ವಾಷಿಂಗ್ಟನ್: ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ದೈಹಿಕ ಚಟುವಟಿಕೆ ಪಾತ್ರಗಳ ಕುರಿತು ಆಗಾಗ್ಗೆ ಉಲ್ಲೇಖಿಸಲಾಗುತ್ತದೆ. ಈ ದೈಹಿಕ ಚಟುವಟಿಕೆ ನೇರವಾಗಿ ಮಿದುಳಿನ ಆರೋಗ್ಯಕ್ಕೆ ಸಂಬಂಧಿಸಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಬೆಜ್ಮ್ಯಾನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಡ್ ಸೈನ್ಸ್ ಅಂಡ್ ಟೆಕ್ನಾಲಾಜಿ ಈ ಸಂಬಂದ ತಿಳಿಸಿದ್ದು, ವ್ಯಾಯಾಮದ ವೇಳೆ ಸ್ನಾಯುಗಳಿಂದ ಬಿಡುಗಡೆಯಾಗುವ ರಾಸಾಯನಿಕ ಸಂಕೇತಗಳು ಮಿದುಳಿನ ನರಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅಧ್ಯಯನ ತಿಳಿಸಿದ್ದು, ಈ ಸಂಬಂಧ ನ್ಯರೋಸೈನ್ಸ್ ಜರ್ನಲ್ ಪ್ರಕಟಿಸಿದೆ.
ಮಿದುಳಿನ ಆರೋಗ್ಯದ ಮೇಲೆ ಪ್ರಯೋಜನ: ವ್ಯಾಯಾಮದ ವೇಳೆ ಸ್ನಾಯು ಸಂಕುಚಿತಗೊಂಡು, ಬೈಸೆಪ್ಗಳು ಭಾರವಾದ ತೂಕವನ್ನು ಎತ್ತುವಂತೆ ಕೆಲಸ ಮಾಡುತ್ತದೆ. ಇದರಿಂದ ದೇಹದ ವಿವಿಧ ಭಾಗಕ್ಕೆ ರಕ್ತ ಪ್ರವಾಹ ಆಗುತ್ತದೆ. ಇದು ಮಿದುಳಿನವರೆಗೆ ಸಾಗುತ್ತದೆ. ಮಿದುಳಿನ ಹಿಪೊಕ್ಯಾಂಪಸ್ ಮಿದುಳಿನ ಭಾಗಕ್ಕೆ ಪ್ರಯೋಜನ ನೀಡುವ ಸಂಬಂಧ ಸಂಶೋಧನೆ ನಡೆಸಲಾಗಿದೆ.
ಹಿಪೊಕ್ಯಾಂಪಸ್ ಕಲಿಕೆ ಮತ್ತು ಸ್ಮರಣೆಗೆ ನಿರ್ಣಾಯಕ ಸ್ಥಳವಾಗಿದ್ದು, ಇದನ್ನು ಅರಿವಿನ ಆರೋಗ್ಯ ಎನ್ನಲಾಗುವುದು ಎಂದು ಕಿ ಯುನ್ ಲೀ ತಿಳಿಸಿದ್ದಾರೆ. ಹೇಗೆ ವ್ಯಾಯಾಮ ಈ ಹಿಪೊಕ್ಯಾಂಪಸ್ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅರ್ಥ ಮಾಡಿಕೊಳ್ಳಲಾಗಿದೆ.
ರಾಸಾಯನಿಕ ಸಂಕೇತ: ಸ್ನಾಯು ಕೋಶಗಳಿಂದ ರಾಸಾಯನಿಕ ಸಂಕೇತ ಒಳಗೊಂಡಿರುವ ಸಂಸ್ಕೃತಿಯನ್ನು ಹಿಪಿಕ್ಯಾಂಪಲ್ ನ್ಯೂರಾನ್ ಮತ್ತು ಆಸ್ಟ್ರೋಸೈಟ್ಗಳು ಎಂದು ಕರೆಯಲಾಗುತ್ತದೆ. ಸ್ನಾಯು ಕೋಶಗಳು ಸಂಕುಚಿತಗೊಳ್ಳುವುದರಿಂದ ರಾಸಾಯನಿಕ ಸಂಕೇತಗಳಿಗೆ ತೆರೆದುಕೊಳ್ಳುವುದರಿಂದ ಹಿಪೊಕ್ಯಾಂಪಲ್ ನ್ಯೂರಾನ್ ದೊಡ್ಡದಾಗಿ, ಆಗ್ಗಾಗ್ಗೆ ವಿದ್ಯುತ್ ಸಂಕೇತಗಳನ್ನು ಉತ್ಪಾದಿಸುತ್ತದೆ. ಈ ಮೂಲಕ ಮಿದುಳಿನ ಆರೋಗ್ಯಕ್ಕೆ ವ್ಯಾಯಾಮ ಉತ್ತಮವಾಗಿದೆ ಎಂಬುದನ್ನು ಬಹಿರಂಗಪಡಿಸಬಹುದು.
ವ್ಯಾಯಾಮದ ಪರಿಣಾಮಗಳ ಮಧ್ಯಸ್ಥಿಕೆಯಲ್ಲಿ ಆಸ್ಟ್ರೋಸೈಟ್ಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಇವು ಮಿದುಳಿನ ಕಾರ್ಯಕ್ಕೆ ಅಗತ್ಯವಾದ ಸಮತೋಲನ ಒದಗಿಸುತ್ತದೆ. ನರಕೋಶಗಳ ಬೆಳವಣಿಗೆ ಮತ್ತು ನಿಯಂತ್ರಣದ ನಡುವಿನ ರಾಸಾಯನಿಕ ಮಾರ್ಗ ಅರ್ಥ ಮಾಡಿಕೊಳ್ಳುವುದರ ಜೊತೆಗೆ ಮಿದುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಜೀವನ ಜೈಲಿ ಮತ್ತು ಅರಿವಿನ ಆರೋಗ್ಯಕ್ಕೆ ವ್ಯಾಯಾಮಗಳು ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ಲೀ ತಿಳಿಸಿದ್ದಾರೆ.
ಸ್ನಾಯುವಿನ ಸಂಕೋಚನ ಮತ್ತು ಹಿಪೊಕ್ಯಾಂಪಲ್ ನರಕೋಶಗಳ ಬೆಳವಣಿಗೆ ಮತ್ತು ನಿಯಂತ್ರಣದ ನಡುವಿನ ರಾಸಾಯನಿಕ ಮಾರ್ಗವನ್ನು ಅರ್ಥಮಾಡಿಕೊಳ್ಳುವುದಕ್ಕೆ ವ್ಯಾಯಾಮವು ಸಹಕಾರಿ ಆಗಲಿದೆ. ಅಷ್ಟೇ ಅಲ್ಲ ವ್ಯಾಯಾಮದಿಂದ ಮೆದುಳಿನ ಆರೋಗ್ಯ ಸುಧಾರಿಸಲು ಹೇಗೆಲ್ಲ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೊದಲ ಹಂತವೂ ಆಗಿದೆ ಎಂದು ತಜ್ಞರು ಹೇಳಿದ್ದಾರೆ.
ಅಂತಿಮವಾಗಿ ನಾವು ಕೈಗೊಂಡಿರುವ ಈ ಸಂಶೋಧನೆಯಿಂದ ಮರೆಗುಳಿಕೆ ಅಥವಾ ಆಲ್ಝೈಮರ್ನ ಕಾಯಿಲೆಯಂತಹ ಅರಿವಿನ ಅಸ್ವಸ್ಥತೆಗಳಿಂದ ಹೊರ ಬರಲು ವ್ಯಾಯಾಮ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸಂಶೋಧಕ ಲೀ ಹೇಳಿದ್ಧಾರೆ.
ಇದನ್ನೂ ಓದಿ: ಹೆಚ್ಚಿದ ಬಿಸಿಲ ಝಳ: ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ