ETV Bharat / sukhibhava

ತೂಕ ನಷ್ಟ ಸರ್ಜರಿ: ಮಕ್ಕಳು, ಹದಿಹರೆಯದವರಲ್ಲಿ ಹೆಚ್ಚು!

ಜೀವನಶೈಲಿ ಬದಲಾವಣೆ, ದೈಹಿಕ ಚಟುವಟಿಕೆಗಳ ಹೊರತಾಗಿ ನಡೆಸುವ ಈ ಬಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆಗಳು ಕಳವಳಕಾರಿ ವಿದ್ಯಮಾನ.

author img

By

Published : Jun 1, 2023, 11:01 AM IST

Weight loss surgery is increasingly common in children and adolescents

ನ್ಯೂಯಾರ್ಕ್​: ಆಧುನಿಕ ಜೀವನಶೈಲಿ ಮಕ್ಕಳಲ್ಲಿ ಬೊಜ್ಜಿಗೆ ಕಾರಣವಾಗುತ್ತಿದೆ. ಸ್ಥೂಲಕಾಯದಿಂದ ಮಕ್ಕಳು, ಹದಿ ಹರೆಯದವರಲ್ಲಿ ಖಿನ್ನತೆ, ಒತ್ತಡ ಹೆಚ್ಚಿಸುತ್ತಿದೆ. ಇದೇ ಕಾರಣದಿಂದ ಅವರು ತೂಕ ನಷ್ಟಕ್ಕಾಗಿ ಸರ್ಜರಿಗಳ ಮೊರೆ ಹೋಗುತ್ತಿದ್ದಾರೆ. ಅಮೆರಿಕದಲ್ಲಿ ಸ್ಥೂಲಕಾಯದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಜಾಮಾ ಪಿಡಿಯಾಟ್ರಿಕ್ಸ್​ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. 2016 ರಿಂದ 10 ರಿಂದ 19 ವರ್ಷದ ಮಕ್ಕಳು ಮೆಟಾಬಾಲಿಕ್ (ಚಯಾಪಚಯ)​ ಮತ್ತು ಬಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆಗೆ ಹೆಚ್ಚು ಒಳಗಾಗುತ್ತಿದ್ದಾರೆ. ಅದರಲ್ಲೂ 2020 ಮತ್ತು 2021ರ ನಡುವೆ ಶೇ 19 ರಷ್ಟು ಮಂದಿ ಚಿಕಿತ್ಸೆ ಮೊರೆ ಹೋಗಿದ್ದಾರೆ.

ಮಕ್ಕಳಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸುವ ಕುರಿತು ಮಾತನಾಡಿರುವ ಪ್ರೊಫೆಸರ್​ ಮತ್ತು ಪಿಡಿಯಾಟ್ರಿಕ್ಸ್​ ಒಬೆಸಿಟಿ ರಿಸರ್ಚರ್​​, ಈ ದತ್ತಾಂಶ ಮಕ್ಕುಳು ಮತ್ತು ಅವರ ಕುಟುಂಬ ಶಸ್ತ್ರಚಿಕಿತ್ಸೆಗೆ ಆಸಕ್ತಿ ಹೊಂದಿ, ಅದಕ್ಕೆ ಸರಿಯಾದ ಅವಕಾಶ ನೀಡಿದಲ್ಲಿ ಮತ್ತೆ ನಂತರದ ಚಿಕಿತ್ಸೆ ಬಗ್ಗೆ ಅವರಲ್ಲಿ ಉತ್ತಮ ತಿಳುವಳಿಕೆ ಇದ್ದರೆ, ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ. ಅನೇಕ ಅಧ್ಯಯನದಲ್ಲಿ ಕಾರ್ಡಿಯೊಮೆಟಾಬೊಲಿಕ್​ ರೋಗಗಳ ಅಪಾಯವನ್ನು ಬಾಲ್ಯದಿಂದ ಪ್ರೌಢವಸ್ಥೆಯವರೆಗೆ ಬಲವಾಗಿ ಪತ್ತೆ ಮಾಡುತ್ತದೆ.

ಗಂಭೀರ ಆರೋಗ್ಯ ಸಮಸ್ಯೆ: ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅನುಸಾರ, ಬಾಲ್ಯದ ಸ್ಥೂಲಕಾಯ ಅಮೆರಿಕದಲ್ಲಿ ಗಂಭೀರ ಸಮಸ್ಯೆಯಾಗಿದೆ. ಹದಿಹರೆಯದ ಐವರಲ್ಲಿ ಒಬ್ಬರು ಇದಕ್ಕೆ ತುತ್ತಾಗುತ್ತಿದ್ದಾರೆ. 2ರಿಂದ 19 ವರ್ಷದೊಳಗಿನ ಸ್ಥೂಲಕಾಯದ ಸಮಸ್ಯೆ ಹೊಂದಿರುವ 15 ಮಿಲಿಯನ್​ ಜನರಿದ್ದಾರೆ ಎಂದು ಹೇಳಿದೆ. ಗ್ಯಾಸ್ಟ್ರಿಕ್​ ಬೈಪಾಸ್​ ಮತ್ತು ಇತರೆ ತೂಕ ನಷ್ಟ ಸರ್ಜರಿಗಳೂ ಸೇರಿದಂತೆ ಇವುಗಳನ್ನು ಒಟ್ಟಾರೆಯಾಗಿ ಬಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆ ಎಂದು ಕರೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಜೀರ್ಣಾಂಗ ವ್ಯವಸ್ಥೆ ಬದಲಾವಣೆ ಮಾಡುವುದರಿಂದ ತೂಕ ಕಳೆದುಕೊಳ್ಳಲು ಸಹಾಯವಾಗುತ್ತದೆ.

ಆಹಾರ ಮತ್ತು ವ್ಯಾಯಾಮ ಕೆಲಸ ಮಾಡದಿದ್ದಾಗ ಅಥವಾ ನಿಮ್ಮ ತೂಕದ ಕಾರಣದಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವಾಗ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಶಸ್ತ್ರಚಿಕಿತ್ಸೆ ಬಗ್ಗೆ ಮಕ್ಕಳ ವೈದ್ಯರಿಂದ ಇದಕ್ಕೆ ಕಡಿಮೆ ಉಲ್ಲೇಖಿತ ದರಗಳು ಇದೆ. ಜೊತೆಗೆ ಇದು ವಿಮೆ ರಕ್ಷಣೆ ಕೂಡ ಹೆಚ್ಚಿನ ಮಟ್ಟದಲ್ಲಿ ಹೊಂದಿಲ್ಲದೇ ಇರುವುದರಿಂದ ತೂಕನಷ್ಟದ ಶಸ್ತ್ರಚಿಕಿತ್ಸೆಗಳು ಕಡಿಮೆ ಬಳಕೆಯಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಅಮೆರಿಕದಲ್ಲಿ ತೂಕನಷ್ಟ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಜನ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಬೊಜ್ಜು ಚಿಕಿತ್ಸೆಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿ ಅನುಸಾರ, ಚಿಕಿತ್ಸೆ ಮತ್ತು ಜೀವನಶೈಲಿಯ ಬದಲಾವಣೆಗಳ ಬಳಕೆಯನ್ನು ಇದು ತಿಳಿಸುತ್ತದೆ. ಮೊದಲ ಬಾರಿಗೆ, ಕೆಲವು ಯುವಜನರಿಗೆ ಶಸ್ತ್ರಚಿಕಿತ್ಸೆ ಮತ್ತು ಔಷಧಿಗಳನ್ನು ಶಿಫಾರಸು ಮಾಡುತ್ತವೆ. ವಿಶೇಷವಾಗಿ ತೀವ್ರ ಸ್ಥೂಲಕಾಯ ಹೊಂದಿರುವ ಹರೆಯದವರನ್ನು ಶಸ್ತ್ರಚಿಕಿತ್ಸೆಗಾಗಿ ಮೌಲ್ಯಮಾಪನ ಮಾಡಬೇಕು ಎಂದು ವರದಿ ಹೇಳಿದೆ.

ಇದನ್ನೂ ಓದಿ: ನೀವು ಜಂಕ್​ಫುಡ್ ತಿಂತೀರಾ? ಹಾಗಾದರೆ ನಿಮ್ಮ ನಿದ್ದೆಗೆ ಬರುತ್ತೆ ಕುತ್ತು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.