಕೆ ಶಾಶ್ವತ ಹಾನಿಯನ್ನೂ ಉಂಟು ಮಾಡುತ್ತದೆ. ಇದರಿಂದಾಗಿ ಚರ್ಮ ಕೆಂಪಗಾಗುವುದು ಅಥವಾ ಚರ್ಮ ಒಣಗಬಹುದು. ಚರ್ಮದ ಸೂಕ್ಷ್ಮತೆ ಚರ್ಮದ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಗಾಳಿಯಿಂದಾಗುವ ಸಮಸ್ಯೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಚರ್ಮ ಅಸಮರ್ಥವಾಗುತ್ತದೆ. ಇನ್ನೇನನ್ನೂ ಮಾಡದಂತಹ ಸ್ಥಿತಿಗೆ ಚರ್ಮವನ್ನು ಕೊಂಡೊಯ್ಯುವ ಕೆಲಸವನ್ನು ಈ ವಿಕಿರಣಗಳು ಮಾಡುತ್ತವೆ.
ಡಾರ್ಕ್ ಸರ್ಕಲ್ಗಳು : ಇಡೀ ಮುಖ ಚೆನ್ನಾಗಿದ್ದು, ಕಣ್ಣುಗಳ ಸುತ್ತ ಮಾತ್ರ ಕೆಂಪಗಿನ ಗುಡ್ಡೆಗಳು ಆರಾಮವಾಗಿ ಜೋತಾಡುತ್ತಿದ್ದರೆ ಏನು ಚೆಂದ ನೀವೆ ಊಹಿಸಿ! ಮುಖ ಎಷ್ಟೇ ಚೆನ್ನಾಗಿದ್ದರೂ ಕಣ್ಣಿನ ಸುತ್ತ ಸೃಷ್ಟಿಯಾಗಿರುವ ಡಾರ್ಕ್ ಸರ್ಕಲ್ ಅನ್ನು ಮುಚ್ಚಿ ಹಾಕಲು ಸಾಧ್ಯವೇ ಇಲ್ಲ. ಚರ್ಮದ ಮೇಲಾಗುವತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಇದು ಸರಿಯಾದ ಸಮಯ.
ಇದನ್ನೂ ಓದಿ: ವ್ಯಾಪಿಂಗ್ ಯುವಕರನ್ನು ಧೂಮಪಾನಿಗಳನ್ನಾಗಿ ಮಾಡುತ್ತಿದೆ ಎಚ್ಚರ..!
ವಿಕಿರಣದಿಂದ ರಕ್ಷಿಸಿಕೊಳ್ಳಲು ನಮ್ರತಾ ಅವರು ಪರಿಹಾರಗಳನ್ನೂ ಸೂಚಿಸಿದ್ದಾರೆ : ಇಡೀ ದಿನ ಗಾಜೆಟ್ಗಳ ಜೊತೆ ಕಳೆಯುವ ಬದಲು ಕೆಲವೊಂದಷ್ಟು ಹೊತ್ತು ನಿಮ್ಮ ಚರ್ಮವನ್ನು ಗಾಳಿಗೆ ತೆರೆದಿಟ್ಟುಕೊಳ್ಳಿ. ವಿಕಿರಣವನ್ನೂ ಹೊರತುಪಡಿಸಿ ಸ್ವಚ್ಛಂದವಾದ ಗಾಳಿಯಿಂದ ಒಂದಷ್ಟನ್ನು ಚರ್ಮ ಸ್ವೀಕರಿಸಲು ಅನುವು ಮಾಡಿಕೊಡಿ. ಚರ್ಮ ಕಾಂತಿ ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ನೀರು ಕುಡಿಯುವುದಕ್ಕಿಂತ ಉತ್ತಮ ಪರಿಹಾರ ಇನ್ನೊಂದಿಲ್ಲ. ಹೆಚ್ಚು ನೀರು ಕುಡಿದು ವಿಕಿರಣದಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಿ. ಹೆಚ್ಚು ನೀರು ಕುಡಿದಂತೆ ನಿಮ್ಮ ಚರ್ಮವೇ ಸ್ವತಃ ನಿಮಿಗೆ ಆಭಾರಿಯಾಗಿರುತ್ತದೆ.
ನಿಯಮಿತವಾಗಿ ನಿಮ್ಮ ಮುಖವನ್ನು ತೊಳೆಯುತ್ತಾ ಇರಿ. ನಿಮ್ಮ ಕಣ್ಣುಗಳಿಗೆ ಸಾಕಷ್ಟು ನೀರು ಹಾಕಿಕೊಳ್ಳುತ್ತಿರಿ, ವಿಕಿರಣದಿಂದ ಕಣ್ಣಿನ ಮೇಲಾಗುವ ಸಮಸ್ಯೆಯನ್ನೂ ತೊಳೆಯಬಹುದು. ಪ್ರತಿದಿನ ಫೇಸ್ ಕ್ರೀಮ ಹಚ್ಚಿಕೊಂಡು, ಮುಖ ಮಾಯಿಶ್ಚರಸ್ ಆಗಿರುವಂತೆ ನೋಡಿಕೊಳ್ಳಿ. ಮಲಗುವ ಸಮಯದಲ್ಲಿ ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ, ಇಲೆಕ್ಟ್ರಾನಿಕ್ ಸ್ಕ್ರೀನ್ ಎದುರಿರುವುದನ್ನು ಬಹಳಷ್ಟು ಕಡಿಮೆ ಮಾಡಿಕೊಂಡಲ್ಲಿ ಮುಖ ಕಾಂತಿ ಕಳೆದುಕೊಳ್ಳುವುದು ಕಡಿಮೆಯಾಗುತ್ತದೆ.