ETV Bharat / sukhibhava

ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆಯಾ ಸಿಸೇರಿಯನ್; ಸಿ - ಸೆಕ್ಷನ್ ಬಗ್ಗೆ‌ ತಿಳಿಯಲೇಬೇಕಾದ ಅಂಶಗಳಿವು..

ಮಹಿಳೆಯರ ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಸಿಸೇರಿಯನ್ ಮಾಡಿಸಿಕೊಳ್ಳುವವರ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ಗಮನಿಸಬಹುದು. ಅಂದ ಹಾಗೇ ಸಿ-ಸೆಕ್ಷನ್ ಬಗ್ಗೆ ಜನರು ತಿಳಿಯಲೇಬೇಕಾದ ಕೆಲ ಅಂಶಗಳು ಇಲ್ಲಿವೆ.

author img

By

Published : May 1, 2022, 9:55 PM IST

C - Section
ಸಿ - ಸೆಕ್ಷನ್ ಬಗ್ಗೆ‌ ತಿಳಿಯಲೇ ಬೇಕಾದ ಅಂಶಗಳು

ಬೆಂಗಳೂರು: ಇತ್ತೀಚೆಗಂತೂ ನಾರ್ಮಲ್ ಡೆಲಿವರಿಗಿಂತ ಸಿಸೇರಿಯನ್ ಹೆರಿಗೆಗಳ ಪ್ರಮಾಣವೇ ಹೆಚ್ಚಾಗುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಸಿ-ಸೆಕ್ಷನ್ ಹೆಚ್ಚಾಗಿದ್ದು, ಇದು ಸಾಮಾನ್ಯ ಎನ್ನುವಂತಾಗಿದೆ. ಅಂದಹಾಗೆ ಸಿ-ಸೆಕ್ಷನ್ ಬಗ್ಗೆ ಜನರು ತಿಳಿಯಲೇಬೇಕಾದ ಕೆಲ ಅಂಶಗಳಿವೆ. ಯಾರಿಗೆ ಸಿ-ಸೆಕ್ಷನ್ ಅಗತ್ಯ ಇದೆ? ಯಾವ ಸಂದರ್ಭದಲ್ಲಿ ಇದನ್ನ ಮಾಡಬೇಕಾಗುತ್ತೆ? ಎಂಬುದರ ಕುರಿತು ವೈದ್ಯರು ಅರಿವು ಮೂಡಿಸಿದ್ದಾರೆ.‌

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾಗಿರುವ ಡಾ. ಅರುಣಾ ಮುರುಳೀಧರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಸಾಮಾನ್ಯ ಸರ್ಜರಿಯಲ್ಲಿ ಸಿಸೇರಿಯನ್ ಸೆಕ್ಷನ್ ಕೂಡ ಒಂದು.‌ ಇದರ ಬಗ್ಗೆ ಜನರಿಗೆ ಅರಿವು ತಿಳುವಳಿಕೆ ಕೊಡುವ ಅಗತ್ಯವಿದೆ. ಗರ್ಭದಲ್ಲಿರುವ ಮಗು ಹೊರ ಬರಬೇಕಾದರೆ ಎರಡೇ ರೀತಿಯ ದಾರಿ ಇರುವುದು, ಒಂದು ಸಾಮಾನ್ಯ ಹೆರಿಗೆ ಮತ್ತೊಂದು ಸಿಸೇರಿಯನ್ ಮೂಲಕ ಬರಬೇಕಿದೆ. ಈ ನಡುವೆ ಮಹಿಳೆಯರ ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಸಿಸೇರಿಯನ್ ಮಾಡಿಸಿಕೊಳ್ಳುವವರ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ಕಾಣಬಹುದು.

ಫೋಟಿಸ್ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾಗಿರುವ ಡಾ. ಅರುಣಾ ಮುರುಳೀಧರ್

ಸ್ಥೂಲಕಾಯತೆ, ಡಯಾಬಿಟಿಸ್ ಹೊಂದಿರುವವರಿಗೆ ಸಿ-ಸೆಕ್ಷನ್ ಅನಿವಾರ್ಯ: ಸ್ಥೂಲಕಾಯತೆ, ಡಯಾಬಿಟಿಸ್ ಹಾಗೂ 35 ವರ್ಷ ಮೇಲ್ಪಟ್ಟ ಮಹಿಳೆಯರು ಗರ್ಭ ಧರಿಸುವವರಿಗೆ ಹಾಗೇ ಅವಳಿ ಮಕ್ಕಳನ್ನು ಹೊಂದಿದ್ದರು ಸಿ ಸೆಕ್ಷನ್ ಮಾಡಬೇಕಾದ ಅನಿವಾರ್ಯತೆ ಹೆಚ್ಚಾಗಿರುತ್ತದೆ. ಸಿಸೇರಿಯನ್ ಸೆಕ್ಷನ್​​ನಲ್ಲಿ ಎರಡು ರೀತಿಯಲ್ಲಿ ಇದ್ದು ಒಂದು ಎಲೆಕ್ಟಿವ್ ಪ್ಲಾನಿಂಗ್ ಮಾಡಿಕೊಳ್ಳುವುದು, ಮತ್ತೊಂದು ಎರ್ಮಜೆನ್ಸಿ ಟೈಂ ನಲ್ಲಿ ಮಾಡುವುದು.

ಈ ಎಲೆಕ್ಟಿವ್ ಪ್ಲಾನಿಂಗ್ ಸಿಸೇರಿಯನ್​ನಲ್ಲಿ ಮಗು ತಲೆ ಮೇಲೆ ಇದ್ದಾಗ, ಉಸಿರಾಟದ ತೊಂದರೆ ಇದ್ದಾಗ ಸಾಮಾನ್ಯ ಹೆರಿಗೆ ಮಾಡುವುದು ಕಷ್ಟ. ಮತ್ತೊಂದು ಎಮರ್ಜೆನ್ಸಿ ಟೈಂನಲ್ಲಿ ತಾಯಿಯ ಗರ್ಭಕೋಶ ಬಾಯಿ ಸರಿಯಾಗಿ ತೆರೆಯದೇ ಇದ್ದಾಗ, ಹೊಟ್ಟೆ ನೋವು ಬಂದರೂ ಮಗುವಿನ ತಲೆ ಹೊರಗೆ ಬರದೇ ಇದ್ದಾಗ, ಮಗುವಿನ ಹೃದಯ ಬಡಿತದಲ್ಲಿ ಏರುಪೇರು ಆದಾಗ ಸಿ ಸೆಕ್ಷನ್ ಮಾಡಲಾಗುತ್ತೆ. ಒಂದು ಅರ್ಥದಲ್ಲಿ ಸಿಸೇರಿಯನ್ ಅನ್ನೋದು ತಾಯಿ-ಮಗುವಿಗೆ ಲೈಫ್ ಸೇವಿಂಗ್ ಅಂದರೆ ತಪ್ಪಾಗಲಾರದು.

ಈ ಸಿಸೇರಿಯನ್ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ಒಂದು ತಿಂಗಳ ಅರಿವು ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತೆ.‌ ಪ್ರತಿಯೊಬ್ಬರು ಇದರ ಬಗ್ಗೆ ತಿಳಿದು ವೈದ್ಯರ ಸಲಹೆ ಮೇರೆಗೆ ಅಗತ್ಯ ಇದ್ದರಷ್ಟೇ ಸಿ-ಸೆಕ್ಷನ್ ಮೊರೆ ಹೋಗುವುದು ಒಳಿತು ಎನ್ನುತ್ತಾರೆ ಡಾ. ಅರುಣಾ ಮುರುಳೀಧರ್..

ಇದನ್ನೂ ಓದಿ: ನೃತ್ಯ ಮಾಡುತ್ತಾ ಆರೋಗ್ಯ ವೃದ್ಧಿಸಿಕೊಳ್ಳಿ: ಇಲ್ಲಿವೆ ಅತ್ಯಮೂಲ್ಯ 5 ಪ್ರಯೋಜನಗಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.