ETV Bharat / sukhibhava

ಸೊಳ್ಳೆ ಕಡಿತದಿಂದ ಹೈರಾಣಾಗಿದ್ದೀರಾ? ಹಾಗಾದರೆ ಈ ರೀತಿಯಾಗಿ ನೈಸರ್ಗಿಕ ಪರಿಹಾರ ಕಂಡುಕೊಳ್ಳಿ!

ಸೊಳ್ಳೆಗಳ ಕಡಿತ ಜೊತೆಗೆ ಮನೆಯ ಅಂದ ಹೆಚ್ಚಿಸುವ ಈ ಗಿಡಗಳನ್ನು ನೆಡುವುದರಿಂದ ಹೆಚ್ಚು ಪ್ರಯೋಜನ ಇದೆ.

author img

By ETV Bharat Karnataka Team

Published : Aug 29, 2023, 1:38 PM IST

find-this-natural-remedy-to-avoid-mosquito-bites

ಮಳೆಗಾಲದಲ್ಲಿ ಸೊಳ್ಳೆಗಳು ಸಾಮಾನ್ಯವಾಗಿರುತ್ತದೆ. ಈ ಸೊಳ್ಳೆಗಳ ಕಡಿತವೂ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳುವುದು ಅಗತ್ಯವಾಗಿದೆ. ಸೊಳ್ಳೆ ಕಾಯಿಲ್ ಸೇರಿದಂತೆ ಇನ್ನಿತರ ವಸ್ತುಗಳ ಬದಲಾಗಿ ಇವುಗಳನ್ನು ನೈಸರ್ಗಿಕ ವಿಧಾನದ ಮೂಲಕ ತಡೆಯಬಹುದು. ಸೊಳ್ಳೆಗಳ ನಿವಾರಣೆಗೆ ಮನೆಯಲ್ಲಿ ಈ ಗಿಡಗಳನ್ನು ಬೆಳೆಸುವ ಮೂಲಕ ಅವುಗಳಿಂದ ನೈಸರ್ಗಿಕ ಪರಿಹಾರಗಳನ್ನು ಕಂಡು ಕೊಳ್ಳಬಹುದು.

ಬೇವು: ಆ್ಯಂಟಿ ಮೈಕ್ರೋಬಯಲ್​ ಮತ್ತು ಆ್ಯಂಟಿ ಫಂಗಲ್​ ಪ್ರಾಪರ್ಟಿ ಗುಣ ಇದರಲ್ಲಿ ಇದ್ದು ಕೇವಲ ಸೊಳ್ಳೆ ಮಾತ್ರವಲ್ಲದೇ ಬೇರೆ ಕೀಟಗಳನ್ನು ದೂರವಿಡುತ್ತದೆ. ಇದೇ ಅಂಶಗಳು ಬೋನ್ಸಾಯಿ ಗಿಡದಲ್ಲೂ ಲಭ್ಯವಿದೆ. ಇದನ್ನು ಮನೆಯೊಳಗಿನ ಬಾಲ್ಕನಿಯಲ್ಲೂ ಬೆಳೆಯಬಹುದಾಗಿದೆ. ಬೇವಿನ ಕಹಿ ವಾಸನೆಗಳು ಸೊಳ್ಳೆಗಳಿಗೆ ಆಗುವುದಿಲ್ಲ. ಮನೆಯಲ್ಲಿ ಯಾವುದಾದರೂ ಕಾರಣಕ್ಕೆ ಧೂಪ ದ್ರವ್ಯಗಳನ್ನು ಹಾಕುವುದಾದರೆ, ಅದಕ್ಕೆ ಒಂದೆರಡು ಒಣಗಿದ ಬೇವಿನ ಎಲೆ ಅಥವಾ ಪುಡಿಯನ್ನು ಹಾಕುವುದು ಉತ್ತಮ. ಆದರೆ, ಇದನ್ನು ಹೆಚ್ಚಾಗಿ ಮಾಡಬೇಡಿ. ಕಾರಣ ಇದು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ.

ನಿಂಬೆ ಎಲೆ: ನಿಂಬೆ ಎಲೆ ಕೂಡ ಸೊಳ್ಳೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದೇ ಕಾರಣಕ್ಕೆ ಇದರ ಎಣ್ಣೆಯನ್ನು ಸೊಳ್ಳೆ ಮತ್ತು ಇತರ ಕೀಟಗಳನ್ನು ಓಡಿಸಲು ಬಳಕೆ ಮಾಡಲಾಗುವುದು. ಮನೆಯಲ್ಲಿ ಈ ಗಿಡವನ್ನು ಬೆಳೆಯಲು ಪ್ರಯತ್ನಿಸಿ. ಈ ಗಿಡ ಬೆಳೆಸಲು ಹೆಚ್ಚಿನ ನಿರ್ವಹಣೆ ಅಗತ್ಯ ಕೂಡ ಇಲ್ಲ. ಅಷ್ಟೇ ಅಲ್ಲದೇ, ಇದರ ಎಣ್ಣೆಗಳು ಕೂದಲಿನ ಪೋಷಣೆಗೂ ಸಹಾಯ ಮಾಡುತ್ತದೆ. ಇದರ ಎಣ್ಣೆಯನ್ನು ಒಂದೆರಡು ತೆಂಗಿನ ಎಣ್ಣೆಯೊಂದಿಗೆ ಬೆರಸಿ ತಲೆ ಮತ್ತು ಕಾಲಿಗೆ ಬಳಕೆ ಮಾಡಬಹುದು.

ರೋಸ್​ಮೆರಿ: ಈ ಗಿಡವನ್ನು ಬೆಳೆಸುವುದರಿಂದ ಕೂಡ ಮನೆಯಲ್ಲಿ ಸೊಳ್ಳೆಯ ಕಾಟವನ್ನು ತಪ್ಪಿಸಬಹುದು. ಇದು ಕೂಡ ಘಾಟು ವಾಸನೆ ಹೊರಸೂಸುವುದರಿಂದ ಸೊಳ್ಳೆಗಳು ಸುಲಭವಾಗಿ ಮನೆಗೆ ನುಗ್ಗುವುದನ್ನು ತಡೆಯುತ್ತದೆ.

ತುಳಸಿ: ಮನೆ ಮುಂದೆ ತುಳಸಿ ಇರುವುದು ಸಾಮಾನ್ಯ, ಇದರ ಎಲೆಗಳ ವಾಸನೆ ಕೂಡ ಸೊಳ್ಳೆಗಳನ್ನು ಆಕರ್ಷಿಸುವುದಿಲ್ಲ. ಈ ಹಿನ್ನೆಲೆ ಇದನ್ನು ಕೂಡ ನಿಮ್ಮ ಉದ್ಯಾನವನದಲ್ಲಿ ಬಳಕೆ ಮಾಡಬಹುದು. ತುಳಸಿ ಎಲೆಗಳನ್ನು ನೀರಿನಲ್ಲಿ ಬೆರಸಿ ಅದರ ನೀರನ್ನು ಮನೆಯಲ್ಲಿ ಸಿಂಪಡಿಸಬಹುದು.

ಕ್ಯಾಟ್ನಿಪ್​: ಇದು ಪುದಿನಾ ಎಲೆಗಳಂತೆ ಇರುತ್ತದೆ. ಇದು ಕೂಡ ಮನೆಯಲ್ಲಿ ಸೊಳ್ಳೆ ಮತ್ತಿತ್ತರ ಕೀಟ ಜೊತೆಗೆ ಜೇಡಗಳ ಪ್ರವೇಶವನ್ನು ನಿರ್ಬಂಧಿಸುತ್ತದೆ.

ಅಜರೆಟಮ್: ಪಾಟ್​ನಲ್ಲಿ ಬೆಳೆಯಬಹುದಾದಂತಹ ಈ ಗಿಡದ ಬಣ್ಣ ಬಣ್ಣದ ಸಣ್ಣದ ಹೂವುಗಳು ಆಕರ್ಷಣೀಯವಾಗಿದೆ. ಈ ಹೂವಿನ ವಾಸನೆ ಕೂಡ ಸೊಳ್ಳೆಗಳನ್ನು ಆಕರ್ಷಿಸುವುದಿಲ್ಲ. ಈ ಹೂವುಗಳನ್ನು ನೀರಿನಲ್ಲಿ ನೆನಸಿ ಅದರ ನೀರನ್ನು ಮನೆಯಲ್ಲಿ ಸ್ಪ್ರೇ ಮಾಡುವುದರಿಂದ ಸೊಳ್ಳೆಗಳನ್ನು ತಡೆಯಬಹುದಾಗಿದೆ.

ಲ್ಯಾವೆಂಡರ್​: ಇದು ಕೂಡ ಸೊಳ್ಳೆಗಳ ನಿವಾರಕ ಎಂದೇ ಹೆಸರಿಸಲಾಗಿದೆ. ಇದು ನಾಲ್ಕು ಅಡಿ ಉದ್ದಕ್ಕೆ ಬೆಳೆಯುತ್ತದೆ. ಇದನ್ನು ಮನೆ ಗಾರ್ಡನ್​ ಅಥವಾ ಬಾಲ್ಕನಿಯಲ್ಲಿ ಬೆಳೆಸಬಹುದು. ಇದು ಅದರ ಸೊಬಗನ್ನು ಹೆಚ್ಚಿಸುತ್ತದೆ.

ಸೂಚನೆ:( ಬಳಕೆಗೆ ಮುನ್ನ ನುರಿತ ತಜ್ಞರ ಸಲಹೆ ಪಡೆದುಕೊಳ್ಳುವುದು ಉಚಿತ)

ಇದನ್ನೂ ಓದಿ: ಹವಾಮಾನ ಬದಲಾವಣೆ.. ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯದ ಬಗ್ಗೆ ತಜ್ಞರ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.