ನ್ಯೂಯಾರ್ಕ್: ಅಲ್ಝೈಮರ್ (ಮರೆವು) ರೋಗಿಗಳಲ್ಲಿ ಸಮಯ ನಿರ್ಬಂಧಿತ ಆಹಾರ ಪದ್ಧತಿಯಿಂದ ದೇಹದ ಜೈವಿಕ ಗಡಿಯಾರವನ್ನು ಸರಿ ಮಾಡಬಹುದಾಗಿದೆ ಎಂದು ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನ ತೋರಿಸಿದೆ. ಇಂಟರ್ಮಿಟೆಂಟ್ ಫಾಸ್ಟಿಂಗ್ ದೈನಂದಿನ ನಿಯಮಿತ ಆಹಾರ ಸೇವನೆ ಮೇಲೆ ಗಮನ ಹೊಂದಿದೆ.
ಅಲ್ಝೈಮರ್ ಹೊಂದಿರುವ ಶೇ 80ರಷ್ಟು ಮಂದಿ ರಾತ್ರಿ ಮಲಗುವ ಅನುಭವ ಕೆಟ್ಟದಾಗಿದೆ. ಜೊತೆಗೆ ಅವರಲ್ಲಿ ಅರಿವಿನ ಕಾರ್ಯಾಚರಣೆ ಕೂಡ ಕೆಟ್ಟದಾಗಿದೆ. ಸಂಜೆ ಸಮಯದಲ್ಲಿ ಅವರಲ್ಲಿ ಗೊಂದಲ ಮತ್ತು ನಿದ್ರೆಗೆ ಜಾರಲು ಸಮಸ್ಯೆ ಏರ್ಪಟ್ಟು ಇಡೀರಾತ್ರಿ ಎಚ್ಚರ ಇರುತ್ತಾರೆ.
ಈ ಸಂಬಂಧ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸ್ಯಾನ್ ಡಿಯಾಗೊ ಸ್ಕೂಲ್ ಆಫ್ ಮೆಡಿಸಿನ್, ಇಲಿಗಳ ಮೇಲೆ ಅಧ್ಯಯನ ನಡೆಸಿದೆ. ಅಲ್ಝೈಮರ್ ರೋಗದಲ್ಲಿ ಕಾಣುವ ಸರ್ಕಾಡಿಯನ್ ಅಡಚಣೆಯನ್ನು ಸರಿಪಡಿಸುವ ಸಾಧ್ಯತೆ ಇದೆ ಎಂದು ತೋರಿಸಿದೆ.
ಸೆಲ್ ಮೆಟಾಬಾಲಿಸ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಇಲಿಗಳಿಗೆ ಸಮಯ ನಿರ್ಬಂಧದ ಆಧಾರದ ಮೇಲೆ ಆಹಾರ ನೀಡಲಾಗಿದ್ದು, ಅವರ ಸ್ಮರಣೆಯಲ್ಲಿ ಅಭಿವೃದ್ಧಿ ಕಂಡಿದೆ. ಜೊತೆಗೆ ಮೆದುಳಿನಲ್ಲಿ ಅಮಿಲೊಯ್ಡ್ ಪ್ರೋಟಿನ್ ಶೇಖರಣೆ ಆಗುವುದು ಕಡಿಮೆಯಾಗಿದೆ. ಈ ಅಂಶಗಳನ್ನು ಮಾನವರ ಕ್ಲಿನಿಕಲ್ ಟ್ರಯಲ್ನ ಫಲಿತಾಂಶದಲ್ಲಿ ಪತ್ತೆ ಮಾಡಬೇಕಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಅಲ್ಝೈಮರ್ ರೋಗಿಗಳಲ್ಲಿ ಸಿರಾಡಿಕ್ ಅಡಚಣೆಯ ಫಲಿತಾಂಶವಾಗಿ ನರಗಳ ಸಮಸ್ಯೆ ಆಗುತ್ತದೆ ಎಂದು ಹಲವು ವರ್ಷಗಳ ಕಾಲ ನಾವು ಊಹೆ ಮಾಡಿದ್ದೆವು. ಆದರೆ, ಇದೀಗ ನಾವು ಉತ್ತಮ ಹಾದಿಯಲ್ಲಿ ಕಲಿಯುತ್ತಿದ್ದೇವೆ. ಸಿರಾಡಿಕ್ ಅಡಚಣೆಯು ಅಲ್ಝೈಮರ್ ರೋಗಕ್ಕೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಬಹುದು ಎಂದು ಅಧ್ಯಯನದ ಹಿರಿಯ ಲೇಖಕ ಪೌಲ್ ಡೆಸ್ಪ್ಲಾಟ್ಸ್ ತಿಳಿಸಿದ್ದಾರೆ.
ನಮ್ಮ ಫಲಿತಾಂಶವೂ ವಿಷಯದ ಸುಲಭ ಸಾಬೀತಿಗೆ ಸಾಕ್ಷ್ಯ ಒದಗಿಸಿದ್ದು, ಈ ಅಡಚಣೆಯನ್ನು ಸುಲಭವಾಗಿ ಲಭ್ಯ ಮಾರ್ಗದಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.
ಸಂಶೋಧಕರು ಇಲಿ ಮಾದರಿಯ ಅಲ್ಝೈಮರ್ ರೋಗದ ತಂತ್ರಗಳನ್ನು ಪರೀಕ್ಷೆ ನಡೆಸಿದ್ದು, ಇಲಿಗಳಿಗೆ ಸಮಯ ನಿರ್ಬಂಧಿತ ಮಾದರಿಯಲ್ಲಿ ಊಟ ನೀಡಲಾಗಿದೆ. ಅವುಗಳಿಗೆ ಪ್ರತಿ ಆರು ಗಂಟೆಗಳಿಗೊಮ್ಮೆ ಆಹಾರವನ್ನು ನೀಡಲಾಗಿದೆ. ಮಾನವರಿಗೆ ಇದನ್ನು ದಿನದ 14 ಗಂಟೆಗಳ ಕಾಲ ಉಪವಾಸಕ್ಕೆ ವರ್ಗಾಯಿಸಬಹುದಾಗಿದೆ.
ನಿಯಂತ್ರಿತ ಇಲಿಗಳಿಗೆ ಹೋಲಿಕೆ ಮಾಡಿದರೆ, ಸಮಯ ನಿರ್ಬಂಧಿತ ಮಾದರಿ ಇಲಿಗಳಲ್ಲಿ ಉತ್ತಮ ಸ್ಮರಣೆ ಕಂಡು ಬಂದಿದೆ. ಅಲ್ಲದೇ, ಇವು ರಾತ್ರಿ ಸಮಯದಲ್ಲಿ ಕಡಿಮೆ ಕ್ರಿಯಾಶೀಲವಾಗಿದ್ದು, ನಿಯಮಿತ ನಿದ್ರೆ ಮಾದರಿಯನ್ನು ಅನುಸರಿಸಿದೆ. ನಿದ್ದೆಯಲ್ಲಿ ಕೆಲವು ಅಡಚಣೆಯನ್ನು ಅನುಭವಿಸಿದೆ.
ಪರೀಕ್ಷೆಗೆ ಒಳಗಾದ ಇಲಿಗಳು ಉತ್ತಮವಾದ ಅರಿವಿನ ವಿಶ್ಲೇಷಣೆಯನ್ನು ಹೊಂದಿವೆ. ಜೊತೆಗೆ ಸಮಯ ನಿರ್ಬಂಧಿತ ಆಹಾರ ಸೇವನೆ ಆಲ್ಝೈಮರ್ ರೋಗಿಗಳ ನಡುವಳಿಕೆಯ ಲಕ್ಷಣಗಳನ್ನು ಸರಿಹೊಂದಿಸಲು ಸಹಾಯ ಮಾಡಿದೆ. ಇದೇ ವೇಳೆ ಸಂಶೋಧಕರು ಇಲಿಗಳ ಮೊಲೆಕ್ಯೂಲರ್ ಮಟ್ಟವನ್ನು ವೀಕ್ಷಿಸಿದ್ದಾರೆ. ಸಮಯ ನಿರ್ಬಂಧಿ ಆಹಾರ ಮಾದರಿಯಲ್ಲಿ ಆಲ್ಝೈಮರ್ ಜೊತೆಗೆ ಬಹು ಜೀನ್ ಸಂಬಂಧ ಹೊಂದಿದೆ. ಈ ವೇಳೆ ನರ ಉರಿಯೂತಗಳು ವಿಭಿನ್ನವಾಗಿ ವ್ಯಕ್ತವಾಗಿದೆ.
ಆಹಾರ ಮಾದರಿಗಳು ಮೆದುಳಿನಲ್ಲಿ ಅಮಿಲೋಯ್ಡ್ ಪ್ರೋಟಿನ್ ಶೇಖರಣೆ ಆಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಅಮಿಲೋಯ್ಡ್ ಶೇಖರಣೆಯೂ ಕೂಡ ಅಲ್ಝೈಮರ್ ರೋಗದ ಪ್ರಮುಖ ಒಂದು ಲಕ್ಷಣವಾಗಿದೆ. ಸಮಯ ನಿರ್ಬಂಧಿತ ಆಹಾರ ಸೇವನೆಯ ಜನರು ಸುಲಭವಾಗಿ ಮತ್ತು ತಕ್ಷಣಕ್ಕೆ ಜೀವನ ಸಂಯೋಜಿಸಲು ಸಾಧ್ಯ ಎಂದು ಲೇಖಕರು ತಿಳಿಸಿದ್ದಾರೆ. (IANS)
ಇದನ್ನೂ ಓದಿ: ವೃದ್ಧರಲ್ಲಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ ಡಿಜಿಟಲ್ ಒಗಟಿನ ಆಟಗಳು