ETV Bharat / sukhibhava

ಹೈಪರ್​ ಆ್ಯಕ್ಟಿವ್​​ ಸಮಸ್ಯೆ ಗಂಭೀರ ಮಾನಸಿಕ ಆರೋಗ್ಯದೊಂದಿಗೆ ಹೊಂದಿದೆ ಸಂಬಂಧ: ಅಧ್ಯಯನ - ಸ್ವತಂತ್ರ್ಯ ಅಪಾಯದ ಅಂಶಗಳು

ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡು ಬರುವ ಹೆಚ್ಚು ಚಟುವಟಿಕೆಯ ಸಮಸ್ಯೆ ಅನೇಕ ಬಾರಿ ವಯಸ್ಕ ಹಂತದವರೆಗೆ ಮುಂದುವರೆಯುತ್ತದೆ

http://10.10.50.85:6060/reg-lowres/06-September-2023/deppresion_0609newsroom_1693985009_278.jpg

author img

By ETV Bharat Karnataka Team

Published : Sep 6, 2023, 2:53 PM IST

ಲಂಡನ್​ : ಹೈಪರ್​ ಆಕ್ಟಿವ್​ ಸಮಸ್ಯೆ (ಹೆಚ್ಚು ಕ್ರಿಯಾಶೀಲತೆ) ಸಾಮಾನ್ಯ ಮತ್ತು ಗಂಭೀರ ಮಾನಸಿಕ ಸಮಸ್ಯೆ ಸ್ವತಂತ್ರ್ಯ ಅಪಾಯದ ಅಂಶಗಳು ಎಂದು ಸಂಶೋಧನೆ ತಿಳಿಸಿದೆ. ಏಕಾಗ್ರತೆ ಕೊರತೆ/ ಹೈಪರ್​ ಆಕ್ಟಿವಿಟಿ ಸಮಸ್ಯೆ (ಎಡಿಎಚ್​ಡಿ) ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡು ಬರುವ ನರ ಅಭಿವೃದ್ಧಿ ಪರಿಸ್ತಿತಿ ಆಗಿದ್ದು, ಮೂರನೇ ಎರಡು ಪ್ರಕರಣದಲ್ಲಿ ಇದು ವಯಸ್ಕರಾದ ಬಳಿಕವೂ ಕೆಲವೊಮ್ಮೆ ಅಭಿವೃದ್ಧಿ ಆಗುತ್ತದೆ. ವಿಶ್ವಾದ್ಯಂತ ಇದರ ಪ್ರಸ್ತುತತೆ ಮಕ್ಕಳು ಮತ್ತು ಹದಿವಯಸ್ಸಿನಲ್ಲಿ ಶೇ 5ರಷ್ಟು ಇದ್ದರೆ, ವಯಸ್ಕರಲ್ಲಿ ಶೇ 2.5ರಷ್ಟಿದೆ.

ಎಡಿಎಚ್​ಡಿಯು ಮೂಡ್​ ಮತ್ತು ಆತಂಕದ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ. ಆದರೆ ಇದು ಮಾನಸಿಕ ಸಮಸ್ಯೆಯೊಂದಿಗೆ ಸಾಂದರ್ಭಿಕವಾಗಿ ಸಂಬಂಧಿಸಿದೆ. ಜರ್ಮನಿಯ ಆಗ್ಸ್‌ಬರ್ಗ್ ಯುನಿವರ್ಸಿಟಿ ಸಂಶೋಧಕರು ಈ ಕುರಿತು ಸಾಕ್ಷ್ಯವನ್ನು ಪತ್ತೆ ಮಾಡಿದ್ದು, ಅನೋರೆಕ್ಸಿಯಾ ನರ್ವೋಸಾ (ಶೇ 28ರಷ್ಟು) ಮತ್ತು ಎಡಿಎಚ್​ಡಿ ಪುರಾವೆಗಳು ಅಪಾಯವನ್ನು ಹೆಚ್ಚಿಸುವುದರೊಂದಿಗೆ ಸಂಬಂಧ ವ್ಯಕ್ತವಾಗಿದೆ.

ಗಂಭೀರ ಖಿನ್ನತೆ ಹೊಂದಾಣಿಕೆ ಪ್ರಭಾವ ಆತ್ಮಹತ್ಯೆ ಪ್ರಯತ್ನ (ಶೇ 30ರಷ್ಟು) ಮತ್ತು ಪಿಟಿಎಸ್​ಡಿ (ಶೆ 18ರಷ್ಟು) ಸಂಬಂಧ ಹೊಂದಿದೆ. ಸಂಶೋಧನಾ ತಂಡವೂ ಆರೋಗ್ಯ ವೃತ್ತಿಪರರಿಗೆ ಈ ಸಮಸ್ಯೆ ಕುರಿತು ಮೇಲ್ವಿಚಾರಣೆಗೆ ಶಿಫಾರಸು ಮಾಡಿದ್ದಾರೆ. ಈ ಅಧ್ಯಯನವೂ ಮಾನಸಿಕ ಸಮಸ್ಯೆ ನಡುವಿನ ಹೊಸ ಅಂಶವನ್ನು ತೆರೆದಿದೆ. ಕ್ಲಿನಿಕಲ್​ ಪ್ರಯೋಗಾಲಯದಲ್ಲಿ ಎಡಿಎಚ್​ಡಿಯನ್ನು ಮಾನಸಿಕ ಸಮಸ್ಯೆಯೊಳಗೆ ಮೇಲ್ವಿಚಾರಣೆ ನಡೆಸಬೇಕು. ಇದರ ತಡೆಗೆ ಅವಶ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನ ಕುರಿತು ಬಿಎಂಜೆ ಮೆಂಟಲ್​ ಹೆಲ್ತ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಅಧ್ಯಯನದಲ್ಲಿ ಸಂಶೋಧಕರು ಮೆಂಡೆಲಿಯನ್​ ರ್ಯಾಂಡಮೈಸೆಷನ್​ ತಂತ್ರವನ್ನು ಬಳಕೆ ಮಾಡಿದ್ದರು. ಎಡಿಎಚ್​ಡಿಯಲ್ಲಿನ ನಿರ್ದಿಷ್ಟ ಫಲಿತಾಂಶ ಪಡೆಯಲು ಅನುವಂಶಿಕ ಪುರಾವೆ ಪಡೆಯಲಾಗಿದೆ. ಈ ಅಧ್ಯಯನದಲ್ಲಿ 7 ಮಾನಸಿಕ ಸಮಸ್ಯೆಯನ್ನು ಅಧ್ಯಯನ ನಡೆಸಲಾಗಿದೆ. ಅವುಗಳೆಂದರೆ ಬೈಪೋಲಾರ್​ ಡಿಸಾರ್ಡರ್​​, ಖಿನ್ನತೆ, ಆತಂಕ, ವ್ಯಾಕುಲತೆ, ಸ್ಕಿಜೋಫ್ರೇನಿಯಾ ಆಘಾತಕಾರಿ ಒತ್ತಡದ ಸಮಸ್ಯೆ (ಪಿಟಿಎಸ್ಡಿ, ಅನೋರೆಕ್ಸಿಯಾ ನರ್ವೋಸ್​

ಎಡಿಎಚ್​ಡಿ ಈ ಏಳು ಅಸ್ವಸ್ಥತೆ ನಡುವಿನ ಸಂಬಂಧವನ್ನು ಹೊಂದಿದೆ ಎಂದು ತಿಳಿಯಲು ಈ ತಂತ್ರವನ್ನು ಬಳಸಲಾಗಿದೆ. ಎಡಿಎಚ್​ಡಿಯು ನೇರ ಮತ್ತು ಪರೋಕ್ಷ ಪರಿಣಾಮದ ಕುರಿತು ಎರಡೂ ವಿಶ್ಲೇಷಣೆ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಎಡಿಎಚ್​ಡಿ ಮತ್ತು ಬೈಪೋಲಾರ್​ ಡಿಸಾರ್ಡರ್​, ಆತಂಕ ಅಥವಾ ಸ್ಕಿಜೋಫ್ರೇನಿಯಾ ನಡುವಿನ ಸಂಬಂದಗಳ ಬಗ್ಗೆ ಪುರಾವೆಗಳಿಲ್ಲ. ವಿಶ್ಲೇಷಣೆಯ ಫಲಿತಾಂಶಗಳು ತೋರಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಉದ್ಯೋಗ ಅಭದ್ರತೆಯಿಂದ ಅಕಾಲಿಕ ಸಾವಿನ ಅಪಾಯ ಹೆಚ್ಚು: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.