ETV Bharat / sukhibhava

ಋತುಬಂಧ ನಂತರ ಬರುವ ಮಾನಸಿಕ ಒತ್ತಡಕ್ಕೆ ಇಲ್ಲಿದೆ ಪರಿಹಾರ - ಮಾನಸಿಕ ಸಮಸ್ಯೆ

ಋತುಬಂಧದ ನಂತರ ಉಂಟಾಗುವ ದೈಹಿಕ ಸಮಸ್ಯೆಗಳಿಗಿಂತಲೂ ಹೆಚ್ಚು ಮಹಿಳೆಯರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಹೆಚ್ಚಿನವರು ಅವುಗಳನ್ನು ಹೊರಗಡೆ ಹೇಳಿಕೊಳ್ಳದೆ ಒಬ್ಬಂಟಿಯಾಗಿಯೇ ಅನುಭವಿಸುತ್ತಾರೆ.

Coping with the emotions of menopause
ಋತುಬಂಧ ನಂತರದ ಮೂಡ್​ ಸ್ವಿಂಗ್ಸ್​ಗೆ ಪರಿಹಾರ ಏನು?
author img

By

Published : Aug 15, 2022, 4:06 PM IST

ನವದೆಹಲಿ: ಋತುಬಂಧಕ್ಕೊಳಗಾದ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಪ್ರತಿ ವರ್ಷ 47 ಮಿಲಿಯನ್​ ಹೊಸ ಸದಸ್ಯರು ಈ ಗುಂಪಿಗೆ ಸೇರುತ್ತಿದ್ದು, ಆ ಸಂಖ್ಯೆ 2030ರ ವೇಳೆಗೆ 1.2 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ. ವರ್ಷದಿಂದ ವರ್ಷಕ್ಕೆ ನಾವು ಆಧುನಿಕತೆಗೆ ತೆರೆದುಕೊಂಡರೂ, ಎಷ್ಟೋ ಮಹಿಳೆಯರು ಭಯ ಹಾಗೂ ಅವಮಾನವಾಗುವ ಕಾರಣದಿಂದಾಗಿ, ಅಹಿತಕರ ಎನಿಸಿದರೂ ಋತುಬಂಧದ ಲಕ್ಷಣಗಳನ್ನು ಮೌನವಾಗಿಯೇ ಅನುಭವಿಸುತ್ತಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ 51ನೇ ವಯಸ್ಸಿಗೆ ಋತುಬಂಧ ಸಂಭವಿಸಿದರೆ ಭಾರತದಲ್ಲಿ 46.2ನೇ ವರ್ಷಕ್ಕೆ ಋತುಬಂಧ ಸಂಭವಿಸುತ್ತದೆ. ಶೇ 33ರಷ್ಟು ಮಹಿಳೆಯರು ಋತುಬಂಧದ ನಂತರ ತಮ್ಮ ಸಾಮಾಜಿಕ ಜೀವನದಲ್ಲಿ ಬಳಲುತ್ತಾರೆ. ಈ ಸಾಮಾಜಿಕ ಜೀವನಕ್ಕಿಂತಲೂ ಋತುಬಂಧದ ನಂತರ ಹಾಟ್​ ಫ್ಲ್ಯಾಶಸ್​, ರಾತ್ರಿ ಬೆವರುವಿಕೆಯಂತಹ ಸಾಮಾನ್ಯ ದೈಹಿಕ ಲಕ್ಷಣಗಳ ಜೊತೆಗೆ ದುಃಖ, ಆತಂಕ, ನಿದ್ರಾಹೀನತೆ, ಬಳಲಿಕೆಯಂತಹ ಮಾನಸಿಕ ಸಮಸ್ಯೆಗಳಿಗೂ ಒಳಗಾಗುತ್ತಾರೆ. ಅದರಲ್ಲೂ ಮೂಡ್​ ಬದಲಾವಣೆ ಹೆಚ್ಚು ತೊಂದರೆ ನೀಡುತ್ತವೆ. ಯಾಕೆಂದರೆ ಸಾಮಾನ್ಯವಾಗಿ ಋತುಬಂಧದ ನಂತರ ಕೇಂದ್ರೀಕರಣ ಕಡಿಮೆಯಾಗಿ, ಭಾವನೆಗಳನ್ನು ಕೆರಳಿಸುತ್ತವೆ. ಇವೆಲ್ಲವೂ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ.

ಹಾಗಾದರೆ ಋತುಬಂಧದ ನಂತರ ಉಂಟಾಗುವ ಭಾವನಾತ್ಮಕ ಒತ್ತಡಗಳಿಂದ ಹೊರಬರಲು ಏನು ಮಾಡಬಹುದು?

ಮೌನ ಮುರಿಯಿರಿ: ನೀವು ಒಬ್ಬಂಟಿಯಾಗಿಯೇ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗಿಲ್ಲ. ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ನಿಮ್ಮ ರೋಗಲಕ್ಷಣಗಳ ಕುರಿತು ಮಾತನಾಡುವುದು, ನಿಮಗೆ ಅಗತ್ಯವಿರುವ ಬೆಂಬಲವನ್ನು ತಡಮಾಡದೆ ಅವರಿಂದ ಪಡೆಯುವುದು ಮಾಡಬಹುದು. ವಿಶ್ವಾಸದಿಂದ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದರಿಂದ, ಒಬ್ಬಂಟಿಯೆನ್ನುವ ಭಾವನೆಯನ್ನು ದೂರ ಮಾಡಿ, ನಿಮ್ಮ ಮನಸ್ಥಿತಿ ಸುಧಾರಿಸಲು ಇದು ಸಹಾಯ ಮಾಡುತ್ತದೆ.

ಅದಕ್ಕಿಂತ ಹೆಚ್ಚಾಗಿ, ನಿಮ್ಮ ಕುಟುಂಬ ಅನೇಕ ವಿಧಗಳಲ್ಲಿ ನಿಮಗೆ ಬೆನ್ನೆಲುಬು ಎಂಬುದನ್ನು ಮರೆಯದಿರಿ. ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ, ನಿಮ್ಮ ರೋಗಲಕ್ಷಣಗಳು ನಿಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಅವರು ನಿಮ್ಮೊಂದಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಸಂವಹನ ಅಂತರವನ್ನು ಕಡಿಮೆ ಮಾಡುವ ಮೂಲಕ ಮತ್ತು ಮನೆಯಲ್ಲಿ ಹೆಚ್ಚು ಸಹಾಯ ಮಾಡುವ ಮೂಲಕ ಬೆಂಬಲವಾಗಿ ನಿಲ್ಲುತ್ತಾರೆ. ನಿಮ್ಮ ದಿನಚರಿಯಲ್ಲಿ ಅವರೂ ಪಾಲ್ಗೊಳ್ಳುವ ಮೂಲಕ ನಿಮ್ಮ ಜೀವನಶೈಲಿಯ ಬದಲಾವಣೆಗೆ ಕಾರಣವಾಗಬಹುದು.

ಋತುಬಂಧಕ್ಕೆ ಸಂಭಂಧಿಸಿದ ರೋಗಲಕ್ಷಣಗಳನ್ನು ಪರಿಹರಿಸಲು ಸಂಪೂರ್ಣ ಶ್ರೇಣಿಯ ಚಿಕಿತ್ಸೆಗಳು ಲಭ್ಯವಿದೆ. ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅದಕ್ಕಾಗಿ ಮನೆಯಲ್ಲಿ ಮೌನ ಮುರಿಯುವುದರಿಂದ, ನಿಮಗಿರುವ ಸಮಸ್ಯೆಯ ಬಗ್ಗೆ ವೈದ್ಯರನ್ನು ಸಂಪರ್ಕಿಸಲು ಅಗತ್ಯವಿರುವ ಆತ್ಮವಿಶ್ವಾಸವನ್ನು ಮನೆಯವರು ನೀಡುತ್ತಾರೆ.

ನಿಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ: ಮೂಡ್ ಬದಲಾವಣೆಗಳು, ಪ್ರೇರಣೆಯ ಕೊರತೆ, ಒತ್ತಡ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪ್ರೇರೇಪಿಸುವ ಮೂಲಕ ಋತುಬಂಧವು ನಿಮ್ಮ ದೈನಂದಿನ ಜೀವನದಲ್ಲಿ ಆಳವಾದ ಪರಿಣಾಮವನ್ನು ಬೀರುತ್ತದೆ. ಋತುಬಂಧಕ್ಕೆ ಮುಂಚಿತವಾಗಿ, ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಾಮಾನ್ಯವಾಗಿ ಅವರ 40 ಹರೆಯದಲ್ಲಿ ಪ್ರಾರಂಭವಾಗುತ್ತವೆ. ಇದು ಸುಮಾರು ನಾಲ್ಕು ವರ್ಷಗಳವರೆಗೆ ಅಥವಾ ಒಂದು ದಶಕದವರೆಗೆ ಇರುತ್ತದೆ. ಈ ಅವಧಿಯು ಗಮನಾರ್ಹವಾದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಪರಿವರ್ತನೆಯ ಸಮಯದಲ್ಲಿ, ಖಿನ್ನತೆಯ ಸಂಭವವು ದ್ವಿಗುಣಗೊಳ್ಳುತ್ತದೆ. ಮಹಿಳೆಯರು ಪ್ಯಾನಿಕ್ ಅಟ್ಯಾಕ್​ಗಳನ್ನು ಅನುಭವಿಸುವ ಸಾಧ್ಯತೆಯೂ ಇರುತ್ತದೆ.

ಒಂದು ವೇಳೆ ಒಬ್ಬರು ದೈನಂದಿನ ಜೀವನದಲ್ಲಿ ತೀವ್ರವಾದ ಪರಿಣಾಮಗಳನ್ನು ಎಡುರಿಸುತ್ತಿದ್ದಾರೆ ಎಂದಾರೆ ಅವರಿಗೆ ವೃತ್ತಿಪರ ಸಹಾಯವನ್ನು ಪಡೆಯುವಂತೆ ಸಲಹೆ ನೀಡಲಾಗುತ್ತದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಚಿಕಿತ್ಸಾ ವಿಧಾನಗಳು, ಸಮಾಲೋಚನೆ ಮತ್ತು ಅರಿವಿನ ವರ್ತನೆಯ ಚಿಕಿತ್ಸೆಗಳು ಲಭ್ಯವಿದೆ. ಇವುಗಳು ಋತುಬಂಧಕ್ಕೆ ಸಂಬಂಧಿಸಿದ ಆತಂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಗಳನ್ನು ನಿಭಾಯಿಸುತ್ತದೆ. ನಿಮ್ಮ ದೈಹಿಕ ಲಕ್ಷಣಗಳ ತೀವ್ರತೆಗೆ ಸಹ ಸಹಾಯ ಮಾಡಬಹುದು. ಒತ್ತಡದ ಮಟ್ಟವನ್ನು ನಿರ್ವಹಿಸಲು, ಧ್ಯಾನದಂತಹ ವಿಶ್ರಾಂತಿ ತಂತ್ರಗಳನ್ನು ಪ್ರಯತ್ನಿಸಬಹುದು.

ಕೆಲಸದ ಸ್ಥಳದಲ್ಲಿ ಸಂಭಾಷಣೆ ಪ್ರಾರಂಭಿಸಿ: ಋತುಬಂಧದ ಸಮಯದಲ್ಲಿ, 45 ಪ್ರತಿಶತ ಮಹಿಳೆಯರು ಕಡಿಮೆ ಉತ್ಪಾದಕತೆಯಿಂದಾಗಿ ಉದ್ಯೋಗದಲ್ಲಿ ಸಮಸ್ಯೆ ಅನುಭವಿಸುತ್ತಾರೆ. ನೀವು ಪ್ರತ್ಯೇಕತೆ, ನಿರ್ಲಿಪ್ತ ಅಥವಾ ಪ್ರೇರಣೆಯ ಕೊರತೆ ಅನುಭವಿಸುತ್ತಿದ್ದರೆ, ನಿಮ್ಮ ಸಹೋದ್ಯೋಗಿಗಳು ಮತ್ತು ಗೆಳೆಯರೊಂದಿಗೆ ಮಾತನಾಡುವುದು ನೀವು ಕೆಲಸ ಮಾಡುವಾಗ ಹೆಚ್ಚು ನಿರಾಳವಾಗಿರಲು ಸಹಾಯ ಮಾಡಬಹುದು. ನಿಮ್ಮ ದೈನಂದಿನ ಕೆಲಸದ ಸಮಯದಲ್ಲಿ ನಿಮ್ಮ ರೋಗಲಕ್ಷಣಗಳು ಹೇಗೆ ಕಾಡುತ್ತಿವೆ ಎಂಬುದರ ಕುರಿತು ಮಾತನಾಡಲು ಪ್ರಯತ್ನಿಸಿ. ಇದೇ ರೀತಿಯ ಅನುಭವಗಳನ್ನು ಹೊಂದಿರುವ ಜನರೊಂದಿಗೆ ಮಾತನಾಡಿ, ಅವರು ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನೂ ನೀವು ತಿಳಿದುಕೊಳ್ಳಬಹುದು. ಅದರ ಜೊತೆಗೆ ನಿಮಗೆ ಸಾಧ್ಯಾವಾದಾಗ ವಿರಾಮ ತೆಗೆದುಕೊಳ್ಳಿ.

ಸಮುದಾಯ ಬೆಂಬಲ ಹುಡುಕಿ: ಬೆಂಬಲ ವ್ಯವಸ್ಥೆಗಳು, ಅದು ಸ್ನೇಹಿತರು, ಕುಟುಂಬ ಅಥವಾ ನಿಮ್ಮ ಸಮುದಾಯ ಅಥವಾ ಸಾಮಾಜಿಕ ವಲಯಗಳಲ್ಲಿನ ಇತರ ಮಹಿಳೆಯರಾಗಿರಬಹುದು. ಒಂದೇ ರೀತಿಯ ಅನುಭವಗಳಿರುವ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತೊಡಗಿಸಿಕೊಳ್ಳಲು ಸಹಾಯ ಮಾಡುತ್ತವೆ. ಋತುಬಂಧದ ಪರಿವರ್ತನೆಯು ಮಹಿಳೆಯರಿಗೆ ಅತ್ಯಂತ ಸವಾಲಿನ ಸಮಯ.

ಋತುಬಂಧ ಎಲ್ಲಾ ಮಹಿಳೆಯರು ಹಾದುಹೋಗುವ ಒಂದು ನೈಸರ್ಗಿಕ ಘಟ್ಟ. ಸ್ವತಂತ್ರವಾಗಿ ನಡೆಸಲ್ಪಡುವ ಋತುಬಂಧ ಆರೈಕೆ ಕೇಂದ್ರಗಳು ನಿಮ್ಮೊಂದಿಗೆ ಆತ್ಮೀಯವಾಗಿ ಮಾತನಾಡುವುದರ ಮೂಲಕ ನಿಮಗೆ ಒತ್ತಡಗಳಿಂದ, ಮಾನಸಿಕ ಖಿನ್ನತೆಯಿಂದ ನಿವಾರಣೆ ಕೊಡಬಹುದು. ನಿಮ್ಮ ಜೀವನದ ಮುಂದಿನ ಅಧ್ಯಾಯವನ್ನು ನೀವು ಸ್ವಾಗತಿಸಿದಂತೆ ಈ ಬದಲಾವಣೆಯ ಅಲೆಯನ್ನು ನ್ಯಾವಿಗೇಟ್​ ಮಾಡಲು ಈ ಹಂತಗಳು ಸಹಾಯ ಮಾಡಬಹುದು. ಹಾಗೆಯೇ ನಮ್ಮ ಅಬಾಟ್​ನಲ್ಲಿ ನಿಮ್ಮ ಆರೋಗ್ಯ ರಕ್ಷಣೆಗೆ ಸಮಗ್ರ ಆರೈಕೆ ನೀಡಿ, ಜಿಮ್ಮ ಜೀವನವನ್ನು ಒತ್ತಮವಾಗಿಸುವ ಕಾರ್ಯವನ್ನೂ ನಾವು ಮಾಡುತ್ತೇವೆ ಎನ್ನುತ್ತಾರೆ ಅಬಾಟ್​ನ ನಿರ್ದೇಶಕ ಡಾ. ಜೆಜೋ ಕರಣ್ ಕುಮಾರ್.

ಇದನ್ನೂ ಓದಿ : ಸೆಕ್ಸ್​ ಲೈಫ್​ ಚೆನ್ನಾಗಿರಲು ಅನುಸರಿಸಿ ಈ ಟಿಪ್ಸ್​..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.